India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಪಥ್: ಅಗ್ನಿವೀರರಿಗೆ ಕಂಪನಿಗಳ ಉದ್ಯೋಗದ ಭರವಸೆ

|
Google Oneindia Kannada News

ಬೆಂಗಳೂರು ಜೂ. 22: ಕೇಂದ್ರ ಸರ್ಕಾರದ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಬೆಂಬಲಿಸಿರುವ ಭಾರತ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳು ಅಗ್ನವೀರರಿಗೆ ವಿವಿಧ ವಿಭಾಗಗಳಲ್ಲಿ ಉದ್ಯೋಗ ಕೊಡುವುದಾಗಿ ಭರವಸೆ ನೀಡಿವೆ.

ದೇಶದ ಹಲವೆಡೆ ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಯೋಜನೆಯನ್ನು ಉದ್ಯಮಿಗಳಾದ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ ಮಹೀಂದ್ರಾ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಟಾಟಾ ಸನ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ ಬೆಂಬಲಿಸಿದ್ದಾರೆ. ಅಗ್ನಿವೀರರ ಅಲ್ಪಾವಧಿಯ ಸೇವೆ ನಂತರ ಅವರ ಭವಿಷ್ಯ ಏನು ಎಂಬ ಹಲವರ ಪ್ರಶ್ನೆಗೆ ಇವರಿಗೆ ಉತ್ತರ ನೀಡಿದ್ದಾರೆ.

ವಿವಿಧ ವಿಭಾಗದಲ್ಲಿ ಉದ್ಯೋಗದ ಭರವಸೆ; ಜಿಎಂಆರ್ ಇನ್ ಫ್ರಾಸ್ಟಕ್ಚರ್ ಲಿಮಿಟೆಡ್ ಕಂಪನಿ ತನ್ನ ಅಂಗ ಸಂಸ್ಥೆಯಾದ ಆರ್ ಎ ಎಕ್ಸ ಎ ಟೆಕ್ನೊ ಸೆಕ್ಯುರಿಟಿ ಸೆಲೂಷನ್ ನಲ್ಲಿ ಅಗ್ನವೀರರಿಗೆ ವಿವಿಧ ವಿಭಾಗದಲ್ಲಿ ಉದ್ಯೋಗ ನೀಡುವುದಾಗಿ ತಿಳಿಸಿದೆ. ಮ್ಯಾನ್ ಗಾರ್ಡ, ತಾಂತ್ರಿಕ ಭದ್ರತಾ ಸೇವೆ, ಅಗ್ನಿಶಾಮಕ ಸೇವೆ, ಸೈಬರ್ ಸೇವೆಯಂತಹ ವಿಭಾಗಗಳಲ್ಲಿ ಕೆಲಸ ನೀಡುತ್ತೇವೆ ಎಂದು ಭರವಸೆ ನೀಡಿದೆ.

ಅಲ್ಪಾವಧಿ ಸೇವೆ ಬಳಿಕ ಹೊಸ ವೃತ್ತಿ ಜೀವನದಲ್ಲಿ ಬದುಕು ಕಂಡುಕೊಳ್ಳಲಿರುವ ಅಗ್ನಿವೀರರಿಗೆ ಕಂಪನಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಆರ್ ಎ ಎಕ್ಸ ಎ ಟೆಕ್ನೊ ಸೆಕ್ಯುರಿಟಿ ಸೆಲೂಷನ್ ಅವರಿಗೆ ಉದ್ಯೋಗ ನೀಡಿದರೆ ಸೂಕ್ತ ಎಂದು ಭಾವಿಸಿದೆ ಎಂದು ಹೇಳಿದೆ.

ಅಗ್ನಿಪಥ್ ಉತ್ತಮ ಯೋಜನೆ; ನಾಯಕತ್ವ, ತಂಡದ ನೇತೃತ್ವ, ದೈಹಿಕ ತರಬೇತಿಯೊಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅಗ್ನಿವೀರರು ಉದ್ಯಮ ಕ್ಷೇತ್ರದಲ್ಲಿ ಅವರು ಉದ್ಯೋಗ ಸೇವೆ ನೀಡಲು ಮುಂದಾದರೆ ಮಾರುಕಟ್ಟೆಗಳಲ್ಲಿನ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ.

Agnipath Scheme: Many Companies Decids to Give High Priority to Agniveersare

ಆಯಾ ಉದ್ಯಮ ಕ್ಷೇತ್ರಗಳ ಆಡಳಿತ, ಪೂರೈಕೆ, ಸರಪಳಿ ಆಧಾರಿತ ಕಾರ್ಯ ನಿರ್ವಹಣೆ ಮತ್ತಷ್ಟು ಪರಿಣಾಮಕಾರಿಯಾಗಿ ಉತ್ತಮವಾಗಿ ನಡೆಯುತ್ತದೆ ಎಂದು ಮಹಿಂದ್ರಾ ಗೂಪ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮೂಲಕ ಅಗ್ನಿವೀರರು ಇತರ ಕ್ಷೇತ್ರಗಳನ್ನು ಮುನ್ನಡೆಸಬಲ್ಲರು ಎಂದು ಪರೋಕ್ಷವಾಗಿ ತಿಳಿಸಿದೆ.

ದೇಶದ ಭದ್ರತೆ ವಿಚಾರದಲ್ಲಿ ಅಗ್ನಿಪಥ್ ಇದೊಂದು ವೈವಿದ್ಯಮಯ ಯೋಜನೆಯಾಗಿದೆ. ಇದರಿಂದ ಉತ್ತಮ ಯುವಕರು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರ ಹೊಮ್ಮುತ್ತಾರೆ ಎಂದು ಮಹಿಂದ್ರಾ ಗ್ರೂಪ್ಸ್ ಅಭಿಪ್ರಾಯಪಟ್ಟಿದೆ.

ಇನ್ನು ಈ ಕುರಿತು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಯೋಜನೆಗೆ ಬೆಂಬಲಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಹೇಳಿಕೆ ನೀಡಲ್ಲ ಎಂದು ಹೇಳಿದ್ದಾರೆ.

English summary
Many indian's and international companies support of agnipath scheme and they provide many jobs to agniveer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X