ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿಯಲ್ಲಿ 30 ಬಿ. ಎಫ್‌. ಟಿ. ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಕಲಬುರಗಿ, ಮಾರ್ಚ್ 19: ಕಲಬುರಗಿ ಜಿಲ್ಲಾ ಪಂಚಾಯತಿ ಬಿ. ಎಫ್‌. ಟಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಕರೆದಿದೆ. ಒಟ್ಟು 30 ಹುದ್ದೆಗಳಿದ್ದು, ಆಸಕ್ತರು ಮಾರ್ಚ್ 30ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅವಶ್ಯಕತೆಯಿರುವ ತಾಲೂಕುವಾರು ಬಿ. ಎಫ್. ಟಿ. (Bare Foot Technician) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಸಾಸಿ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.

ಕೊಪ್ಪಳ; 16 ಬಿಎಫ್‌ಟಿ ಹುದ್ದೆ ನೇಮಕಾತಿ, 12 ಸಾವಿರ ವೇತನ ಕೊಪ್ಪಳ; 16 ಬಿಎಫ್‌ಟಿ ಹುದ್ದೆ ನೇಮಕಾತಿ, 12 ಸಾವಿರ ವೇತನ

ಅಫಜಲಪುರ 7, ಚಿಂಚೋಳಿ 3, ಚಿತ್ತಾಪುರ 2, ಜೇವರ್ಗಿ 5, ಕಲಬುರಗಿ 2, ಸೇಡಂ 4, ಶಹಾಬಾದ್ 1 ಹಾಗೂ ಯಡ್ರಾಮಿ 6 ಸೇರಿದಂತೆ ಒಟ್ಟು 30 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; 402 ಹುದ್ದೆ

Apply For 30 BTF Post In Kalaburagi Under MGNREGA

ಅರ್ಜಿಗಳನ್ನು ಸಲ್ಲಿಸುವವರು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಕ್ರಿಯ ಕೆಲಸಗಾರನಾಗಿರಬೇಕು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಕ್ರಿಯ ಕೆಲಸಗಾರರು ಎಂದರೆ ಸದರಿ ವ್ಯಕ್ತಿಯ ಹಿಂದಿನ 3 ವರ್ಷಗಳಲ್ಲಿ ಕನಿಷ್ಠ 2 ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಯೋಜನೆಯಡಿ ಕೂಲಿಕಾರರನಾಗಿ ಕೆಲಸವನ್ನು ಮಾಡಿರಬೇಕು.

ವಿವಿಧ ಹುದ್ದೆಗೆ ಅರ್ಜಿ ಕರೆದ ತುಮಕೂರು ಜಿಲ್ಲಾ ಪಂಚಾಯಿತಿ ವಿವಿಧ ಹುದ್ದೆಗೆ ಅರ್ಜಿ ಕರೆದ ತುಮಕೂರು ಜಿಲ್ಲಾ ಪಂಚಾಯಿತಿ

ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 12,000 ರೂ.ಗಳ ವೇತನ ನೀಡಲಾಗುತ್ತದೆ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರಾಧಾನ್ಯತೆ ಇದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 45 ವರ್ಷದೊಳಗಿರಬೇಕು. ಬಿ. ಎಫ್. ಟಿ. ಗಳನ್ನು ಕುಶಲ ಕಾರ್ಮಿಕರೆಂದು (Skilled Laboures) ಪರಿಗಣಿಸಿ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗುತ್ತದೆ. ಇದು ಖಾಯಂ ಹುದ್ದೆಯಾಗಿರುವುದಿಲ್ಲ.

ಅರ್ಹ ಅಭ್ಯರ್ಥಿಗಳು ಕಲಬುರಗಿ ಜಿಲ್ಲಾ ಪಂಚಾಯಿತಿಯ ನರೇಗಾ ಶಾಖೆಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಮಾರ್ಚ್ 30 ರೊಳಗಾಗಿ (ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯವರಗೆ) ಅರ್ಜಿ ಸಲ್ಲಿಸಬೇಕು.

Recommended Video

Washington Sundar ಸಿಕ್ಸ್ ಹೊಡೆದರೂ ಔಟ್ ಆಗಿದ್ದೇಕೆ | Oneindia Kannada

ಅಭ್ಯರ್ಥಿಗಳಿಗೆ ಸ್ಕ್ರೀನಿಂಗ್ ಟೆಸ್ಟ್ ಪರೀಕ್ಷೆ ದಿನಾಂಕ ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9482046044, 9480866010 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
Kalaburagi zilla panchayat invited application for the post of Bare Foot Technician (BTF) under MGNREGA. Candidates can submit applications till March 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X