• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಮೊಗ್ಗ; ಗ್ರಂಥಾಲಯಗಳಿಗೆ ಮೇಲ್ವಿಚಾರಕ ಹುದ್ದೆ ಖಾಲಿ ಇದೆ

|

ಶಿವಮೊಗ್ಗ, ನವೆಂಬರ್ 26 : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಹೊಸನಗರ ತಾಲೂಕಿನಲ್ಲಿ ಗ್ರಂಥಾಲಯಗಳಿಗೆ ಮೇಲ್ವಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 14ರೊಳಗೆ ಅರ್ಜಿ ಸಲ್ಲಿಸಬೇಕು.

ಶಿಕಾರಿಪುರ, ಹೊಸನಗರ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಂಥಾಲಯಗಳಿಗೆ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ನಿಗದಿಪಡಿಸಿದ ಮೀಸಲಾತಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕಬೇಕು.

ಬೀದರ್; ಆಶಾ ಮೆಂಟರ್ ಹುದ್ದೆಗಾಗಿ ಅರ್ಜಿ ಹಾಕಿ

ಗೊದ್ದನಕೊಪ್ಪ (ಸಾಮಾನ್ಯ ಅಭ್ಯರ್ಥಿ, ಗ್ರಾಮೀಣ) ಮತ್ತು ಹೊಸನಗರ ತಾಲೂಕು ನಗರ ಮೂಡುಗೊಪ್ಪ (ಸಾಮಾನ್ಯ ಅಭ್ಯರ್ಥಿ) ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ. ಮಾಸಿಕ ಸಂಭಾವನೆ ರೂ. 7,000.

ವಿವಿಧ ಇಲಾಖೆಗಳ ನೇಮಕಾತಿ; ಅರ್ಜಿ ಹಾಕಿ

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಅಭ್ಯರ್ಥಿಗಳು ಕನಿಷ್ಠ ಎಸ್. ಎಸ್. ಎಲ್. ಸಿ. ಪಾಸಾಗಿದ್ದು, ಆಯಾ ಪಂಚಾಯತಿಗಳ ಸ್ಥಳೀಯ ನಿವಾಸಿಗಳಾಗಿರಬೇಕು. ಗ್ರಾಮ ಪಂಚಾಯಿತಿಗಳು ನಿಗದಿಪಡಿಸಿದ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ಕರ್ನಾಟಕ ಅಂಚೆ ವೃತ್ತ ನೇಮಕಾತಿ; 52 ಹುದ್ದೆಗೆ ಅರ್ಜಿ ಹಾಕಿ

ಅರ್ಜಿಯನ್ನು ಆಯಾ ಪಂಚಾಯತಿ ಕಚೇರಿಯಿಂದ ಪಡೆದು ಭರ್ತಿ ಮಾಡಿ, ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಡಿಸೆಂಬರ್ 14 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 08182-222905.

English summary
Apply for library supervisor post at Shivamogga district, Shikaripura, Hosanagar. Candidates can submit applications till December 14, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X