• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ನೇಮಕಾತಿ

|

ಬೆಂಗಳೂರು, ಸೆಪ್ಟೆಂಬರ್ 13: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪೂರ್ಣಕಾಲಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತರು 18/9/2020ರೊಳಗೆ ಗೂಗಲ್ ಶೀಟ್‌ನಲ್ಲಿ ವಿವರ ಭರ್ತಿ ಮಾಡಬೇಕು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮುಖ್ಯ ಆವರಣ ಬೆಳಗಾವಿ ಮತ್ತು ಅಧೀನಕ್ಕೊಳಪಡುವ ಸ್ನಾತಕೋತ್ತರ ಕೇಂದ್ರಗಳಾದ ವಿಜಯಪುರ, ಬಾಗಲಕೋಟೆ, ಜಮಖಂಡಿ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲಾಗುತ್ತಿದೆ.

ಬೆಂಗಳೂರು ಜಲಮಂಡಳಿ ನೇಮಕಾತಿ; ಸರ್ವೇಯರ್ ಹುದ್ದೆ ಭರ್ತಿ

ಕರ್ನಾಟಕ ವಿಶ್ವವಿದ್ಯಾಲಯಗಳ ಅಧಿ ನಿಯಮ 2000 ನಿಯಮಾನುಸಾರ ನೇರ ಸಂದರ್ಶನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಗೂಗಲ್ ಶೀಟ್‌ ಲಿಂಕ್ ಬಳಸಿ ವಿವರಗಳನ್ನು ಭರ್ತಿ ಮಾಡಬೇಕು. ಅರ್ಜಿ ನಮೂನೆ (ದ್ವಿ ಪ್ರತಿ) ವಿವಿ ವೆಬ್ ಸೈಟ್‌ನಿಂದ ಡೌನ್ ಲೋಡ್ ಮಾಡಿಕೊಂಡು ಸಂದರ್ಶನಕ್ಕೆ ಹಾಜರಾಗಬೇಕು.

ಕರ್ನಾಟಕ ಆರೋಗ್ಯ ಇಲಾಖೆ ನೇಮಕಾತಿ; ವಿವರಗಳು

ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿದ್ದು,ಯಾವುದೇ ಮಂಜೂರಾದ ಹುದ್ದೆಗಳಿಗೆ ವಿರುದ್ಧವಾಗಿರುವುದಿಲ್ಲ. ಈ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳಿಗೆ ವಿವಿ ಕಡೆಯಿಂದ ಯಾವುದೇ ವಿಶೇಷ ಭತ್ಯಗಳನ್ನು ನೀಡುವುದಿಲ್ಲ.

ಬಿಇಎಲ್ ನೇಮಕಾತಿ; ಸೆಪ್ಟೆಂಬರ್ 27ರ ತನಕ ಅರ್ಜಿ ಹಾಕಿ

ವಿಷಯವಾರು ನೇರ ಸಂದರ್ಶನ ದಿನಾಂಕ ಮತ್ತು ಸಮಯವನ್ನು ವಿಶ್ವವಿದ್ಯಾಲಯದ ವೆಬ್‌ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಸಂಭಾವನೆಯನ್ನು ವಿಶ್ವವಿದ್ಯಾಲಯದ ನಿಯಮಾನುಸಾರ ನೀಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮುಖ್ಯ ಆವರಣ ಬೆಳಗಾವಿ, ಸ್ನಾತಕೋತ್ತರ ಕೇಂದ್ರಗಳಾದ ವಿಜಯಪುರ/ಬಾಗಲಕೋಟೆ/ಜಮಖಂಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
Apply for 58 guest faculty vacancies in Rani Channamma university Belagavi. Eligible and interested candidates to fill google sheet till September 18, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X