ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ; ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಕೊಪ್ಪಳ, ಜುಲೈ 31; ಕೊಪ್ಪಳ ಜಿಲ್ಲೆಯ ಕನಕಗಿರಿ ಮತ್ತು ಗಂಗಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಆಗಸ್ಟ್ 5 ಕೊನೆಯ ದಿನವಾಗಿದೆ.

ಕನಕಗಿರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಿಗೆ 2022-23ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಅತಿಥಿ ಬೋಧಕರ ಅವಶ್ಯಕತೆ ಇದ್ದು, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ ಜಲಸಂಪನ್ಮೂಲ ಇಲಾಖೆಯಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನವಾಗಿದೆ. ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಫಿಟ್ಟರ್ ವೃತ್ತಿಗೆ ತರಬೇತಿ ನೀಡಲು ITI/ATS/DME/BE(Mech) ವಿದ್ಯಾರ್ಹತೆ ಹೊಂದಿರಬೇಕು.

ಕೆಯುಐಡಿಎಫ್‌ಸಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಇಂಜಿನಿಯರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ ಕೆಯುಐಡಿಎಫ್‌ಸಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಇಂಜಿನಿಯರ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Apply For Guest Teacher Post Gangavathi And Kanakagiri ITI

ಜೊತೆಗೆ ಎರಡು ವರ್ಷಗಳ ಸೇವಾ ಅನುಭವವನ್ನು ಹೊಂದಿರುವುದು ಕಡ್ಡಾಯವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕನಕಗಿರಿ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9448259832.

 ಇನ್ಫೋಸಿಸ್ ಸಂಸ್ಥೆಯಲ್ಲಿ 50 ಸಾವಿರ ಹೊಸ ನೇಮಕಾತಿ! ಇನ್ಫೋಸಿಸ್ ಸಂಸ್ಥೆಯಲ್ಲಿ 50 ಸಾವಿರ ಹೊಸ ನೇಮಕಾತಿ!

ಗಂಗಾವತಿ; ಗಂಗಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಿಗೆ 2022-23 ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಅತಿಥಿ ಬೋಧಕರ ಅವಶ್ಯಕತೆ ಇದ್ದು, ಆಸಕ್ತರಿಂದ ಅರ್ಜಿ ಕರೆಯಲಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 5 ಕೊನೆಯ ದಿನ. ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಎಲೆಕ್ಟ್ರಿಷಿಯನ್ ವೃತ್ತಿಗೆ ತರಬೇತಿ ನೀಡಲು ITI/ ATS/ DEE/ BE ELECTRICAL ವಿದ್ಯಾರ್ಹತೆ ಹೊಂದಿರಬೇಕು. ಫಿಟ್ಟರ್ ವೃತ್ತಿಗೆ ತರಬೇತಿ ನೀಡಲು ITI/ ATS/ DME/ BE(Mech) ವಿದ್ಯಾರ್ಹತೆ ಹೊಂದಿರಬೇಕು.

ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವೃತ್ತಿಗೆ ತರಬೇತಿ ನೀಡಲು ITI/ ATS DE&C ವಿದ್ಯಾರ್ಹತೆ ಹೊಂದಿರಬೇಕು. ಮೆಕ್ಯಾನಿಕ್ ಮೊಟಾರ್ ವೆಹಿಕಲ್ ವೃತ್ತಿಗೆ ತರಬೇತಿ ನೀಡಲು ITI/ ATS/ DIPLOMA IN AUTOMOBILE/ DME ವಿದ್ಯಾರ್ಹತೆ ಹೊಂದಿರಬೇಕು.

ಟರ್ನರ್ ವೃತ್ತಿಗೆ ತರಬೇತಿ ನೀಡಲು ITI/ ATS/ DME/ BE(Mech)ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಎಲ್ಲ ವೃತ್ತಿಗಳಿಗೂ ಎರಡು ವರ್ಷಗಳ ಸೇವಾ ಅನುಭವವನ್ನು ಹೊಂದಿರುವುದು ಕಡ್ಡಾಯ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಂಗಾವತಿ ಇವರನ್ನು ಸಂಪರ್ಕಿಸಬಹುದು. ಕರೆ ಮಾಡಲು ಮೊಬೈಲ್ ಸಂಖ್ಯೆ 9448259832.

ಕೌಶಲ್ಯ ತರಬೇತಿಗಾಗಿ ಅರ್ಜಿ; ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮಗಳ ವತಿಯಿಂದ 2022-23ನೇ ಸಾಲಿನ ಕೌಶಲ್ಯ ತರಬೇತಿ ಯೋಜನೆಯಡಿ ಟಿಲಿವಿಷನ್ ಜರ್ನಲಿಸಂ ತರಬೇತಿ, ವಿಡಿಯೋ ಜರ್ನಲಿಸಂ, ಕ್ಯಾಮರಾಮನ್, ನಿರೂಪಣೆ, ವರದಿಗಾರಿಕೆ/ ಕಾಫಿ ಎಡಿಟರ್, ಬುಲೆಟಿಂಗ್ ಪ್ರೋಡ್ಯೂಸರ್ ತರಬೇತಿಗಳಿಗೆ ಆಸಕ್ತ ಅರ್ಹ ವಿದ್ಯಾವಂತ ನಿರುದ್ಯೋಗಿ ಯುವಕ/ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 10 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ರಂಗನಾಥ ನಿಲಯ, ಗಾಂಧಿನಗರ, 6ನೇ ತಿರುವು, 'ಎ' ಬ್ಲಾಕ್, ಶಿವಮೊಗ್ಗ, ದೂರವಾಣಿ ಸಂಖ್ಯೆ 08182-224349 ಅನ್ನು ಸಂಪರ್ಕಿಸಬಹುದು.

English summary
Applications invited for the guest teacher recruitment at government industrial training institutes (ITI) at Koppal. Candidates can apply till August 5th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X