ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 04 : ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 'ಡಿಸ್ಟ್ರಿಕ್ಟ್ ಡಿಸಾಸ್ಟರ್ ಪ್ರೊಫೆಷನಲ್' ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರು ಗುತ್ತಿಗೆ ಅಧಾರದ ಮೇಲೆ 12 ತಿಂಗಳ ಕಾಲ ಕಾರ್ಯ ನಿರ್ವಹಿಸಬೇಕು.

ಅರ್ಜಿ ಸಲ್ಲಿಸುವವರು 65 ವರ್ಷದೊಳಗಿರಬೇಕು. ವಿಪತ್ತು ನಿರ್ವಹಣೆಯಲ್ಲಿ ಕನಿಷ್ಠ 5 ವರ್ಷ ಅನುಭವವಿರುವ ಹಾಗೂ ಯಾವುದೇ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಡಿಸಾಸ್ಟರ್ ಮ್ಯಾನೇಜ್‍ಮೆಂಟ್, ಸಾಮಾಜಿಕ ಕಾರ್ಯ, ಸಮಾಜಶಾಸ್ತ್ರ, ಕೃಷಿ, ವಾಸ್ತುಶಿಲ್ಪ, ಇಂಜಿನಿಯರಿಂಗ್ ಅರ್ಬನ್ ಪ್ಲ್ಯಾನಿಂಗ್ ಸೇರಿದಂತೆ ಇತರೆ ಸಾಮಾಜಿಕ ವಿಜ್ಞಾನ ಸ್ನಾತಕೋತ್ತರ ಪದವೀಧರರಿಗೆ ಆಯ್ಕೆಯಲ್ಲಿ ಆದ್ಯತೆ.

Apply For District Disaster Professional Post In Kalaburagi

ಅರ್ಜಿ ಸಲ್ಲಿಸುವವರು ಪಿ.ಎಚ್.ಡಿ. ಪಡೆದವರಾದರೆ ಕನಿಷ್ಠ 3 ವರ್ಷ ಅನುಭವವಿರಬೇಕು. ಅರ್ಜಿದಾರರು ವಿಪತ್ತು ನಿರ್ವಹಣೆಯ ಸವಾಲನ್ನು ಎದುರಿಸುವ ಮತ್ತು ಯೋಜನಾ ನಿರ್ವಹಣೆಯ ಕೌಶಲ್ಯ ಹೊಂದಿರಬೇಕಾಗಿರುತ್ತದೆ.

ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಭುತ್ವ. ಉತ್ತಮ ಸಂವಹನ ಕೌಶಲ್ಯ ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ವಿಪತ್ತು ನಿರ್ವಹಣೆ ಕಾಯ್ದೆ-2005 ಹಾಗೂ ರಾಷ್ಟ್ರಿಯ ವಿಪತ್ತು ನಿರ್ವಹಣೆ ಮಾರ್ಗಸೂಚಿಗಳ ಬಗ್ಗೆ ಜ್ಞಾನ ಹೊಂದಿರಬೇಕು.

ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿದ್ದು, 12 ತಿಂಗಳ ಅವಧಿಗೆ ಆಯ್ಕೆಯಾಗುವ ಅಭ್ಯರ್ಥಿ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರಿಗೆ ಮತ್ತು ಮಾನವ ನಿರ್ಮಿತ ವಿಪತ್ತುಗಳ ತಡೆಗಟ್ಟುವಿಕೆ ಸಹಾಯಕರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಮಾಸಿಕ ಸಂಭಾವನೆ 70000 ರೂ. ನೀಡಲಾಗುತ್ತದೆ.

ಆಸಕ್ತರು ಅರ್ಜಿಯೊಂದಿಗೆ, ಶೈಕ್ಷಣಿಕ ದಾಖಲಾತಿಗಳು, ಬಯೋಡಾಟಾಗಳನ್ನು ಡಿಸೆಂಬರ್ 12 ರೊಳಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ವಿಳಾಸ: ಜಿಲ್ಲಾಧಿಕಾರಿಗಳು (ವಿಪತ್ತು ನಿರ್ವಹಣಾ ಕೋಶ), ಜಿಲ್ಲಾಧಿಕಾರಿಗಳ ಕಚೇರಿ, ಕಲಬುರಗಿ.

English summary
Applications are invited for the post of District Disaster Professional in Kalaburagi district. Candidate should work under contractual basis. Interested candidate can apply till December 12, 2019 5.30 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X