ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಎಚ್ಎಎಲ್‌ನಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ನವೆಂಬರ್ 30: ಹಿಂದೂಸ್ತಾನ್ ಏರೋನಾಟಿಕ್ಸ್​ ಲಿಮಿಟೆಡ್‌ನಲ್ಲಿ ಹಲವು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 11 ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳಿಗೆ ಡಿಪ್ಲೊಮಾ, ಜಿಎನ್​ಎಂ, ಡಿ. ಫಾರ್ಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನವೆಂಬರ್ 24ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​​ನ ಅಧಿಕೃತ ವೆಬ್​ಸೈಟ್​ hal-india.co.inಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾದ ಮಾಹಿತಿ ಇಲ್ಲಿದೆ.

Applications Invited For Trade Apprentice Posts at HAL in Bengaluru

ಸಂಸ್ಥೆ: ಹಿಂದೂಸ್ತಾನ್ ಏರೋನಾಟಿಕ್ಸ್​ ಲಿಮಿಟೆಡ್
ಹುದ್ದೆಯ ಹೆಸರು: ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್
ಒಟ್ಟು ಹುದ್ದೆಗಳು: 11
ವಿದ್ಯಾರ್ಹತೆ: ಡಿಪ್ಲೊಮಾ, ಜಿಎನ್​ಎಂ, ಡಿ.ಫಾರ್ಮಾ
ಉದ್ಯೋಗದ ಸ್ಥಳ: ಬೆಂಗಳೂರು
ವೇತನ: ಮಾಸಿಕ 15,910 ರೂ.ನಿಂದ 21,473 ರೂ.
ಅರ್ಜಿ ಸಲ್ಲಿಕೆ ವಿಧಾನ: ಆನ್​ಲೈನ್
​ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/12/2021

ಅರ್ಜಿ ಶುಲ್ಕ:
ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಹುದ್ದೆಯ ಮಾಹಿತಿ:
ಸ್ಟಾಫ್​ ನರ್ಸ್​- 07
ಫಾರ್ಮಾಸಿಸ್ಟ್​ -01
ಫಿಜಿಯೋಥೆರಪಿಸ್ಟ್​ -01
ಡ್ರೆಸ್ಸೆರ್ - 02 ಹುದ್ದೆಗಳು ಸೇರಿದಂತೆ ಒಟ್ಟು 11 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Applications Invited For Trade Apprentice Posts at HAL in Bengaluru

ವಿದ್ಯಾರ್ಹತೆ
ಸ್ಟಾಫ್​ ನರ್ಸ್: ಪಿಯುಸಿ ಜೊತೆಗೆ ಜನರಲ್​ ನರ್ಸಿಂಗ್ ಮತ್ತು ಮಿಡ್​ವೈಫರಿಯಲ್ಲಿ 3 ವರ್ಷಗಳ ಡಿಪ್ಲೋಮಾ ಮಾಡಿರಬೇಕು.

ಫಾರ್ಮಾಸಿಸ್ಟ್: ಪಿಯುಸಿ ಜೊತೆಗೆ 2 ವರ್ಷಗಳ ಪಿಜಿಯೋಥೆರಪಿ ಡಿಪ್ಲೋಮಾ ಮಾಡಿರಬೇಕು.
ಫಿಜಿಯೋಥೆರಪಿಸ್ಟ್: ಪಿಯುಸಿ ಜೊತೆಗೆ 2 ವರ್ಷಗಳ ಡಿ. ಫಾರ್ಮಾ ಮಾಡಿರಬೇಕು.
ಡ್ರೆಸ್ಸೆರ್: ಪಿಯುಸಿ ಜೊತೆಗೆ ಭಾರತೀಯ ರೆಡ್ ಕ್ರಾಸ್ ಅಥವಾ ಸೇಂಟ್ ಜಾನ್ಸ್ ಆಂಬ್ಯುಲೆನ್ಸ್ ಅಸೋಸಿಯೇಷನ್ ಅಥವಾ ಅಂತಹ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆಯಲ್ಲಿ ತರಬೇತಿಯ ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ:
ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ:
ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ವೇತನ:
ಸ್ಟಾಫ್​ ನರ್ಸ್​, ಫಾರ್ಮಾಸಿಸ್ಟ್​, ಫಿಜಿಯೋಥೆರಪಿಸ್ಟ್​, ಡ್ರೆಸ್ಸೆರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 15,910 ರೂ.ನಿಂದ 21,473 ರೂ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನ

Recommended Video

ಕೃಷಿ ಕಾಯ್ದೆ ರದ್ದತಿ ಮಸೂದೆ ಮಂಡಿಸಲು ಸರ್ಕಾರದ ಸಿದ್ಧತೆ ಹೇಗಿದೆ? | Oneindia Kannada

English summary
In Hindustan Aeronautics Limited has 11 trade apprenticeship Jobs that interested applicants can apply for.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X