ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಕೆಲಸ ಖಾಲಿ ಇದೆ; ಜೂನ್ 7ರೊಳಗೆ ಅರ್ಜಿ ಹಾಕಿ

|
Google Oneindia Kannada News

ಮೈಸೂರು, ಮೇ 25; ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್ ( ​​ಸೆಸ್ಕಾಂ) ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು 7 ಜೂನ್ 2022ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.

ಗ್ರಾಜುಯೇಟ್ ಮತ್ತು ಟೆಕ್ನಿಶಿಯನ್ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಕರೆದಿದೆ. ಒಟ್ಟು 135 ಹುದ್ದೆಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಮೈಸೂರಿನಲ್ಲಿ ಕೆಲಸ ಮಾಡಬೇಕಿದೆ.

 ಭಾರತೀಯ ಅಂಚೆ ಇಲಾಖೆಯಲ್ಲಿ 38926 ಹುದ್ದೆಗಳಿವೆ ಅರ್ಜಿ ಹಾಕಿ ಭಾರತೀಯ ಅಂಚೆ ಇಲಾಖೆಯಲ್ಲಿ 38926 ಹುದ್ದೆಗಳಿವೆ ಅರ್ಜಿ ಹಾಕಿ

ಅಭ್ಯರ್ಥಿಗಳಿಗೆ ಮಾಸಿಕ 8 ರಿಂದ 9 ಸಾವಿರದ ತನಕ ಸ್ಟೈಫಂಡ್ ನೀಡಲಾಗುತ್ತದೆ. ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್ 70, ಸಿವಿಲ್ 10, ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್ (ಟೆಕ್ನಿಕಲ್) 45, ಸಿವಿಲ್ (ಟೆಕ್ನಿಕಲ್) 10 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಬಿಡಿಎ ನೇಮಕಾತಿ; ಜೂನ್ 18ರೊಳಗೆ ಅರ್ಜಿ ಸಲ್ಲಿಸಿಬಿಡಿಎ ನೇಮಕಾತಿ; ಜೂನ್ 18ರೊಳಗೆ ಅರ್ಜಿ ಸಲ್ಲಿಸಿ

Apply For Apprentice Post At Chamundeshwari Electricity Supply Corporation Limited

ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ (ಗ್ರಾಜುಯೇಟ್) ಹುದ್ದೆಗಳಿಗೆ ಬಿಇ, ಬಿಟೆಕ್ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್, ಸಿವಿಲ್ (ಟೆಕ್ನಿಕಲ್) ಹುದ್ದೆಗಳಿಗೆ ಡಿಪ್ಲೊಮಾ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ಎಸ್‌ಬಿಐ ಬ್ಯಾಂಕ್ ನೇಮಕಾತಿ; 641 ಹುದ್ದೆಗಳಿಗೆ ಅರ್ಜಿ ಹಾಕಿ ಎಸ್‌ಬಿಐ ಬ್ಯಾಂಕ್ ನೇಮಕಾತಿ; 641 ಹುದ್ದೆಗಳಿಗೆ ಅರ್ಜಿ ಹಾಕಿ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್ ನೇಮಕಾತಿ ನಿಯಮಗಳ ಅನ್ವಯ ಅರ್ಜಿಗಳನ್ನು ಸಲ್ಲಿಕೆ ಮಾಡಲು 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ಸಡಿಲಿಕೆ ಸಹ ಇರುತ್ತದೆ. ಅರ್ಜಿಗಳನ್ನು ಸಲ್ಲಿಕೆ ಮಾಡುವವರು ಯಾವುದೇ ಶುಲ್ಕ ಪಾವತಿ ಮಾಡಬೇಕಿಲ್ಲ.

ಮೆರಿಟ್ ಲಿಸ್ಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್ ಮುತ್ತು ಸಿವಿಲ್ (ಗ್ರಾಜುಯೇಟ್) ಅಭ್ಯರ್ಥಿಗಳಿಗೆ 9 ಸಾವಿರ ರೂ. ಹಾಗೂ ಎಲೆಕ್ಟ್ರಾನಿಕ್ & ಎಲೆಕ್ಟ್ರಾನಿಕ್ಸ್, ಸಿವಿಲ್ (ಟೆಕ್ನಿಕಲ್) ಅಭ್ಯರ್ಥಿಗಳಿಗೆ 8 ಸಾವಿರ ರೂ. ಸ್ಟೈ ಫಂಡ್ ನೀಡಲಾಗುತ್ತಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚನ ಮಾಹಿತಿಗಾಗಿ 044-22542235 ಸಂಖ್ಯೆ ಅಥವ knplacement@boat ವಿಳಾಸಕ್ಕೆ ಇ-ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವಿಳಾಸ

ನೇರ ಸಂದರ್ಶನ; ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮೇ 27ರಂದು ಬೆಳಗ್ಗೆ 10 ಗಂಟೆಗೆ ನೇರ ಸಂದರ್ಶನವನ್ನು ಆಯೋಜಿಸಿದೆ. ಈ ನೇರ ಸಂದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.

ಎಸ್. ಎಸ್. ಎಲ್. ಸಿ., ಪಿಯುಸಿ, ಐಟಿಐ, ಡಿಪ್ಲೊಮೋ, ಯಾವುದೇ ಪದವಿಗಳಲ್ಲಿ ತೇರ್ಗಡೆ ಹೊಂದಿರುವ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಆಸಕ್ತರು ತಮ್ಮ ಬಯೋಡಾಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ಹಾಜರಾಗಬಹುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08182-255293 / 9108235132 / 9482023412 ಸಂಪರ್ಕಿಸುವುದು.

ಅತಿಥಿ ಶಿಕ್ಷಕರ ನೇಮಕಾತಿ; ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಕರದಾಳ 634 (ಎಸ್.ಸಿ) ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಖಾಲಿಯಿರುವ ಕೆಳಕಂಡ ವಿಷಯಗಳ ಅತಿಥಿ ಶಿಕ್ಷಕರನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹಿಂದಿ ಮತ್ತು ಇಂಗ್ಲೀಷ್ ವಿಷಯಗಳ ಶಿಕ್ಷಕರ ಹುದ್ದೆಗೆ ಬಿ.ಎ, ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ಗಣಿತ ಮತ್ತು ವಿಜ್ಞಾನ ವಿಷಯಗಳ ಹುದ್ದೆಗಳಿಗೆ ಬಿ. ಎಸ್‍ಸಿ, ಬಿ.ಎಡ್. (ಪಿಸಿಎಮ್, ಸಿ.ಬಿ.ಝಡ್) ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 10,000 ರೂ.ಗಳ ಗೌರವಧನ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕರದಾಳ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರ ಮೊಬೈಲ್‌ಗೆ ಕರೆ ಮಾಡಬಹುದಾಗಿದೆ. ಮೊಬೈಲ್ ನಂಬರ್ 9538905666.

English summary
Chamundeshwari Electricity Supply Corporation Limited (CESC) invited application for the post of 135 graduate & technician apprentice vacancies. Candidates can apply till June 7th, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X