ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಪಥ್; ನ.1ರಿಂದ ಕರ್ನಾಟಕದಲ್ಲಿ ಮಹಿಳಾ ಅಭ್ಯರ್ಥಿ ನೇಮಕ

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಅಗ್ನಿಪಥ್ ಯೋಜನೆಯಡಿ ಕರ್ನಾಟಕದಲ್ಲಿ ನವೆಂಬರ್ 1ರಿಂದ 3ರವರೆಗೆ ಮಿಲಿಟರಿ ಪೊಲೀಸರ ಸಾಮಾನ್ಯ ಕರ್ತವ್ಯ ವಿಭಾಗದಡಿ ಮಹಿಳಾ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

ಕೇಂದ್ರ ರಕ್ಷಣಾ ಇಲಾಖೆ ಮಾಹಿತಿ ಪ್ರಕಾರ, ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಹಾಗೂ ಮಾಹೆಯ ಸ್ವಯಂ ಸೇವಕ ಮಹಿಳಾ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.

ಈ ನೇಮಕಾತಿ ಪ್ರಕ್ರಿಯೆಯು ಪ್ರಧಾನ ಕಛೇರಿ ನೇಮಕಾತಿ ವಲಯದ ಆಶ್ರಯದಲ್ಲಿ ಬೆಂಗಳೂರಿನ ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

 Agnipath scheme Women Agniveer recruitment will be start from November 1st

ಸೈನ್ಯದಲ್ಲಿನ ಸೇನಾ ಪೊಲೀಸ್ ಕಾರ್ಪ್ಸ ವಿಭಾಗದಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ (ಮಹಿಳೆಯರು) ನೋಂದಣಿಗಾಗಿ ರ್‍ಯಾಲಿ ನಡೆಸಲಾಗುತ್ತಿದೆ. ಇನ್ನು ಆಗಸ್ಟ್ 7ರಂದು ಬೆಂಗಳೂರಿನಲ್ಲಿರುವ ಹೆಡ್‌ ಕ್ವಾಟ್ರರ್ಸ್ ರಿಕ್ರೂಟಿಂಗ್ ಝೋನ್ ಹೊರಡಿಸಿದ ಅಧಿಸೂಚನೆಯಲ್ಲಿ ಸೇನೆಗೆ ನಿಗದಿತ ವಿಭಾಗಕ್ಕೆ ಸೇರ್ಪಡೆಯಾಗಲು ವಯೋಮಿತಿ, ಶೈಕ್ಷಣಿಕ ಅರ್ಹತೆ ಸೇರಿದಂತೆ ಇನ್ನಿತರ ಮಾನದಂಡಗಳ ವಿವರಗಳನ್ನು ಸಮಗ್ರವಾಗಿ ನೀಡಲಾಗಿದೆ.

ಆನ್‌ಲೈನ್‌ ಮೂಲಕ ನೋಂದಣಿ; ಮಹಿಳಾ ಅಗ್ನಿವೀರ್ ನೇಮಕಾತಿ 2022ಕ್ಕೆ ವಯಸ್ಸಿನ ಮಿತಿಯು 17.5ವರ್ಷದಿಂದ 23ವರ್ಷ ತುಂಬಿರಬೇಕು. ಆನ್‌ಲೈನ್ ನೋಂದಣಿ ಮಾಡಿಕೊಳ್ಳುವವರಿಗೆ ಆಗಸ್ಟ್ 10ರಿಂದ ಸೆಪ್ಟೆಂಬರ್ 7ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಮಹಿಳಾ ಅಭ್ಯರ್ಥಿಗಳು ತಮ್ಮ ನೋಂದಣಿಗೆ www.Joinindianarmy.nic.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

 Agnipath scheme Women Agniveer recruitment will be start from November 1st

ನೋಂದಣಿಯಲ್ಲಿ ಯಶಸ್ವಿಯಾಗುವ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್‌ಗಳನ್ನು ಅವರ ಇ-ಮೇಲ್‌ ಅಕ್ಟೋಬರ್ 12 ಇಲ್ಲವೇ 13ರಂದು ಕಳಹಿಸಲಾಗುವುದು ಎಂದು ಕೇಂದ್ರ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

English summary
Women Agniveer recruitment will be start from November 1st under Agnipath scheme at Karnataka said defence ministry source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X