ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ; ಚನ್ನಗಿರಿ & ಹರಿಹರದಲ್ಲಿ ಕೆಲಸ ಖಾಲಿ ಇದೆ

|
Google Oneindia Kannada News

ದಾವಣಗೆರೆ, ಜನವರಿ 05; ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹರಿಹರ ಪುರಸಭೆ ವತಿಯಿಂದ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಜನವರಿ 18, 2022 ಕೊನೆಯ ದಿನವಾಗಿದೆ.

ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭ: ಸಿಎಂಕಲ್ಯಾಣ ಕರ್ನಾಟಕ ಭಾಗದಲ್ಲಿ 14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭ: ಸಿಎಂ

ಅಭ್ಯರ್ಥಿಗಳನ್ನು ಗೌರವಧನದ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ2,52,902 ಲಕ್ಷ ಹುದ್ದೆಗಳು ಖಾಲಿ; ನೇಮಕಾತಿ ಬಗ್ಗೆ ಸರ್ಕಾರದ ಮಾಹಿತಿ

Apply For Community Resource Person Post At Channagiri And Harihara

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ನಗರಸಭೆ ವ್ಯಾಪ್ತಿಯಲ್ಲಿ ನೋಂದಾಯಿತ ಅರ್ಹ ಸ್ವ-ಸಹಾಯ ಸಂಘಗಳ ಸದಸ್ಯರಾಗಿರಬೇಕು. ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುತ್ತದೆ.

3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ 3000 ಭೂ ಮಾಪಕರ ನೇಮಕಾತಿ; ಜನವರಿ 21ರ ತನಕ ಅರ್ಜಿ ಹಾಕಿ

ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ ನೀಡಲಾಗುವುದು. ಮಾಸಿಕ ಗೌರವಧನ 8000 ರೂ. ಆಗಿದೆ., ಪ್ರಯಾಣ ಭತ್ಯೆ 2000 ರೂ. ವರೆಗೆ ಪಾವತಿಸಲಾಗುತ್ತದೆ.

ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ ( ಪ್ರಮಾಣ ಪತ್ರ ಅಗತ್ಯ) ನಗರಸಭೆ ವ್ಯಾಪ್ತಿಯಲ್ಲಿ ಖಾಯಂ ನಿವಾಸಿಯಾಗಿದ್ದು ಕನಿಷ್ಠ 3 ವರ್ಷ ಸ್ವ-ಸಹಾಯ ಸಂಘದಲ್ಲಿ ಸದಸ್ಯರಾಗಿರಬೇಕು. ಯಾವುದೇ ಸರ್ಕಾರಿ/ ಅರೆ ಸರ್ಕಾರಿ/ ಎನ್‌ಜಿಓಗಳಲ್ಲಿ ಉದ್ಯೋಸ್ಥರಾಗಿರಬಾರದು.

ಉತ್ತಮ ಸಂವಹನ ಕೌಶಲ್ಯದ ಜೊತೆಗೆ ಸಮುದಾಯ ಚಟುವಟಿಕೆ ತರಬೇತಿಗಳಲ್ಲಿ ಪಾಲ್ಗೊಳ್ಳುವ ಇಚ್ಚಾಶಕ್ತಿ ಹೊಂದಿರಬೇಕು. ಕಾರ್ಯನಿಮಿತ್ತ ಅಗತ್ಯವಿದ್ದಲ್ಲಿ ಹೊರ ಸಂಚಾರಕ್ಕೆ ಸಿದ್ದರಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 45 ವರ್ಷಗಳು.

ಅರ್ಹ ಮತ್ತು ಆಸಕ್ತ ಮಹಿಳಾ ಆಭ್ಯರ್ಥಿಗಳು ನಗರಸಭೆ ಕಚೇರಿ ಅವಧಿಯಲ್ಲಿ ಕಚೇರಿ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ಅರ್ಜಿಯನ್ನು ಸಲ್ಲಿಕೆ ಮಾಡಲು ಜನವರಿ 18 ಕೊನೆಯ ದಿನವಾಗಿದೆ. ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು.

ಹೈನುಗಾರಿಕೆ ತರಬೇತಿ; ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಆಧುನಿಕ ಹೈನುಗಾರಿಕೆ ಕುರಿತು ಎರಡು ದಿನದ ತರಬೇತಿಯನ್ನು ಜನವರಿ 20 ಮತ್ತು 21 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪಶು ಆಸ್ಪತ್ರೆ ಆವರಣ, ಪಿ. ಬಿ. ರಸ್ತೆಯ ಅರುಣ ಚಿತ್ರಮಂದಿರದ ಎದುರಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆ ನೀಡಲಾಗುವುದಿಲ್ಲ. ಆಸಕ್ತಿಯುಳ್ಳ ರೈತರು, ಮಹಿಳೆಯರು, ನಿರುದ್ಯೋಗ ಯುವಕ, ಯುವತಿಯರು ತರಬೇತಿ ಪಡೆಯಬಹುದು. ತರಬೇತಿಗೆ ಹಾಜರಾಗುವವರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾರ್ಸ್‍ಪೋರ್ಟ್ ಅಳತೆ ಫೋಟೊ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣಪತ್ರದ ಜೆರಾಕ್ಸ್ ಪ್ರತಿ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ದಾವಣಗೆರೆ ದೂರವಾಣಿ ಸಂಖ್ಯೆ 08192-233787 ಅನ್ನು ಸಂಪರ್ಕಿಸಬಹು ಎಂದು ಪ್ರಕಟಣೆ ತಿಳಿಸಿದೆ.

ಸ್ವಯಂ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಹಾಕಿ; ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಸೌಹಾರ್ದ ಗ್ರಾಮೀಣಾಭಿವೃದ್ಧಿ ಅಕಾಡೆಮಿ ಹಾಗೂ ಮಾತೃಭೂಮಿ ಸಂಸ್ಥೆ ಬೀದರ ಇವುಗಳ ಸಹಯೋಗದೊಂದಿಗೆ ಕನ್ನಡ ಸ್ವಯಂ ಶಿಕ್ಷಕ ಯೋಜನೆಯಡಿ ಬೀದರ ಜಿಲ್ಲೆಯ ಗಡಿಭಾಗದ 50 ಹಳ್ಳಿಗಳಲ್ಲಿ 9 ತಿಂಗಳುಗಳ ಕಾಲ ಕನ್ನಡ ಕಲಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಯೋಜನೆಯಡಿ ಸ್ವಯಂ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳ ವಯೋಮಿತಿ 20 ರಿಂದ 40 ವರ್ಷದೊಳಗಿರಬೇಕು. ಬೀದರ್ ಜಿಲ್ಲೆಯಲ್ಲಿ ಕನ್ನಡ ಕಲಿಸಲು ಆಯ್ದುಕೊಂಡಿರುವ ಗ್ರಾಮದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜನವರಿ 7 ಕೊನೆಯ ದಿನವಾಗಿದೆ. ಜನವರಿ 15 ರಂದು ನೇರ ಸಂದರ್ಶನ ನಡೆಯಲಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ https://sahithyaacademy.karnataka.gov.in ವೆಬ್‍ಸೈಟ್‍ದಿಂದ ನಿಗದಿತ ಅರ್ಜಿ ನಮೂನೆ ಹಾಗೂ ಕನ್ನಡ ಕಲಿಸುವ ಗ್ರಾಮಗಳು ಸೇರಿದಂತೆ ಮತ್ತಿತರ ವಿವರವನ್ನು ಪಡೆಯಬಹುದಾಗಿದೆ.

English summary
Applications invited for the community resource person post at Davanagere district Channagiri and Harihara taluk. Candidates can apply till January 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X