ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್ ಸಂಸ್ಥೆಯಿಂದ 55,000 ಹುದ್ದೆಗಳಿಗೆ ಉದ್ಯೋಗ ಮೇಳ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02: ಅಮೆಜಾನ್​​.ಕಾಂ ಅಂತಾರಾಷ್ಟ್ರೀಯ ಕಂಪನಿಯು ಜಾಗತಿಕ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡುತ್ತಿದೆ. ಸೆಪ್ಟೆಂಬರ್ 15ರಿಂದ ವಿಶ್ವದೆಲ್ಲೆಡೆ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಂಡಿ ಜಸ್ಸಿ ಹೇಳಿದ್ದಾರೆ.

ರೀಟೇಲ್ ಹಾಗೂ ಕ್ಲೌಡ್, ಜಾಹೀರಾತು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲ ಬೇಡಿಕೆ ಹೆಚ್ಚಾಗಿದೆ. ಸಂಸ್ಥೆ ಆರಂಭಿಸಲಿರುವ ಪ್ರಾಜೆಕ್ಟ್​ ಕ್ಯುಪಿರ್​ ಜಾರಿಗೊಳಿಸಲು ಹೊಸ ನೇಮಕಾತಿ ಆರಂಭ ಅಗತ್ಯವಿದೆ. ಉಪಗ್ರಹ ಆಧಾರಿತವಾಗಿ ಬ್ರಾಡ್​​ಬ್ಯಾಂಡ್​​ ವಿಸ್ತರಣೆಗೆ ಅಮೆಜಾನ್ ಮುಂದಾಗಿದೆ.

ಜಾಗತಿಕವಾಗಿ 275,000 ಮಂದಿ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್ ಈಗ ಕೆರಿಯರ್​ ಡೇ ಮೂಲಕ ಇನ್ನೂ ಶೇ. 20 ರಷ್ಟು (55 ಸಾವಿರ ಮಂದಿ) ಟೆಕ್​ ಮತ್ತು ಕಾರ್ಪೊರೇಟ್​​ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ಕಂಪನಿಯ ಮುಖ್ಯಸ್ಥ ಆಂಡಿ ಜಸ್ಸಿ ಹೇಳಿದ್ದಾರೆ

Amazon CEO unveils 55,000 tech jobs in his first hiring push

ಈ ಪೈಕಿ 40,000 ಮಂದಿ ಸಿಬ್ಬಂದಿ ಅಮೆರಿಕದಲ್ಲಿ ನೇಮಕವಾಗಲಿದ್ದು, ಮಿಕ್ಕಂತೆ ಭಾರತ, ಜರ್ಮನಿ ಮತ್ತು ಜಪಾನ್​ ದೇಶಗಳಿಂದ ಉಳಿದವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಜಸ್ಸಿ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ನೇಮಕಾತಿ;
ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 22 ಸಾವಿರ ಮಂದಿಯನ್ನು ಭಾರತದಿಂದ ನೇಮಕ ಮಾಡಿಕೊಳ್ಳಲಾಗಿದೆ. ಭಾರತದ ವಿವಿಧ ಭಾಷೆ ಮತ್ತು ವಿಶ್ವದ ಇತರ ರಾಷ್ಟ್ರಗಳಲ್ಲಿನ ಗ್ರಾಹಕರಿಗೆ ನೆರವಾಗಲು ತಾತ್ಕಾಲಿಕವಾಗಿ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು.

ಹೈದರಾಬಾದ್, ಪುಣೆ, ಕೊಯಮತ್ತೂರು, ನೋಯ್ಡಾ, ಕೋಲ್ಕತ್ತಾ, ಜೈಪುರ, ಚಂಡೀಗಢ್, ಮಂಗಳೂರು, ಇಂಧೋರ್, ಭೋಪಾಲ್ ಮತ್ತು ಲಕ್ನೋದಲ್ಲಿ ಈಗ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಅಮೆಜಾನ್‌ ತನ್ನ ವರ್ಚುವಲ್ ಕಸ್ಟಮರ್ ಸರ್ವೀಸ್ ಯೋಜನೆಯಡಿ ಈ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಯೋಜನೆಯಡಿ ಕೆಲಸ ಪಡೆದವರಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಸಹ ನೀಡಲಾಗುತ್ತಿದೆ.

ಅಸೋಸಿಯೇಟ್ ಕಸ್ಟಮರ್ ಸರ್ವೀಸ್ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಗ್ರಾಹಕರ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇ-ಮೇಲ್, ಚಾಟ್, ಸಾಮಾಜಿಕ ಜಾಲತಾಣ, ಫೋನ್ ಮೂಲಕ ಗ್ರಾಹಕರ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾರೆ.

ಅಮೆಜಾನ್.ಇನ್ 15 ರಾಜ್ಯಗಳಲ್ಲಿ 60 ಕ್ಕೂ ಹೆಚ್ಚು ಗೋದಾಮುಗಳು ಅಥವಾ ಈಡೇರಿಕೆ ಕೇಂದ್ರಗಳನ್ನು ಹೊಂದಿದೆ. ಈಗ ಇಂಜಿನಿಯರಿಂಗ್, ಸಂಶೋಧನಾ ವಿಜ್ಞಾನ, ರೊಬೋಟಿಕ್ಸ್ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ನೇಮಕಾತಿ ನಡೆಯಲಿದೆ ಎಂದು ಅಖಿಲ್ ಸಕ್ಸೇನಾ,ಉಪಾಧ್ಯಕ್ಷ,ಗ್ರಾಹಕ ಪೂರೈಸುವ ಕಾರ್ಯಾಚರಣೆ, ಎಪಿಎಸಿ, ಅಮೆಜಾನ್ ಇಂಡಿಯಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recommended Video

ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ: ಆರ್ಥಿಕ ಬಿಕ್ಕಟ್ಟಿನಿಂದ ತುರ್ತುಪರಿಸ್ಥಿತಿ ಘೋಷಣೆ | Oneindia Kannada

ಅಮೆರಿಕದಲ್ಲಿ ಗರಿಷ್ಠವಾಗಿ ನೇಮಕ ಮಾಡಿಕೊಂಡಿರುವ ಖಾಸಗಿ ಸಂಸ್ಥೆಗಳ ಪೈಕಿ ಅಮೆಜಾನ್ ಎರಡನೆಯ ಸ್ಥಾನದಲ್ಲಿದೆ. ಈ ಹೊಸ ನೇಮಕಾತಿ ಮೂಲಕ ಉದ್ಯೋಗಿಗಳ ಸಂಖ್ಯೆಯಲ್ಲಿ ಫೇಸ್ಬುಕ್ ಹಾಗೂ ಗೂಗಲ್ ಜೊತೆ ಸ್ಪರ್ಧೆಗಿಳಿಯಲಿದೆ.

English summary
Amazon CEO unveils 55,000 tech jobs in his first hiring push across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X