ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸಂಬಂಧಿತ ತಾಂತ್ರಿಕ ತರಬೇತಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಮೇ 29: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಆರೋಗ್ಯ ವಲಯದಲ್ಲಿ ಪರಿಣತ ಸಹಾಯಕ ತಾಂತ್ರಿಕ ಸಿಬ್ಬಂದಿ ಅವಶ್ಯಕತೆ ಇರುವುದರಿಂದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಸುಮಾರು 21 ದಿನಗಳ ಕ್ಲಾಸ್‌ರೂಂ/ಆನ್‌ಲೈನ್ ತರಬೇತಿ ಹಾಗೂ 3 ತಿಂಗಳ ಆನ್‌ಜಾಬ್ ಉಚಿತ ತರಬೇತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ / ಸಮುದಾಯ ಆರೋಗ್ಯ ಕೇಂದ್ರ / ಆಸ್ಪತ್ರೆಗಳಲ್ಲಿ ಅಲ್ಪಾವಧಿ ಕೋರ್ಸ್‌ಗಳಲ್ಲಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಓದಿದವರಿಗೆ ಜನರಲ್ ಡ್ಯೂಟಿ ಅಸಿಸ್ಟೆಂಟ್, ಜನರಲ್ ಡ್ಯೂಟಿ ಅಸಿಸ್ಟೆಂಟ್ ಅಡ್ವಾನ್ಸ್ಡ್ (ಕ್ರಿಟಿಕಲ್ ಕೇರ್) ಹೋಂ ಹೆಲ್ತ್ ಏಡ್, ಮೆಡಿಕಲ್ ಎಕ್ವಿಪ್ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್, ಹೋಂ ಹೆಲ್ತ್ ಏಡ್, ಪಿಯುಸಿಯಲ್ಲಿ ವಿಜ್ಞಾನ ಕೋರ್ಸ್ ಮುಗಿಸಿದವರಿಗೆ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್ - ಬೇಸಿಕ್, ಲೆಬೊಟಾಮಿಸ್ಟ್, ಕೋರ್ಸ್‌ಗಳಲ್ಲಿ ತರಬೇತಿ ನೀಡಲಿದ್ದಾರೆ.

Applications Invited For Technical Training Course To Tackle Coronavirus

ಈ ಕೋರ್ಸ್‌ಗಳಲ್ಲಿ ತರಬೇತಿ ಪಡೆಯಲು ಇಚ್ಚಿಸುವ 18 ರಿಂದ 40 ವರ್ಷ ವಯಸ್ಸಿನ ಅರ್ಹ ಅಭ್ಯರ್ಥಿಗಳು ತಮ್ಮ ಸ್ವ ವಿವರಗಳನ್ನು 04.06.2021 ರೊಳಗೆ https://grgopage.link/vJh99 ಗೂಗಲ್ ಫಾರ್ಮ್‌ನಲ್ಲಿ ತುಂಬಿ ಕಳುಹಿಸಲು ತಿಳಿಸಿದೆ.

ಸಹಾಯಕ ತಾಂತ್ರಿಕ ಸಿಬ್ಬಂದಿ ಕೋರ್ಸ್ ತರಬೇತಿಗೆ ಅರ್ಜಿ ಆಹ್ವಾನಸಹಾಯಕ ತಾಂತ್ರಿಕ ಸಿಬ್ಬಂದಿ ಕೋರ್ಸ್ ತರಬೇತಿಗೆ ಅರ್ಜಿ ಆಹ್ವಾನ

Recommended Video

BS Yediyurappa ಕುರ್ಚಿಯಿಂದ ಕೆಳೆಗಿಳಿಯುವ ಬಗ್ಗೆ ಸ್ಪಷ್ಟನೆ | Oneindia Kannada

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ಬೆಂಗಳೂರು ನಗರ ಸಂಪರ್ಕ ಸಂಖ್ಯೆ: 9731124693 , 9945817237 ಇ ಮೇಲ್ Dvor : [email protected] ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಕೌಶಲ್ಯ ಮಿಷನ್, ಬೆಂಗಳೂರು ನಗರ ಜಿಲ್ಲೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Applications invited for technical staff course in bengaluru to tackle coronavirus. Candidates can submit applications online within June 4
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X