ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಪೋರ್ಟ್ ಪ್ರಾಧಿಕಾರದಲ್ಲಿ 400 ಹುದ್ದೆಗೆ ನೇಮಕಾತಿ, ಬಿಎಸ್ಸಿ ಓದಿರಬೇಕು

|
Google Oneindia Kannada News

ನವದೆಹಲಿ, ಜೂನ್ 8: ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (AAI- Airports Authority of India) ಏರ್ ಟ್ರಾಫಿಕ್ ಕಂಟ್ರೋಲ್ ಜೂನಿಯರ್ ಎಕ್ಸಿಕ್ಯೂಟಿವ್ (Junior Executive- Air Traffic Control) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 400 ಹುದ್ದೆಗಳು ಖಾಲಿ ಇದ್ದು ಜೂನ್ 15ರಂದು ಅರ್ಜಿಗಳು ಲಭ್ಯ ಇರಲಿವೆ. ಜುಲೈ 14 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಎಎನ್‌ಐ ಸುದ್ದಿ ಸಂಸ್ಥೆ ನೀಡಿರುವ ವರದಿ ಪ್ರಕಾರ, 27 ವರ್ಷದೊಳಗಿನವರು ಈ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದು. ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಪದವಿಯಲ್ಲಿ ಕಲಿತಿರಬೇಕು ಎನ್ನಲಾಗಿದೆ. ಹೆಚ್ಚಿನ ಮಾಹಿತಿಗೆ ಏರ್‌ಪೋರ್ಟ್‌ಗಳ ಪ್ರಾಧಿಕಾರದ ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ.

ಕಲಬುರಗಿ; ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂನ್ 10ರಂದು ನೇರ ಸಂದರ್ಶನಕಲಬುರಗಿ; ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂನ್ 10ರಂದು ನೇರ ಸಂದರ್ಶನ

ವಿವರ:
ಸಂಸ್ಥೆ: ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
ಹುದ್ದೆ ಹೆಸರು: ಜೂನಿಯರ್ ಎಕ್ಸಿಕ್ಯೂಟಿವ್ (ಏರ್ ಟ್ರಾಫಿಕ್ ಕಂಟ್ರೋಲ್)
ಒಟ್ಟು ಹುದ್ದೆ: 400
ಅರ್ಜಿ ಸಲ್ಲಿಕೆ: ಜೂನ್ 15ರಂದು ಆರಂಭ
ಕೊನೆಯ ದಿನ: ಜುಲೈ 14, 2022

Airports Authority Recruitment, 400 Jobs Vacancy, Details How to Apply

ವಿದ್ಯಾರ್ಹತೆ:
* ಮೂರು ವರ್ಷದ ಬಿಎಸ್ಸಿ ಪದವಿಯಲ್ಲಿ ಶೇ. 60 ಅಂಕ ಪಡೆದಿರಬೇಕು. ಈ ಪದವಿಯ ಐಚ್ಛಿಕ ವಿಷಯಗಳಲ್ಲಿ ಭೌತಶಾಸ್ತ್ರ (Physics) ಮತ್ತು ಗಣಿತ (Mathematics) ಒಳಗೊಂಡಿರಬೇಕು.
* ಅಥವಾ ಯಾವುದೇ ಎಂಜಿನಿಯರಿಂಗ್ ಪದವಿ (ಬಿಇ ಅಥವಾ ಬಿಟಿ) ಆಗಿರಬೇಕು. ಎಂಜಿನಿಯರಿಂಗ್‌ನ ಯಾವುದೇ ಸೆಮಿಸ್ಟರ್‌ನಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯ ಒಳಗೊಂಡಿರಬೇಕು.

ಅನುಭವ: ಯಾವ ಪೂರ್ವಭಾವಿ ಅನುಭವದ ಅಗತ್ಯ ಇಲ್ಲ
ಕೌಶಲ್ಯ: ಅಭ್ಯರ್ಥಿಗಳು ಹತ್ತು ಮತ್ತು ಹನ್ನೆರಡನೇ ತರಗತಿಯಲ್ಲಿ ಇಂಗ್ಲೀಷ್ ಭಾಷೆಯನ್ನು ಒಂದು ವಿಷಯವಾಗಿ ಕಲಿತಿರಬೇಕು. ಇಂಗ್ಲೀಷ್ ಓದಲು, ಬರೆಯಲು ಮತ್ತು ಮಾತನಾಡಲು ತಕ್ಕಮಟ್ಟಿಗಾದರೂ ಬರಬೇಕು.
ವಯಸ್ಸಿನ ಮಿತಿ: 2022, ಜುಲೈ 14ರ ಸಮಯಕ್ಕೆ ಅಭ್ಯರ್ಥಿಯ ವಯಸ್ಸು 27 ವರ್ಷ ದಾಟಿರಬಾರದು. ಮೀಸಲು ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಹೆಚ್ಚಿಸಲಾಗಿದೆ.

IBPS RRB 2022: ನೋಂದಣಿ ಪ್ರಾರಂಭ: ಅರ್ಹತಾ ಮಾನದಂಡಗಳು, ಇತರೆ ವಿವರಗಳನ್ನು ತಿಳಿಯಿರಿIBPS RRB 2022: ನೋಂದಣಿ ಪ್ರಾರಂಭ: ಅರ್ಹತಾ ಮಾನದಂಡಗಳು, ಇತರೆ ವಿವರಗಳನ್ನು ತಿಳಿಯಿರಿ

ಸಂಬಳ: ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ವಾರ್ಷಿಕವಾಗಿ 12 ಲಕ್ಷ ರೂ ಸಂಬಳ ಸಾಧ್ಯತೆ.

ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಉತ್ತಮವಾಗಿ ಮಾಡಿದವರನ್ನು ಮೀಸಲಾತಿಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ನಂತರ ದಾಖಲೆಗಳ ಪರಿಶೀಲನೆ, ಧ್ವನಿ ಪರೀಕ್ಷೆ, ಹಿನ್ನೆಲೆ ಪರಿಶೀಲನೆ ಇತ್ಯಾದಿ ನಡೆಯಲಿದೆ.

Airports Authority Recruitment, 400 Jobs Vacancy, Details How to Apply

ಮೀಸಲಾತಿ ಎಷ್ಟೆಷ್ಟು?
ಒಟ್ಟು ಹುದ್ದೆ: 400
ಜನರಲ್ ಕೆಟಗರಿ: 163
ಆರ್ಥಿಕವಾಗಿ ಹಿಂದುಳಿದವರು: 40
ಓಬಿಸಿ: 108
ಎಸ್‌ಸಿ: 59
ಎಸ್‌ಟಿ: 30
ಅಂಗವೈಕಲ್ಯತೆಯವರು: 4

ಸಂಪರ್ಕ ಕೊಂಡಿ: https://www.aai.aero

(ಒನ್ಇಂಡಿಯಾ ಸುದ್ದಿ)

English summary
Airports Authority of India will invite applications for 400 jobs from June 15th. BSc graduates and Engineering Graduates can apply for these posts that give handsome salary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X