• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಕಾಶವಾಣಿಯಲ್ಲಿ ಅರೆಕಾಲಿಕ ವರದಿಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಮೇ 25: ಆಕಾಶವಾಣಿಯ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗದಿಂದ ವಿವಿಧ ಜಿಲ್ಲೆಗಳಲ್ಲಿ ವರದಿಗಾರರ ಹುದ್ದೆ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಶಿವಮೊಗ್ಗ, ಹಾಸನ, ವಿಜಯನಗರ, ದಕ್ಷಿಣಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅರೆಕಾಲಿಕ ವರದಿಗಾರರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಆಲ್ ಇಂಡಿಯಾ ರೇಡಿಯೋದ ಉಪ ನಿರ್ದೇಶಕರಾದ ಟಿ.ಬಿ.ನಂಜುಂಡಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹತೆಗಳು: ಪಿ.ಜಿ ಡಿಪ್ಲೋಮಾ/ಪತ್ರಿಕೋದ್ಯಮ ಸಮೂಹ ಮಾಧ್ಯಮದಲ್ಲಿ ಪದವಿ ಹಾಗೂ ಕನಿಷ್ಠ ಎರಡು ವರ್ಷಗಳ ಮಾಧ್ಯಮ ಅನುಭವ ಹೊಂದಿರಬೇಕು.

ವಯೋಮಿತಿ: 24 ರಿಂದ 45 ವರ್ಷ (ಜಾಹಿರಾತು ಪ್ರಕಟಣೆಯ ದಿನಾಂಕಕ್ಕೆ ಅನ್ವಯಿಸುವಂತೆ) ಹೊಂದಿರಬೇಕು. ಅಭ್ಯರ್ಥಿಗಳು ಜಿಲ್ಲಾ ಮುಖ್ಯ ಕೇಂದ್ರದಲ್ಲಿ ಅಥವಾ ಜಿಲ್ಲೆಯ ಜಿಲ್ಲಾ ಮುಖ್ಯ ಕೇಂದ್ರ ಪುರಸಭೆ ವ್ಯಾಪ್ತಿಯ 10 ಕಿಲೋಮೀಟರ್ ಅಸುಪಾಸಿನ ಪ್ರದೇಶದಲ್ಲಿ ನೆಲೆಸಿರಬೇಕು.

ಅಪೇಕ್ಷಣೀಯ: ಕಂಪ್ಯೂಟರ್ ಮತ್ತು ವರ್ಡ್ ಪ್ರಾಸೆಸಿಂಗ್ ತಿಳಿವಳಿಕೆ ಇರಬೇಕು. ಸುದ್ದಿ ಸಂಗ್ರಹ ಉಪಕರಣಗಳನ್ನು ಹೊಂದಿರಬೇಕು. ವಿದ್ಯುನ್ಮಾನ ಮಾಧ್ಯಮಕ್ಕೆ ವರದಿಗಾರಿಕೆಯಲ್ಲಿ ಅನುಭವವಿರಬೇಕು. ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ಪೂರ್ಣ ವಿವರಗಳು, ಅಗತ್ಯ ದಾಖಲಾತಿಗಳ ಪ್ರತಿಗಳು ಹಾಗೂ ಅರ್ಜಿ ಶುಲ್ಕದ ಬ್ಯಾಂಕ್ ಡ್ರಾಫ್ಟ್ ಒಳಗೊಂಡ ಅರ್ಜಿಗಳನ್ನು, ರಿಜಿಸ್ಟರ್ಡ್ ಅಂಚೆ ಮೂಲಕ ಅಥವಾ ಖುದ್ದಾಗಿ ಜೂ.10ರೊಳಗೆ ತಲುಪುವಂತೆ ಕಳುಹಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ: The Deputy Director General (E) & HOO) Attn: Regional News Unit, All India Radio, Raj Bhavan Road, Bengaluru 560 001.

ಹೆಚ್ಚಿನ ಮಾಹಿತಿಗೆ ಮೊ.8317466729, 9448159726, 9482169168 ಹಾಗೂ ದೂ.080-22356344/22373000 ಗೆ ಸಂಪರ್ಕಿಸಬಹುದು ಎಂದು ನಂಜುಂಡಸ್ವಾಮಿ ತಿಳಿಸಿದ್ದಾರೆ.

ಆಲ್ ಇಂಡಿಯಾ ರೇಡಿಯೋ ಬಗ್ಗೆ:
ಆಲ್ ಇಂಡಿಯಾ ರೇಡಿಯೋ (ಆಲ್ ಇಂಡಿಯಾ ರೇಡಿಯೋ (AIR ಎಂದು ಸಂಕ್ಷಿಪ್ತ ಗೊಳಿಸಲಾಗಿದೆ)ವನ್ನು ಅಧಿಕೃತವಾಗಿ ಆಕಾಶವಾಣಿ ಎಂದು ಕರೆಯಲಾಗುತ್ತದೆ ಇದು ಭಾರತದ ರೇಡಿಯೋ ಪ್ರಸಾರ ಮಾಧ್ಯಮವಾಗಿದೆ ಹಾಗು ಪ್ರಸಾರ ಭಾರತಿಯ ವಿಭಾಗವಾಗಿದೆ. ಇದು 1936 ರಲ್ಲಿ ಸಂಸ್ಥಾಪಿಸಲಾಯಿತು.

ಇಂದು ಇದು ರಾಷ್ಟ್ರೀಯ ದೂರದರ್ಶನ ಪ್ರಸಾರವಾಗಿರುವ , ಪ್ರಸಾರ ಭಾರತಿಯ ದೂರದರ್ಶನದ ಸಹಯೋಗಿಯಂತೆ ಸೇವೆಸಲ್ಲಿಸುತ್ತಿದೆ. ಪ್ರಪಂಚದ ದೊಡ್ಡ ರೇಡಿಯೋ ಸಂಪರ್ಕಗಳಲ್ಲಿ ಆಲ್ ಇಂಡಿಯಾ ರೇಡಿಯೋ ಕೂಡ ಒಂದಾಗಿದೆ. ಇದರ ಪ್ರಧಾನ ಕಾರ್ಯಾಲಯವು ನವ ದೆಹಲಿಯ ಆಕಾಶವಾಣಿ ಭವನದಲ್ಲಿದೆ. ಆಕಾಶವಾಣಿ ಭವನ ನಾಟಕ ವಿಭಾಗ, FM ವಿಭಾಗ ಮತ್ತು ರಾಷ್ಟ್ರೀಯ ಸೇವೆಗಳಿಗೆ ಎಡೆಮಾಡಿಕೊಟ್ಟಿದೆ.

ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ, ಗರಿಷ್ಠ ಸಂಖ್ಯೆಯ ಕೇಳುಗರನ್ನು, ವಿಶೇಷವಾಗಿ ಯುವಕರನ್ನು ತಲುಪಲು ಎಐಆರ್ ನ್ಯೂಸ್‌ ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತನ್ನ ಹೆಜ್ಜೆಗುರುತನ್ನು ದೊಡ್ಡ ರೀತಿಯಲ್ಲಿ ವಿಸ್ತರಿಸಿದೆ. ಆಲ್‌ ಇಂಡಿಯಾ ರೇಡಿಯೊ ಯುಟ್ಯೂಬ್‌, ಆ್ಯಪ್‌, ವೆಬ್‌ಸೈಟ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಕೂ ನಂತಹ ವಿವಿಧ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ ನವೀಕರಣಗಳನ್ನು ಸಾಂಪ್ರದಾಯಿಕ ವಿಧಾನಗಳೊಂದಿಗೆ ಒದಗಿಸುತ್ತಿದೆ. ಆ ಮೂಲಕ ವಿಶ್ವಾಸಾರ್ಹ ಸುದ್ದಿಗಳನ್ನು ತಿಳಿಯಲು ಸರ್ವವ್ಯಾಪಿ ಮಾಧ್ಯಮವಾಗಿದೆ.

ನ್ಯೂಸ್‌ ಆನ್‌ ಏರ್‌ ಆಪ್‌ ಆಲ್‌ ಇಂಡಿಯಾ ರೇಡಿಯೊದಲ್ಲಿ 270 ಆಲ್‌ ಇಂಡಿಯಾ ರೇಡಿಯೊ ಸ್ಟ್ರೀಮ್‌ಗಳು ಭಾರತ ಮತ್ತು ಜಾಗತಿಕವಾಗಿ 190 ಕ್ಕೂ ಹೆಚ್ಚು ದೇಶಗಳಲ್ಲಿಲಭ್ಯ ವಿರುವುದರಿಂದ ನ್ಯೂಸ್‌ ಆನ್‌ ಏರ್‌ ಆಪ್‌ ಆಲ್‌ ಇಂಡಿಯಾ ರೇಡಿಯೊಗೆ ಗೇಮ್‌ ಚೇಂಜರ್‌ ಎಂದು ಸಾಬೀತಾಗಿದೆ. ನ್ಯೂಸ್‌ ಆನ್‌ ಏರ್‌ ಆಪ್‌ನಲ್ಲಿರುವ ಕೆಲವು ಎಐಆರ್ ಸ್ಟ್ರೀಮ್‌ ಗಳಾದ ವಿವಿಧ ಭಾರತಿ, ಎಐಆರ್ ಪಂಜಾಬಿ ಮತ್ತು ಎಐಆರ್ ನ್ಯೂಸ್‌ 24*7 ಈ ಅನೇಕ ದೇಶಗಳಲ್ಲಿ ಬಹಳ ಜನಪ್ರಿಯವಾಗಿವೆ.

English summary
Part time Reporter opening in All India Radio Akashavani Bengaluru, Hassan, Shivamogga, Dakshina Kannada, Mysuru, Vijayanagar center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X