ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರಾವತಿ ಆಕಾಶವಾಣಿಯಲ್ಲಿ ಕೆಲಸ ಖಾಲಿ ಇದೆ

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 15 : ಆಕಾಶವಾಣಿ ಭದ್ರವಾತಿ ಕೇಂದ್ರದಲ್ಲಿ ಯುವವಾಣಿ ಕಾರ್ಯಕ್ರಮಗಳನ್ನು ನಿರೂಪಿಸಲು ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ. Assignment basis ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡಬೇಕಿದೆ.

ಧ್ವನಿ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದವರು ಮಾತ್ರ ಭದ್ರಾವತಿ ಆಕಾಶವಾಣಿ ಕೇಂದ್ರದ ಯುವವಾಣಿ ಕಾರ್ಯಕ್ರಮದ ಅವಶ್ಯಕತೆಗೆ ಅನುಗುಣವಾಗಿ ನಿಯೋಜನೆಯ ಮೇರೆಗೆ ಕೆಲಸ ಮಾಡಬೇಕು.

115 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಇಂಡಿಯನ್ ಬ್ಯಾಂಕ್‌115 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಇಂಡಿಯನ್ ಬ್ಯಾಂಕ್‌

ಕನಿಷ್ಠ ವಿದ್ಯಾರ್ಹತೆ 18 ವರ್ಷ, ಗರಿಷ್ಠ 30 ವರ್ಷಗಳು. ಅರ್ಜಿ ಸಲ್ಲಿಸುವವರು 10+2 ಮಾದರಿಯ 12ನೇ ತರಗತಿ ಅಂದರೆ ಪಿಯುಸಿ ಉತ್ತೀರ್ಣರಾಗಿರಬೇಕು. ಭದ್ರಾವತಿ ನಗರದಲ್ಲಿ ವಾಸಿಸುತ್ತಿರುವವರಿಗೆ ಹೆಚ್ಚಿನ ಆದ್ಯತೆ.

ಕರ್ನಾಟಕ; ಜಿಲ್ಲಾ ಮತ್ತು ತಾಲೂಕು ಮಟ್ಟದ ಉದ್ಯೋಗ ಮಾಹಿತಿಕರ್ನಾಟಕ; ಜಿಲ್ಲಾ ಮತ್ತು ತಾಲೂಕು ಮಟ್ಟದ ಉದ್ಯೋಗ ಮಾಹಿತಿ

Apply For Jobs In Akashvani Bhadravathi

ಕನ್ನಡ ಭಾಷೆಯ ಸ್ಪಷ್ಟ ಉಚ್ಛಾರಣೆ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಪರಿಜ್ಞಾನ, ದೈನಂದಿನ ಆಗುಹೋಗುಗಳ ಬಗ್ಗೆ ತಿಳುವಳಿಕೆ ಅತ್ಯವಶ್ಯ. ಇಂಗ್ಲಿಶ್ ಭಾಷಾ ಜ್ಞಾನ, ಕಂಪ್ಯೂಟರ್ ಜ್ಞಾನ ಆಕ್ಷೇಪಣಿಯ. ನಿರೂಪಣೆಗಾಗಿ ಮತ್ತು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಬೇಕಾಗುವ ಸಂವಹನ ಕೌಶಲ್ಯ ಹೊಂದಿರಬೇಕು.

ಈಶಾನ್ಯ ರೈಲ್ವೆ ವಿಭಾಗದಲ್ಲಿ 2590 ಹುದ್ದೆಗಳಿಗೆ ನೇಮಕಾತಿಈಶಾನ್ಯ ರೈಲ್ವೆ ವಿಭಾಗದಲ್ಲಿ 2590 ಹುದ್ದೆಗಳಿಗೆ ನೇಮಕಾತಿ

ಆಸಕ್ತರು ನಿಗದಿತ ಅರ್ಜಿಯನ್ನು ಆಕಾಶವಾಣಿ ಕೇಂದ್ರದಿಂದ ಶನಿವಾರ, ಭಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ಕಚೇರಿ ಕೆಲಸದ ವೇಳೆಯಲ್ಲಿ ಪಡೆಯಬಹುದು.

ಅರ್ಜಿ ಶುಲ್ಕವಾದ 100 ರೂ., ಹಾಗೂ ಜಿಎಸ್‌ಟಿ 18 ರೂ. ಸೇರಿಸಿ ಒಟ್ಟು 118 ರೂಪಾಯಿಗಳನ್ನು ನೈಫ್ಟ್‌ ಮೂಲಕ ಪಾವತಿಸಬೇಕು.

ಇದು ಉದ್ಯೋಗ ನೇಮಕಾತಿ ಅಲ್ಲ. ಇದು ಕೇವಲ assigning for program presentation ಕಾರ್ಯ ಮಾತ್ರ. ಅಗತ್ಯಾನುಸಾರ ಅವಕಾಶ ಕೊಡುವ ಅಥವ ಬಿಡುವ ತೀರ್ಮಾನ ಆಕಾಶವಾಣಿಯದ್ದು.

ಭರ್ತಿ ಮಾಡಿದ ಅರ್ಜಿಗಳನ್ನು ಶುಲ್ಕ ಸಂದಾಯ ಮಾಡಿದ ದಾಖಲೆಯೊಂದಿಗೆ ಸಲ್ಲಿಸಲು 30/10/2019 ಕೊನೆಯ ದಿನ.

ಅರ್ಜಿ ಸಲ್ಲಿಸಲು ವಿಳಾಸ : ನಿಲಯ ನಿರ್ದೇಶಕರು (ಕಾರ್ಯಕ್ರಮ), ಆಕಾಶವಾಣಿ, ಜೆ. ಪಿ. ಎಸ್. ಕಾಲೋನಿ, ಭದ್ರಾವತಿ 577302

English summary
Akashvani Bhadravathi invited applications for the post of anchor on assignment basis. 30/10/2019 last date for submit applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X