ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್‌ನಿಂದ 20 ಸಾವಿರ ಹುದ್ದೆ ಭರ್ತಿ; ಕನ್ನಡಿಗರಿಗೂ ಕೆಲಸ

|
Google Oneindia Kannada News

ಬೆಂಗಳೂರು, ಜೂನ್ 29 : ಅಮೆಜಾನ್ ಇಂಡಿಯಾ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಣೆ ಮಾಡಿದೆ. ಕಸ್ಟಮರ್ ಸರ್ವೀಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಕನ್ನಡ ಬರುವವರಿಗೂ ಕೆಲಸ ಸಿಗಲಿದೆ.

ಭಾರತದ ವಿವಿಧ ಭಾಷೆ ಮತ್ತು ವಿಶ್ವದ ಇತರ ರಾಷ್ಟ್ರಗಳಲ್ಲಿನ ಗ್ರಾಹಕರಿಗೆ ನೆರವಾಗಲು ತಾತ್ಕಾಲಿಕವಾಗಿ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಅಮೆಜಾನ್ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಪಿಎಸ್‌ಸಿ ನೇಮಕಾತಿ; 251 ಹುದ್ದೆಗಳಿಗೆ ಅರ್ಜಿ ಆಹ್ವಾನ ಕೆಪಿಎಸ್‌ಸಿ ನೇಮಕಾತಿ; 251 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೈದರಾಬಾದ್, ಪುಣೆ, ಕೊಯಮತ್ತೂರು, ನೋಯ್ಡಾ, ಕೋಲ್ಕತ್ತಾ, ಜೈಪುರ, ಚಂಡೀಗಢ್, ಮಂಗಳೂರು, ಇಂಧೋರ್, ಭೋಪಾಲ್ ಮತ್ತು ಲಕ್ನೋದಲ್ಲಿ ಈಗ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಎಸ್ ಬಿಐ ನೇಮಕಾತಿ 2020: 446 ಹುದ್ದೆಗಳಿಗೆ ಆರ್ಜಿ ಆಹ್ವಾನ ಎಸ್ ಬಿಐ ನೇಮಕಾತಿ 2020: 446 ಹುದ್ದೆಗಳಿಗೆ ಆರ್ಜಿ ಆಹ್ವಾನ

ಅಮೆಜಾನ್‌ ತನ್ನ ವರ್ಚುವಲ್ ಕಸ್ಟಮರ್ ಸರ್ವೀಸ್ ಯೋಜನೆಯಡಿ ಈ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಯೋಜನೆಯಡಿ ಕೆಲಸ ಪಡೆದವರಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಸಹ ನೀಡಲಾಗುತ್ತಿದೆ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ; ಕರ್ನಾಟಕದಲ್ಲಿ ಕೆಲಸ ಬ್ಯಾಂಕ್ ಆಫ್ ಬರೋಡಾ ನೇಮಕಾತಿ; ಕರ್ನಾಟಕದಲ್ಲಿ ಕೆಲಸ

ಅಭ್ಯರ್ಥಿಗಳು ಏನು ಓದಿರಬೇಕು?

ಅಭ್ಯರ್ಥಿಗಳು ಏನು ಓದಿರಬೇಕು?

ಅಸೋಸಿಯೇಟ್ ಕಸ್ಟಮರ್ ಸರ್ವೀಸ್ ಎಂಬ ಹುದ್ದೆಯಡಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ದ್ವಿತೀಯ ಪಿಯುಸಿ/12 ತರಗತಿ ಪಾಸು ಮಾಡಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಇಂಗ್ಲಿಶ್, ಹಿಂದಿ, ತಮಿಳು, ತೆಲಗು ಅಥವ ಕನ್ನಡದಲ್ಲಿ ಪ್ರಾವಿಣ್ಯತೆ ಹೊಂದಿರಬೇಕು.

ಯಾವ ಮಾದರಿಯ ಕೆಲಸ

ಯಾವ ಮಾದರಿಯ ಕೆಲಸ

ಅಸೋಸಿಯೇಟ್ ಕಸ್ಟಮರ್ ಸರ್ವೀಸ್ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಗ್ರಾಹಕರ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇ-ಮೇಲ್, ಚಾಟ್, ಸಾಮಾಜಿಕ ಜಾಲತಾಣ, ಫೋನ್ ಮೂಲಕ ಗ್ರಾಹಕರ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.

ಕೆಲಸ ಖಾಯಂ ಆಗಲಿದೆ

ಕೆಲಸ ಖಾಯಂ ಆಗಲಿದೆ

ಪ್ರಸ್ತುತ ತಾತ್ಕಾಲಿಕವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆದರೆ, ಅಭ್ಯರ್ಥಿಗಳ ಕೆಲಸದ ರೀತಿ, ಕಂಪನಿಯ ನಿಯಮಗಳ ಅನ್ವಯ ಈ ವರ್ಷದ ಅಂತ್ಯಕ್ಕೆ ಹುದ್ದೆಗಳನ್ನು ಖಾಯಂಗೊಳಿಸುವ ಅವಕಾಶವೂ ಇದೆ ಎಂದು ಅಮೆಜಾನ್ ಇಂಡಿಯಾ ಹೇಳಿದೆ.

ಬೇಡಿಕೆ ಹೆಚ್ಚುತ್ತಿದೆ

ಬೇಡಿಕೆ ಹೆಚ್ಚುತ್ತಿದೆ

"ದೇಶ, ವಿದೇಶದದಿಂದ ಕಸ್ಟಮರ್ ಸರ್ವೀಸ್ ಹುದ್ದೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಾಲಕ್ಕೆ ತಕ್ಕಂತೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಮುಂದಿನ ಆರು ತಿಂಗಳು ನೇಮಕಾತಿ ನಡೆಯಲಿದೆ" ಎಂದು ಅಮೆಜಾನ್ ಇಂಡಿಯಾದ ಕಸ್ಟಮರ್ ಸರ್ವೀಸ್ ನಿರ್ದೇಶಕ ಅಕ್ಷಯ್ ಪ್ರಭು ಹೇಳಿದ್ದಾರೆ.

English summary
Amazon India offering temporary or seasonal employment in customer service (CS). Nearly 20,000 people will get jobs in various city of India. It will also provides flexible work-from-home options.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X