ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯನಗರ ಡಿಸಿ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿವೆ

|
Google Oneindia Kannada News

ಹೊಸಪೇಟೆ(ವಿಜಯನಗರ), ಮೇ 20: ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಲಯದಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‍ಲೈನ್ ಮೂಲಕವೇ ಸಲ್ಲಿಸಬೇಕಾಗಿದ್ದು, www.vijayanagara.nic.in ಅನ್‍ಲೈನ್ ತಂತ್ರಾಂಶದಲ್ಲಿ ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 30 ಆಗಿರುತ್ತದೆ.

ಅರ್ಜಿ ಸಲ್ಲಿಸಲು ಪ್ರಕ್ರಿಯೆ: ಅರ್ಜಿಯನ್ನು ಆನ್‍ಲೈನ್ ಮೂಲಕವೇ ಭರ್ತಿ ಮಾಡಿ ಸಲ್ಲಿಸತಕ್ಕದ್ದು. ವಿದ್ಯಾರ್ಹತೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರುವ ಪ್ರಮಾಣಪತ್ರ ಹಾಗೂ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇಲ್ಲದಿರುವ ಬಗ್ಗೆ ನೋಟರಿ ದಾಖಲೆಗಳನ್ನು ಕಡ್ಡಾಯವಾಗಿ ಅಪ್‍ಲೋಡ್ ಮಾಡತಕ್ಕದ್ದು. ಕಡ್ಡಾಯವಾಗಿ ಎಂ.ಎಸ್.ವರ್ಡ್, ಎಂ.ಎಸ್.ಎಕ್ಸೇಲ್, ಕನ್ನಡ ನುಡಿ ಟೈಪಿಂಗ್‍ನಲ್ಲಿ ಪರಿಣಿತರಾಗಿರತಕ್ಕದು.

Application invited for Data Entry operators in Vijayanagar DC office

ಅಸ್ಪಷ್ಟ ದಾಖಲೆಗಳನ್ನು ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.ಸ್ವೀಕೃತವಾದ ಅರ್ಜಿಗಳ ದಾಖಲಾತಿಗಳನ್ನು ಸಮಿತಿಯು ಪರಿಶೀಲಿಸಿ, ಮಾನದಂಡಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಲಾಗುವುದು.

ಬೇಕಾದ ದಾಖಲೆಗಳು: ಶೈಕ್ಷಣಿಕ ವಿದ್ಯಾರ್ಹತೆ ಬಿ.ಕಾಂ/ಬಿ.ಬಿ.ಎ./ಎಂ.ಬಿ.ಎ. ತರಗತಿಯನ್ನು ಉತ್ತೀರ್ಣರಾಗಿರತಕ್ಕದ್ದು.

ವಯೋಮಿತಿಯು ಕನಿಷ್ಠ 21 ವರ್ಷಗಳು, ಗರಿಷ್ಠ: ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 40 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 42 ವರ್ಷಗಳು, ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು ಹೊಂದಿರಬೇಕು.

ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಅರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆಂತಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನ್ಯತೆಯಿಂದ ಮುಕ್ತರಾಗಿರಬೇಕು. ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿರದ ಬಗ್ಗೆ ಹಾಗೂ ಕರ್ತವ್ಯ ನಿಷ್ಠೆ ಬಗ್ಗೆ ನೋಟರಿ ದೃಢೀಕರಣ ಸಲ್ಲಿಸಬೇಕು.

ಈ ಎಲ್ಲಾ ಷರತ್ತುಗಳನ್ನು ಪೂರೈಸಿದ ಬಗ್ಗೆ ದಾಖಲೆಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳನ್ನು ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಿ 1:5 ಅನುಪಾತದ ಪಟ್ಟಿಯನ್ನು ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.

ಅರ್ಹತಾ ಮಾನದಂಡ: ಬಿ.ಕಾಂ/ಬಿ.ಬಿ.ಎ./ಎಂ.ಬಿ.ಎ. ಉತ್ತೀರ್ಣ (ಕನಿಷ್ಟ ಅರ್ಹತೆ) ಗಳಿಸಿರುವ ಶೇ.0.3, ಎಂ.ಕಾಂ / ಎಂ.ಬಿ.ಎ. ಗಳಿಸಿರುವ ಶೇ.0.1, ಸೇವಾನುಭವ 2ವರ್ಷಕ್ಕಿಂತ ಕೆಳಗೆ 10 ಅಂಕಗಳು, ಸೇವಾನುಭವ 2 ವರ್ಷ ಮೇಲ್ಪಟ್ಟು 15 ಅಂಕಗಳು, ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 10 ಅಂಕಗಳು, ದೇವದಾಸಿ ಕುಟುಂಬದಿಂದ ಬಂದ ಅಭ್ಯರ್ಥಿಗಳು 10 ಅಂಕಗಳು, ಮಹಿಳಾ ಅಭ್ಯರ್ಥಿಗಳು 05 ಅಂಕಗಳು, ಅಂಗವಿಕಲ ಅಭ್ಯರ್ಥಿಗಳು 10 ಅಂಕಗಳು, ತಾಂತ್ರಿಕ ಕೌಶಲ್ಯ ಪರೀಕ್ಷೆ (ಎನ್.ಐ.ಸಿ.) 25 ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

ದಾಖಲಾತಿಗಳನ್ನು ಪರಿಶೀಲಿಸಿ ತಯಾರಿಸಲಿರುವ 1:5 ಅನುಪಾತದ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ತಾಂತ್ರಿಕ ಕೌಶಲ್ಯ ಪರೀಕ್ಷೆಯನ್ನು ಎನ್.ಐ.ಸಿ.ಯವರಿಂದ ಏರ್ಪಡಿಸಲಾಗುತ್ತದೆ.

ಎನ್‍ಐಸಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಅಂಕಗಳ ಜೊತೆಗೆ ಅರ್ಹತಾ ಮಾನದಂಡದಲ್ಲಿ ನಿಗದಿಪಡಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ ಹೆಚ್ಚಿನ ಅಂಕಗಳನ್ನು ಪಡೆದಿರುವವರನ್ನು ಅನುಮೋದಿತ ಹುದ್ದೆಗಳಿಗೆ ಅನುಸಾರವಾಗಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ದೂ.08394-295655 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Recommended Video

RCB ಅಭಿಮಾನಿಗಳೆಲ್ಲಾ ಈಗ Mumbai Indians ಅಭಿಮಾನಿಗಳು | Oneindia Kannada

English summary
Application invited for Data Entry operators in Vijayanagara (Hospet) DC office on contract basis. Interested candidates can apply before May 30 said DC Anirudh Shravan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X