ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

402 ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ: ಕಲ್ಯಾಣ ಕರ್ನಾಟಕಕ್ಕೆ 26 ಹುದ್ದೆ ಮೀಸಲು

|
Google Oneindia Kannada News

ಬೆಂಗಳೂರು, ಏಪ್ರಿಲ್ 3: ಖಾಲಿಯಿರುವ 402 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ (ಸಿವಿಲ್‌) ಹುದ್ದೆಗಳ ಭರ್ತಿಗೆ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಮುಂದಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶವರಿಗೆ ಪ್ರತ್ಯೇಕ ಮೀಸಲಾತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಏಪ್ರಿಲ್ 1ರಿಂದ ಮೇ 3ರ ತನಕ ಅವಕಾಶವಿದ್ದು, ಅರ್ಜಿ ಶುಲ್ಕವನ್ನು ಪಾವತಿಸಲು ಮೇ 5ರ ಅಂತಿಮ ದಿನವಾಗಿದೆ. ಸಾಮಾನ್ಯ ಕೆಟಗರಿ ಹಾಗೂ ಒಬಿಸಿ ಅಭ್ಯರ್ಥಿಗಳು 500 ರೂ. ಮತ್ತು ಎಸ್‌ಸಿ, ಎಸ್‌ಟಿ, ಕೆಟಗರಿ-1ರ ಅಭ್ಯರ್ಥಿಗಳು 250 ರೂ. ಶುಲ್ಕ ಪಾವತಿಸಬೇಕು. ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 90 ಹುದ್ದೆಗಳಿಗೆ ಅರ್ಜಿ ಆಹ್ವಾನಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 90 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ

ಸಾಮಾನ್ಯ ಕೆಟಗರಿಯವರಿಗೆ 21ರಿಂದ 30 ವರ್ಷ ಹಾಗೂ ಎಸ್‌ಸಿ, ಎಸ್‌ಟಿ, ಕೆಟಗರಿ-1ರ ಅಭ್ಯರ್ಥಿಗಳಿಗೆ 21ರಿಂದ 32 ವರ್ಷಗಳ ತನಕವೆಂದು ವಯೋಮಿತಿ ನಿಗದಿಪಡಿಸಲಾಗಿದೆ.

Jobs: Application Invite For 402 Sub Inspector Posts In Karnataka Police Dept

ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಪಿಸಿ, ಎಚ್‌ಸಿ, ಎಎಸ್‌ಐ ಹುದ್ದೆಗಳಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವವರಿಗೆ ವಯೋಮಿತಿ ವಿಭಿನ್ನವಾಗಿದೆ. ಅವರು ಸಾಮಾನ್ಯ ಕೆಟಗರಿಯವರಾಗಿದ್ದರೆ 35 ವರ್ಷದವರೆಗೆ ಹಾಗೂ ಇತರೆ ಕೆಟಗರಿಯವರಾಗಿದ್ದರೆ 40 ವರ್ಷದವರೆಗೆ ವಯೋಮಿತಿ ನಿಗದಿಯಾಗಿದೆ.

ಅರ್ಹತೆ

ಯುಜಿಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಕೋರ್ಸ್ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

Recommended Video

'ಟಫ್ ರೂಲ್ಸ್ ನಲ್ಲಿ ಯಾವುದೇ ಬದಲಾವಣೆ ಇಲ್ಲ'-ಆರೋಗ್ಯ ಸಚಿವ ಡಾ.ಕೆ ಸುಧಾಕರ್ | Oneindia Kannada

ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅಭ್ಯರ್ಥಿಗಳು ಮೊದಲು ಸಹಿಷ್ಣುತೆ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಎದುರಿಸಿ, ನಂತರ ಲಿಖಿತ ಪರೀಕ್ಷೆಯನ್ನು ಬರೆಯಬೇಕಿದೆ. ಒಟ್ಟು 402 ಹುದ್ದೆಗಳ ಪೈಕಿ 26 ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿದೆ. ಉಳಿದ 376 ಹುದ್ದೆಗಳಿಗೆ ಕಲ್ಯಾಣ ಕರ್ನಾಟಕದವರೂ ಸೇರಿದಂತೆ ಕರ್ನಾಟಕದ ಯಾವುದೇ ಪ್ರದೇಶದವರು ಅರ್ಜಿ ಸಲ್ಲಿಸಬಹುದು.

English summary
Applications are invited for filling up of 402 Police Sub-Inspector (Civil) vacancies in the Karnataka Police Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X