ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡಿಎ ನೇಮಕಾತಿ; ಜೂನ್ 18ರೊಳಗೆ ಅರ್ಜಿ ಸಲ್ಲಿಸಿ

|
Google Oneindia Kannada News

ಬೆಂಗಳೂರು, ಮೇ 20; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು 18/6/2022 ಕೊನೆಯ ದಿನವಾಗಿದೆ.

ಬಿಡಿಎಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಒಟ್ಟು ಭರ್ತಿ ಮಾಡುತ್ತಿರುವ ಹುದ್ದೆಗಳ ಸಂಖ್ಯೆ 176.

ಎಸ್‌ಬಿಐ ಬ್ಯಾಂಕ್ ನೇಮಕಾತಿ; 641 ಹುದ್ದೆಗಳಿಗೆ ಅರ್ಜಿ ಹಾಕಿ ಎಸ್‌ಬಿಐ ಬ್ಯಾಂಕ್ ನೇಮಕಾತಿ; 641 ಹುದ್ದೆಗಳಿಗೆ ಅರ್ಜಿ ಹಾಕಿ

ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ನಗರದಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರದ ವಿವಿಧ ಇಲಾಖೆಗಳಿಂದ ನುರಿತ ನೌಕರರುಗಳನ್ನು ನಿಯೋಜನೆ ಮೇರೆಗೆ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿದೆ.

ಕೊಪ್ಪಳದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ ಕೊಪ್ಪಳದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ

ಈ ನಿಯೋಜನೆಯ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958ರ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ ಎಂದು ನೇಮಕಾತಿ ಅಧಿಸೂಚನೆ ಸ್ಪಷ್ಟಪಡಿಸಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ ನಿಯೋಜನಾ ಆದೇಶ ಪಡೆದ ಬಳಿಕ ಪ್ರಾಧಿಕಾರದಲ್ಲಿ ನಿಯೋಜನೆ ಮೇರೆಗೆ ನೇಮಿಸಿಕೊಳ್ಳಲಾಗುತ್ತದೆ.

ಕೆಎಸ್ಆರ್‌ಟಿಸಿ ಉದ್ಯೋಗ ಮಾಹಿತಿ; ತಾತ್ಕಾಲಿಕವಾಗಿ ಚಾಲಕರ ಹುದ್ದೆ ಭರ್ತಿ ಕೆಎಸ್ಆರ್‌ಟಿಸಿ ಉದ್ಯೋಗ ಮಾಹಿತಿ; ತಾತ್ಕಾಲಿಕವಾಗಿ ಚಾಲಕರ ಹುದ್ದೆ ಭರ್ತಿ

ಒಟ್ಟು ಹುದ್ದೆಗಳ ಸಂಖ್ಯೆ 176

ಒಟ್ಟು ಹುದ್ದೆಗಳ ಸಂಖ್ಯೆ 176

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಥಮ ದರ್ಜೆ ಸಹಾಯಕ 78, ದ್ವಿತೀಯ ದರ್ಜೆ ಸಹಾಯಕ 98 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ತಮ್ಮ ಇಲಾಖಾ ಮುಖ್ಯಸ್ಥರ ಮೂಲಕ ದಿನಾಂಕ 18/6/2022ರ ಒಳಗಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೋರಲಾಗಿದೆ. ಅಲ್ಲದೇ ಅರ್ಜಿಯ ಒಂದು ಪ್ರತಿಯನ್ನು ನೇರವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸಲ್ಲಿಕೆ ಮಾಡಬೇಕು.

ಅರ್ಜಿಯಲ್ಲಿ ತುಂಬಬೇಕಾದ ವಿವರ

ಅರ್ಜಿಯಲ್ಲಿ ತುಂಬಬೇಕಾದ ವಿವರ

ಅರ್ಜಿಗಳನ್ನು ಸಲ್ಲಿಸುವ ನೌಕರರು ನೌಕರರ ಹೆಸರು, ಜನ್ಮ ದಿನಾಂಕ, ಸರ್ಕಾರದ ಸೇವೆಗೆ ಸೇರಿದ ದಿನಾಂಕ, ಇಲಾಖೆ, ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿರುವ ಹುದ್ದೆ ಮತ್ತು ಕಚೇರಿ ವಿಳಾಸ, ವಿದ್ಯಾರ್ಹತೆ ಮತ್ತು ಅನುಭವದ ಅವಶ್ಯಕ ಮಾಹಿತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅಭ್ಯರ್ಥಿಗಳಿಗೆ ಮಾನದಂಡಗಳು

ಅಭ್ಯರ್ಥಿಗಳಿಗೆ ಮಾನದಂಡಗಳು

ಕಳೆದ 10 ವರ್ಷಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನೇರವಾಗಿ ಪ್ರ. ದ. ಸ/ ಎ. ದ. ಸ/ ತತ್ಸಮಾನ ಹುದ್ದೆಗಳಿಗೆ ನೇಮಕವಾಗಿರುವವರಿಗೆ ಆದ್ಯತೆ ನೀಡಲಾಗುತ್ತದೆ. ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆಗಳಲ್ಲಿ ಪ್ರ. ದ. ಸ/ ಎ. ದ. ಸ ಹಾಗೂ ತತ್ಸಮಾನ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ನೌಕರರ ನಿಯೋಜನೆಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹತಾ ಮಾನದಂಡ ಪೂರೈಸುವ ಮತ್ತು ಪ್ರಾಧಿಕಾರದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಣೆ ಮಾಡಲು ಆಸಕ್ತಿ ಇರುವ ಸರ್ಕಾರದ ವಿವಿಧ ಇಲಾಖೆಯ ಅರ್ಹ ನೌಕರರು, ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕುಮಾರ ಪಾರ್ಕ್‌ ಪಶ್ಚಿಮ, ಟಿ. ಚೌಡಯ್ಯ ರಸ್ತೆ, ಬೆಂಗಳೂರು 560020 ಇವರಿಗೆ ತಮ್ಮ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಸೂಚನೆ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಬಿಡಿಎ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Recommended Video

ಎಂಥಾ ಕ್ಯಾಚ್!!!ಮ್ಯಾಕ್ಸ್ವೆಲ್ ಹಿಡಿದ ಕ್ಯಾಚ್ ನೋಡಿ ಅಚ್ಚರಿಗೊಂಡ ಕ್ರಿಕೆಟ್ ಲೋಕ | OneIndia Kannada

English summary
Bangalore Development Authority (BDA) invited applications for the post of FDA and SDA. Candidates can apply till June 18th 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X