ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ ಅಪ್ರೆಂಟಿಸ್ ನೇಮಕಾತಿ; 300 ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಮಾರ್ಚ್ 09: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಪ್ರೆಂಟಿಸ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಹಾಕಿ, ಮಾರ್ಚ್ 30ರಂದು ನಡೆಯುವ ಮೂಲ ದಾಖಲೆಗಳ ಪರಿಶೀಲನೆಗೆ ಖುದ್ದಾಗಿ ಹಾಜರಾಗಬೇಕು.

ಮೆಕಾನಿಕ್ ಡಿಸೆಲ್ (250 ಹುದ್ದೆಗಳು). ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿದ್ದಲ್ಲಿ 2 ವರ್ಷ. ಐಟಿಐ ತೇರ್ಗಡೆಯಾಗಿದ್ದಲ್ಲಿ 1 ವರ್ಷಗಳು. ಫಿಟ್ಟರ್ 50 ಹುದ್ದೆಗಳು. ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿದ್ದಲ್ಲಿ 2 ವರ್ಷ. ಐಟಿಐ ತೇರ್ಗಡೆಯಾಗಿದ್ದಲ್ಲಿ 1 ವರ್ಷದ ತರಬೇತಿ ಅವಧಿ ಇದೆ.

ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳ ಹಂಚಿಕೆ; ಏಪ್ರಿಲ್‌ನಿಂದ ನೇಮಕಾತಿಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳ ಹಂಚಿಕೆ; ಏಪ್ರಿಲ್‌ನಿಂದ ನೇಮಕಾತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 30/3/2022ರಂದು ಕನಿಷ್ಠ 16 ವರ್ಷ ತುಂಬಿರಬೇಕು ಮತ್ತು 26 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿಯಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವ ಐಟಿಐ (ಮೆಕಾನಿಕ್ ಡೀಸೆಲ್ ಹಾಗೂ ಫಿಟ್ಟರ್ ವೃತ್ತಿ)ಯಲ್ಲಿ ಉತ್ತೀರ್ಣರಾಗಿರಬೇಕು.

ಎನ್‌ಎಚ್‌ಎಐ ನೇಮಕಾತಿ; 15 ಜನರಲ್ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಹಾಕಿ ಎನ್‌ಎಚ್‌ಎಐ ನೇಮಕಾತಿ; 15 ಜನರಲ್ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಹಾಕಿ

Apply For 300 Apprentices Posts At BMTC

ಆಯ್ಕೆಯಾದ ಎಸ್‌ಎಸ್ಎಲ್‌ಸಿ ತೇರ್ಗಡೆಗೊಂಡ ಅಭ್ಯರ್ಥಿಗಳಿಗೆ 6 ಸಾವಿರ ರೂ. ಮತ್ತು ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ 7 ಸಾವಿರ ರೂ. ಮಾಸಿಕ ಭತ್ಯೆ ನೀಡಲಾಗುತ್ತದೆ. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ನಿರ್ದೇಶನಾಲಯ, ನವದೆಹಲಿ ಇವರು ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು www.apprenticeshipindia.gov.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಬೇಕು ಎಂದು ಸೂಚಿಸಿದ್ದಾರೆ. ಆದ್ದರಿಂದ ಅಭ್ಯರ್ಥಿಗಳು ಸದರಿ ಪೋರ್ಟಲ್‍ನಲ್ಲಿ ನೋಂದಣಿಗೊಳ್ಳುವುದು ಕಡ್ಡಾಯವಾಗಿರುತ್ತದೆ.

1095 ಹುದ್ದೆಗೆ ಅರ್ಜಿ ಕರೆದ ಐಜಿಐ ಏವಿಯೇಷನ್ 1095 ಹುದ್ದೆಗೆ ಅರ್ಜಿ ಕರೆದ ಐಜಿಐ ಏವಿಯೇಷನ್

ಅಭ್ಯರ್ಥಿಗಳು ವೆಬ್ ಸೈಟ್ ಮೂಲಕ ನೋಂದಣಿ ಮಾಡಿಕೊಂಡು, ಅರ್ಜಿ ಸಲ್ಲಿಸಿರುವ ಪ್ರತಿಯೊಂದಿಗೆ, ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳಾದ ಅಂಕಪಟ್ಟಿ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಆಧಾರ್ ಲಿಂಕ್ ಬ್ಯಾಂಕ್ ಖಾತೆಯ ಪ್ರತಿ, ಐಟಿಐ ತೇರ್ಗಡೆ ಹೊಂದಿದ್ದಲ್ಲಿ ಅದರ ಮೂಲ ಅಂಕಪಟ್ಟಿಗಳೊಂದಿಗೆ ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕಿದೆ.

30/03/2022 ರಂದು ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯ ತನಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ತರಬೇತಿ ಕೇಂದ್ರ, 2ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು-560027, ಇಲ್ಲಿಗೆ ಖುದ್ದಾಗಿ ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು. ಮೂಲ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಹ ತರಬೇಕು.

ಅಪೂರ್ಣ ಅಥವಾ ವಿಳಂಬವಾಗಿ ಸಲ್ಲಿಸುವ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸುವಾಗ ಹೆಸರು, ತಂದೆ ಹೆಸರು, ತಾಯಿ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಜಾತಿ, ಗುಂಪು ಮತ್ತು ಅಪೇಕ್ಷಿತ ವೃತ್ತಿಯ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು.

ಅಭ್ಯರ್ಥಿಗಳು ತಮ್ಮ ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಅಭ್ಯರ್ಥಿ ಸಹಿ, ಎಸ್‍ಎಸ್‍ಎಲ್‍ಸಿ ಮತ್ತು ಐಟಿಐ ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು. ವಿದ್ಯಾರ್ಹತೆ ಆಯ್ಕೆ ಮಾಡುವಾಗ 10ನೇ ತರಗತಿ ಎಂದು ಅಥವಾ ಐಟಿಐ ತೇರ್ಗಡೆಹೊಂದಿದ್ದಲ್ಲಿ ಐಟಿಐ ಎಂದು ಆಯ್ಕೆ ಮಾಡುವುದು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ವಿದ್ಯಾರ್ಹತೆ ನಮೂದಿಸಬಾರದು.

ಈಗಾಗಲೇ ಶಿಶಿಕ್ಷು ಕಾಯ್ದೆ 1961ರನ್ವಯ ಶಿಶಿಕ್ಷು ತರಬೇತಿ ಪಡೆದಿರುವವರು ಪುನಃ ಅರ್ಜಿ ಸಲ್ಲಿಸಲು ಅರ್ಹರಲ್ಲ. ಶಿಶಿಕ್ಷು ತರಬೇತಿ ಪಡೆಯುವ ಅಭ್ಯರ್ಥಿಗಳು ತಮ್ಮ ತರಬೇತಿ ಪೂರ್ಣಗೊಳಿಸಿದ ನಂತರ ಸಂಸ್ಥೆಯಲ್ಲಿ ಅವರಿಗೆ ಯಾವುದೇ ರೀತಿಯ ನೇಮಕಾತಿ ಮಾಡಿಕೊಳ್ಳುವ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ ಮತ್ತು ತರಬೇತಿ ಪಡೆಯಲು ಅರ್ಹತೆ ಪಡೆದವರು ಶಿಶಿಕ್ಷು ಕಾಯ್ದೆ 1961ರ ನಿಯಮಗಳು, ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತಾರೆ.

ತಾಂತ್ರಿಕ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ದೇಹದಾಡ್ಯತೆ ಹೊಂದಿರಬೇಕು. ಒಂದಕ್ಕಿಂತ ಹೆಚ್ಚಿನ ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರತಿಯೊಂದು ವೃತ್ತಿಗಳಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು.

Recommended Video

ರಾಹುಲ್ ಗಾಂಧಿ ಆತ್ಮಾವಲೋಕನ ಮಾದಕೊಂಡಿದ್ದು ಹೀಗೆ! | Oneindia Kannada

English summary
Bangalore Metropolitan Transport Corporation (BMTC) invited applications for 300 apprentices posts. Candidates can submit applications online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X