• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಡಗು ಜಿಲ್ಲೆಯಲ್ಲಿ 120 ವೈದ್ಯರ ಹುದ್ದೆಗೆ ಅರ್ಜಿ ಹಾಕಿ

|

ಮಡಿಕೇರಿ, ಜುಲೈ 20 : ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಒಟ್ಟಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಕೋವಿಡ್ ಆಸ್ಪತ್ರೆ ಮತ್ತು ಕೋವಿಡೇತರ ಸೇವೆಗಳನ್ನು ನಿರ್ವಹಣೆ ಮಾಡುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಕೀಯ ಸೇವೆಗಳ ಉಸ್ತುವಾರಿ ನೋಡಿಕೊಳ್ಳುತ್ತದೆ.

ಕೋಲಾರ; ಆಪ್ತ ಸಮಾಲೋಚಕರ ನೇಮಕಾತಿ ನೇರ ಸಂದರ್ಶನ

ಜಿಲ್ಲೆಯಲ್ಲಿ ಈ ಎರಡೂ ಇಲಾಖೆಗಳಲ್ಲಿ ಸರ್ಕಾರದಿಂದ ಮಂಜೂರಾದ ವಿವಿಧ ವೈದ್ಯರ ಹುದ್ದೆಗಳ ಪೈಕಿ 120 ಹುದ್ದೆಗಳು ಖಾಲಿ ಇವೆ. ಸದರಿ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೂಲಕ ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಕೊಡಗು ಜಿಲ್ಲಾಡಳಿತದ ಪ್ರಕಣೆಯಲ್ಲಿ ತಿಳಿಸಲಾಗಿದೆ.

ಧಾರವಾಡ; ಜು. 20ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಕೋವಿಡ್ ಚಿಕಿತ್ಸೆ ನೀಡುವ ವೈದ್ಯರು

ಕೋವಿಡ್ ಚಿಕಿತ್ಸೆ ನೀಡುವ ವೈದ್ಯರು

ಕೋವಿಡ್ ಚಿಕಿತ್ಸೆ ನೀಡುವ ವೈದ್ಯರು. ಒಟ್ಟು 7 ಹುದ್ದೆಗಳು ಖಾಲಿ ಇದ್ದು, ಎಂಡಿ/ಎಂಎಸ್/ಎಂಬಿಬಿಎಸ್ ಪದವಿ ಪಡೆದರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ವೇತನ ಮಾಸಿಕ 60 ಸಾವಿರ ರೂ.ಗಳು.

ಜ್ಯೂನಿಯರ್ ರೆಸಿರೆಂಟ್ 23 ಹುದ್ದೆಗಳು ಖಾಲಿ ಇವೆ. ಎಂಡಿ/ಎಂಎಸ್ ಮಾಡಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮಾಸಿಕ ವೇತನ ಶ್ರೇಣಿ 47,000.

ವೈದ್ಯರ ಹುದ್ದೆಗಳು

ವೈದ್ಯರ ಹುದ್ದೆಗಳು

ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು 10 ಖಾಲಿ ಇವೆ. ಎಂಡಿ/ಎಂಎಸ್ ಮಾಡಿದವರು ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 65,000 ರೂ.ಗಳು.

ಅಸಿಸ್ಟೆಂಟ್ ಪ್ರೊಫೆಸರ್ 6 ಹುದ್ದೆಗಳು ಖಾಲಿ ಇವೆ. ಜನರಲ್ ಮೆಡಿಸಿನ್ 5, ರೇಡಿಯಾಲಾಜಿ 1 ಎಂಡಿ/ಎಸ್ ಪದವಿ ಪಡೆದವರು ಅರ್ಜಿಗಳನ್ನು ಹಾಕಬಹುದು. ವೇತನ 1,07,000 ರೂ.ಗಳು.

ಅಸಿಸ್ಟೆಂಟ್ ಪ್ರೊಫೆಸರ್ 4 ಹುದ್ದೆಗಳು. pulmonary medicine 1, ರೇಡಿಯಾಲಜಿ 1, ಇಎನ್‌ಟಿ 1, ophthalmology 1. ಎಂಡಿ/ಎಸ್. ವೇತನ 1,20,000

ಜಿಡಿಎಂಒ (ಎಂಬಿಬಿಎಸ್/ಬಿಎಎಂಸ್)

ಜಿಡಿಎಂಒ (ಎಂಬಿಬಿಎಸ್/ಬಿಎಎಂಸ್)

ಜಿಡಿಎಂಒ 10 ಹುದ್ದೆಗಳು, ವೇತನ ಎಂಬಿಬಿಎಸ್ 60,00, ಬಿಎಎಂಎಸ್ 26,000

pediatrician (ಎಂಬಿಬಿಎಸ್, ಎಂಡಿ, ಡಿಸಿಎಚ್) 6 ಹುದ್ದೆಗಳು. ವೇತನ 1,00,000

gynaecologist (ಎಂಬಿಬಿಎಸ್, ಎಂಸ್, ಜಿಡಿಒ) 5 ಹುದ್ದೆಗಳು. 1,00,000

anaesthetist (ಎಂಬಿಬಿಎಸ್, ಎಂಡಿ, ಡಿಎ) 9 ಹುದ್ದೆಗಳು. ವೇತನ 1,00,000

ಅಭ್ಯರ್ಥಿಗಳಿಗೆ ಸೂಚನೆ

ಅಭ್ಯರ್ಥಿಗಳಿಗೆ ಸೂಚನೆ

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಡಾ. ಕಾರ್ಯಪ್ಪ ಡೀನ್ ಮತ್ತು ನಿರ್ದೇಶಕರು (ಮೊಬೈಲ್ ನಂಬರ್ 9845431984) ಸಂಪರ್ಕಿಸಬಹುದು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ರಾಜೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಡಿಕೇರಿ (9448422302) ಇವರನ್ನು ಸಂಪರ್ಕಿಸಿ.

English summary
Apply for doctors post on Kodagu district. 120 post will fill in the contract basis. Candidates can apply for the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X