ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ : ಅರ್ಚಕರ ಹುದ್ದೆಗೆ ಅರ್ಜಿ ಆಹ್ವಾನ

|
Google Oneindia Kannada News

ಕೋಲಾರ, ಮೇ 20 : ಕೋಲಾರ ತಾಲೂಕು ಕಸಬಾ ಹೋಬಳಿ ಟಮಕ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಖಾಲಿ ಇರುವ ಅರ್ಚಕರ ಹುದ್ದೆ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ನಿಯಮಗಳ ಪ್ರಕಾರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಚನಾ ವೃತ್ತಿಯನ್ನು ಮಾಡುವಂತವ ಆಸಕ್ತಿ ಇರುವವರು 10 ದಿನಗಳೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಎಲ್ಐಸಿಯಲ್ಲಿ 8581 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಎಲ್ಐಸಿಯಲ್ಲಿ 8581 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಯು, ವಿದ್ಯಾರ್ಹತೆ ಮತ್ತು ಪೂಜಾರ್ಹತೆ ಪತ್ರ ಅಥವಾ ಸಂಬಂಧಪಟ್ಟ ಆಗಮ ಉತ್ತೀರ್ಣತಾ ಪತ್ರ ಲಗತ್ತಿಸಬೇಕು. ವಯೋಮಿತಿಯು 21 ರಿಂದ 33 ವರ್ಷವಾಗಿರಬೇಕು. ಯಾವುದೇ ಕ್ರಿಮಿನಲ್ ಅಪರಾಧವೆಸಗಿರಬಾರದು ಹಾಗೂ ನ್ಯಾಯಾಲಯದಿಂದ ದಂಡನೆಗೆ ಒಳಗಾಗಿರಬಾರದು.

Apply for priest job in Kolar Veeranjaneya Swamy temple

ಪೊಲೀಸ್ ಇಲಾಖೆಯಿಂದ ಪಡೆದ ನಿರಾಪೇಕ್ಷಣಾ ಪತ್ರ, ವೈದ್ಯಾಧಿಕಾರಿಗಳಿಂದ ದೇಹದಾಧೃಡ ಪ್ರಮಾಣ ಪತ್ರವನ್ನು ಅರ್ಜಿಯ ಜೊತೆ ಲಗತ್ತಿಸಬೇಕು.

ನೇಮಕಗೊಂಡ ಅಭ್ಯರ್ಥಿಯು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯದತ್ತಿಗಳ ಅಧಿನಿಯಮಗಳು 2002 ಸೆಕ್ಷನ್ 13 ರಲ್ಲಿನ ನಿಬಂಧನೆಗಳಿಗೆ ಬದ್ದರಾಗಿರಬೇಕು.

ಕೋಲಾರ : ಅತಿಥಿ ಶಿಕ್ಷಕ, ಉಪನ್ಯಾಸಕರ ಹುದ್ದೆಗೆ ಅರ್ಜಿ ಹಾಕಿ ಕೋಲಾರ : ಅತಿಥಿ ಶಿಕ್ಷಕ, ಉಪನ್ಯಾಸಕರ ಹುದ್ದೆಗೆ ಅರ್ಜಿ ಹಾಕಿ

2 ವರ್ಷಗಳ ಪರಿವೀಕ್ಷಣಾ ಅವಧಿ ಪೂರೈಸಬೇಕಾಗಿದ್ದು, ಈ ಅವಧಿಯಲ್ಲಿ ಅನಗತ್ಯವೆಂದು ಕಂಡುಬಂದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಸೇವೆಯಿಂದ ವಜಾಗೊಳಿಸಲಾಗುವುದು.

ಅರ್ಚಕರ ಹುದ್ದೆಗೆ ದೇವಾಲಯಕ್ಕೆ ನಿಗದಿಪಡಿಸಿರುವ ತಸ್ತೀಕ್ ಆದಾಯದ ಮೇರೆಗೆ ಸಂಭಾವನೆ ಪಾವತಿಸಲಾಗುವುದು. ಈ ಹುದ್ದೆಗೆ ಪಿಂಚಣಿ ಸೌಲಭ್ಯ ಇರುವುದಿಲ್ಲ ಹಾಗೂ ಈ ನೇಮಕಾತಿಯು ಧಾರ್ಮಿಕ ದತ್ತಿ ಆಯುಕ್ತರ ಅನುಮೋದನೆಗೆ ಒಳಪಟ್ಟಿರುತ್ತದೆ.

English summary
Applications invited for the priest job in Kolar Veeranjaneya Swamy temple. Candidates 21 to 33 year old can apply with in 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X