ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣಾಭಿವೃದ್ಧಿ ಇಲಾಖೆ ನೇಮಕಾತಿ; ಜ.20ರೊಳಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಜನವರಿ 10: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. ಆಸಕ್ತರು ಆನ್‌ಲೈನ್ ಮೂಲಕ ಜನವರಿ 20ರ ತನಕ ಅರ್ಜಿ ಸಲ್ಲಿಸಬಹುದು.

ಗ್ರಾಮೀಣಾಭಿವೃದ್ಧಿ ಆಯುಕ್ತಾಯದಲ್ಲಿ ಸಂಸದ್ ಆದರ್ಶ ಗ್ರಾಮ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಕಾರ್ಯ ನಿರ್ವಹಣೆ ಮಾಡಲು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಅಂಚೆ ಇಲಾಖೆ ನೇಮಕಾತಿ; ನಂಜನಗೂಡು ವಿಭಾಗದಲ್ಲಿ 78 ಹುದ್ದೆ ಭರ್ತಿ ಅಂಚೆ ಇಲಾಖೆ ನೇಮಕಾತಿ; ನಂಜನಗೂಡು ವಿಭಾಗದಲ್ಲಿ 78 ಹುದ್ದೆ ಭರ್ತಿ

ಸ್ಟೇಟ್ ಪ್ರಾಜೆಕ್ಟ್ ಕೋ ಆರ್ಡಿನೇಟರ್ 1 (ವೇತನ 30 ರಿಂದ 35,000) ಮತ್ತು ಅಸಿಸ್ಟೆಂಟ್ ಪಾಜೆಕ್ಟ್ ಎಕ್ಸಿಕ್ಯೂಟಿವ್ 1 ಹುದ್ದೆಗಳನ್ನು (ವೇತನ 25 ರಿಂದ 30,000) ಭರ್ತಿ ಮಾಡಲಾಗುತ್ತಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು.

ಕೇಂದ್ರೀಯ ವಿದ್ಯಾಲಯ ನೇಮಕಾತಿ, ಮೈಸೂರಲ್ಲೂ ಹುದ್ದೆಗಳಿವೆ ಕೇಂದ್ರೀಯ ವಿದ್ಯಾಲಯ ನೇಮಕಾತಿ, ಮೈಸೂರಲ್ಲೂ ಹುದ್ದೆಗಳಿವೆ

Apply For 2 Post Under MGNREGA In Karnataka

ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಈ ಮಾನದಂಡಗಳ ಆಧಾರದ ಮೇಲೆ ಶಾರ್ಟ್‌ ಲಿಸ್ಟ್ ಮಾಡಲಾಗುತ್ತದೆ. ಪದವಿಯಲ್ಲಿ ಗಳಿಸಿದ ಅಂಕಗಳು 30, ಅಧ್ಯಯನ ವರದಿಯ ಗುಣಮಟ್ಟ 10 ಮತ್ತು ಕಾರ್ಯಾನುಭವ 10 ಅಂಕಗಳು.

ಮೈಸೂರಲ್ಲಿ ಜನವರಿ 16 ರಂದು ಉದ್ಯೋಗ ಮೇಳ, ನೇರ ನೇಮಕಾತಿ ಮೈಸೂರಲ್ಲಿ ಜನವರಿ 16 ರಂದು ಉದ್ಯೋಗ ಮೇಳ, ನೇರ ನೇಮಕಾತಿ

ಶಾರ್ಟ್‌ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಕಚೇರಿಯಿಂದ ಆಯ್ಕೆ ಮಾಡಿದ ಗ್ರಾಮ ಪಂಚಾಯಿತಿಗೆ ಪ್ರಾಯೋಗಿಕ ಅಧ್ಯಯನ ನಡೆಸಲು ನಿಯೋಜನೆ ಮಾಡಲಾಗುತ್ತದೆ. ಈ ಕ್ಷೇತ್ರ ಭೇಟಿಯ ಬಳಿಕ ಅಭ್ಯರ್ಥಿ ಸಿದ್ಧಪಡಿಸಿದ ಅಧ್ಯಯನ ವರದಿಯನ್ನು ಮೌಲ್ಯ ಮಾಪನ ಸಮಿತಿಗೆ ಸಲ್ಲಿಸತಕ್ಕದ್ದು.

ಅಧ್ಯಯನ ವರದಿ ಸಲ್ಲಿಕೆ ಮಾಡಲು 10 ದಿನಗಳ ಕಾಲಾವಕಾಶ ಇರುತ್ತದೆ. ಅತ್ಯತ್ತಮ ವರದಿಯನ್ನು ಸಲ್ಲಿಸಿದ ಅಭ್ಯರ್ಥಿಯನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ, 11 ತಿಂಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.

ಕಾರ್ಯಕ್ಷಮತೆಯನ್ನು ಪರಿಗಣಿಸಿ ಮುಂದಿನ ಅವಧಿಗೆ ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್‌ಗೆ ಭೇಟಿ ನೀಡಿ

English summary
Apply online for 2 post under Sansad Adarsh Gram Yojana Scheme. Eligible and interested candidates can apply till January 20, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X