• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಕರೆದ ಧಾರವಾಡ ಜಿಲ್ಲಾ ಪಂಚಾಯಿತಿ

|
Google Oneindia Kannada News

ಧಾರವಾಡ, ಜನವರಿ 13; ಧಾರವಾಡ ಜಿಲ್ಲಾ ಪಂಚಾಯತಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಆಡಳಿತ ಸಹಾಯಕ ಹುದ್ದೆಗಳ ಭರ್ತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜನವರಿ 17ರೊಳಗೆ ಅರ್ಜಿ ಸಲ್ಲಿಸಬಹುದು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಗಾಗಿ ತಾಲೂಕು ಪಂಚಾಯತಿಗಳು ಪ್ರಮುಖ ಪಾತ್ರ ಹೊಂದಿವೆ.

ಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿ

ತಾಲೂಕು ಪಂಚಾಯತಿಗಳಿಗೆ ಮಂಜೂರಾದ ಬಹಳಷ್ಟು ಹುದ್ದೆಗಳು ಖಾಲಿ ಇರುವುದರಿಂದ ಯೋಜನೆಯ ಮೇಲ್ವಿಚಾರಣೆಗೆ ಅಡಚಣೆ ಉಂಟಾಗಿರುತ್ತದೆ. ಈ ಹಿನ್ನಲೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.

ಬಳ್ಳಾರಿ; ವಿವಿಧ ಹುದ್ದೆಗಳ ಭರ್ತಿ, ಆಸಕ್ತರು ಅರ್ಜಿ ಹಾಕಿಬಳ್ಳಾರಿ; ವಿವಿಧ ಹುದ್ದೆಗಳ ಭರ್ತಿ, ಆಸಕ್ತರು ಅರ್ಜಿ ಹಾಕಿ

ಧಾರವಾಡ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿದ ಅಣ್ಣಿಗೇರಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ ಮತ್ತು ನವಲಗುಂದ ತಾಲೂಕು ಪಂಚಾಯತಿಗಳಿಗೆ ತಲಾ ಒಬ್ಬರಂತೆ ಒಟ್ಟು 6 ಆಡಳಿತಾತ್ಮಕ ಸಹಾಯಕರ (Administrative Assistant) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕರೂರ್ ವೈಶ್ಯ ಬ್ಯಾಂಕ್ ನೇಮಕಾತಿ; ಜ. 31ರ ತನಕ ಅರ್ಜಿ ಹಾಕಿ ಕರೂರ್ ವೈಶ್ಯ ಬ್ಯಾಂಕ್ ನೇಮಕಾತಿ; ಜ. 31ರ ತನಕ ಅರ್ಜಿ ಹಾಕಿ

ಹೊರಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 17ರೊಳಗೆ ಜಿಲ್ಲಾ ಪಂಚಾಯತಿ ಧಾರವಾಡದ ಅಧೀಕೃತ ವೆಬ್‍ಸೈಟ್ http://zpdharwad.karnataka.gov.in ಮತ್ತು ಧಾರವಾಡ ಜಿಲ್ಲೆಯ ಅಧಿಕೃತ ವೆಬ್‍ಸೈಟ್ http://dharwad.nic.in ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಪಂಚಾಯತಿಯ ದೂರವಾಣಿ ಸಂಖ್ಯೆ 0836-2447542, 0836-2742221 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆತ್ಮ ಯೋಜನೆಯಡಿ ಅರ್ಜಿ ಆಹ್ವಾನ; 2021-22 ನೇ ಸಾಲಿನಲ್ಲಿ ಆತ್ಮ ಯೋಜನೆಯಡಿ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಧಾರವಾಡ ಕಚೇರಿಯ ಅಧೀನ ಕಚೇರಿಗಳಲ್ಲಿ ಖಾಲಿ ಇರುವ ನೇರ ಗುತ್ತಿಗೆ ಆಧಾರಿತ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಒಂದು ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೃಷಿ ಮತ್ತು ಕೃಷಿ ಸಂಬಂಧಿತ ವಿಜ್ಞಾನಗಳಲ್ಲಿ ಪದವಿ/ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು ಮತ್ತು ಕನಿಷ್ಠ 1 ವರ್ಷದ ಅನುಭವ ಹೊಂದಿರಬೇಕು. ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ನೇಮಕಾತಿ ಸಮಿತಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳು ಛಾಯಾಚಿತ್ರ ಲಗತ್ತಿಸಿದ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ, ಅನುಭವ ಪ್ರಮಾಣ ಪತ್ರ, ಆಧಾರ ಪ್ರತಿಯ ದೃಢೀಕೃತ ದಾಖಲಾತಿಗಳನ್ನು ಜನವರಿ 17ರ ಸಾಯಂಕಾಲ 4.30ರೊಳಗೆ ಧಾರವಾಡ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿ ಹುದ್ದೆ; ಶಿಶು ಅಭಿವೃದ್ದಿ ಯೋಜನೆ ಶಿವಮೊಗ್ಗ ಜಿಲ್ಲೆ ಹೊಸನಗರ ವ್ಯಾಪ್ತಿಯ ಗ್ರಾಮಗಳಲ್ಲಿ ಅಂಗನವಾಡಿ ಕಾರ್ಯಕರ್ತೆ/ ಮಿನಿ ಕಾರ್ಯಕರ್ತೆ/ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಗೌರವ ಸೇವೆಯ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಿನಿ ಅಂಗನವಾಡಿ ಕಾರ್ಯಕರ್ತೆ 2 ಹುದ್ದೆಗಳು, ದೇವಿಕೊಪ್ಪ ಮತ್ತು ಏರಿಸೀಮೆ. ಅಂಗನವಾಡಿ ಸಹಾಯಕಿಯರು 4 ಹುದ್ದೆಗಳು, ಚಂದಾಳದಿಂಬ, ಚಂದಳ್ಳಿ, ಕರಿನಗೊಳ್ಳಿ ಮತ್ತು ಕೊಳಗಿ ಗ್ರಾಮಗಳು.

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಪಾಸಾದ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಸಹಾಯಕಿಯರ ಹುದ್ದೆಗೆ 4ನೇ ತರಗತಿ ಉತ್ತೀರ್ಣ ಹೊಂದಿದ ಎಸ್‍ಎಸ್‍ಎಲ್‍ಸಿ ಒಳಗಿನ ವಿದ್ಯಾರ್ಹತೆಯುಳ್ಳ 18 ರಿಂದ 35 ವಯೋಮಿತಿಯ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಆನ್‍ಲೈನ್ ಮೂಲಕ ಫೆಬ್ರವರಿ 13 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಫಲಕ ಹಾಗೂ ಕಚೇರಿಯ ವೇಳೆಯಲ್ಲಿ ಮಾಹಿತಿ ಪಡೆಯಬಹುದು.

English summary
Dharwad zilla panchayat invited applications for administrative assistant post. Candidates can apply online till January 17, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X