ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿಪಥ್ ಯೋಜನೆ; ವಾಯುಪಡೆಗೆ 7.5 ಲಕ್ಷ ಅರ್ಜಿ

|
Google Oneindia Kannada News

ನವದೆಹಲಿ ಜು.6: ಅಗ್ನಿಪಥ್ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಆರಂಭಿಸಿದ ಜೂನ್ 24ರಿಂದ ಈವರೆಗೆ ಒಟ್ಟು 7.5 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಬುಧವಾರ ತಿಳಿಸಿದೆ.

ಕಳೆದ ತಿಂಗಳು ಜೂನ್ 24ರಿಂದ ಆರಂಭವಾಗಿದ್ದ ಅಗ್ನಿವೀರ್ ನೋಂದಣಿ ಪ್ರಕ್ರಿಯೆ ಮಂಗಳವಾರ ಕೊನೆಗೊಂಡಿದೆ. ಅಗ್ನಿಪಥ್ ಯೋಜನೆಯನ್ನು ಜೂನ್ 14 ರಂದು ಘೋಷಿಸಿದ ನಂತರ ಸುಮಾರು ಒಂದು ವಾರ ದೇಶದ ವಿವಿಧ ರಾಜ್ಯಗಳಲ್ಲಿ ಹಿಂಸಾಚಾರ, ಪ್ರತಿಭಟನೆಗಳು ನಡೆದಿದ್ದವು.

ಉಪರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದು ಅಧಿಸೂಚನೆ ಉಪರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದು ಅಧಿಸೂಚನೆ

ಈ ಯೋಜನೆಯಿಂದ ದೇಶದ ಯುವಕರ ಭವಿಷ್ಯಕ್ಕೆ ತೊಂದರೆ ಉಂಟಾಗಲಿದೆ ಎಂದು ಆರೋಪಿಸಲಾಗಿತ್ತು. ಪ್ರತಿ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಯೋಜನೆ ಹಿಂಪಡೆಯುವಂತೆ ಆಗ್ರಹಿಸಿದ್ದರು. ಕೇಂದ್ರ ಸರ್ಕಾರ ನಡೆ ಕುರಿತು ಟೀಕಿಸಿದ್ದರು.

Agnipath Scheme: IAF was received 7.5lakh applications

ವಾಯುಪಡೆಗೆ 7,49,899 ಅರ್ಜಿ ಸಲ್ಲಿಕೆ; ಭಾರತೀಯ ವಾಯುಪಡೆ ಅಗ್ನಿಪಥ್ ನೇಮಕಾತಿ ಯೋಜನೆ ಯಡಿ ನಡೆಸಿದ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಮಂಗಳವಾರ ಪೂರ್ಣಗೊಂಡಿದೆ ಎಂದು ಟ್ವಿಟ್ಟರ್ ಮೂಲಕ ತಿಳಿಸಿದೆ. ಈ ಹಿಂದೆ 6,31,528 ಅರ್ಜಿಗಳು ಸಲ್ಲಿಕೆ ಆಗಿದ್ದವು. ಅವುಗಳೇ ಹೆಚ್ಚು ಎನ್ನಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ ಇತರ ಸೇನಾಪಡೆಗಳ ನೇಮಕಾತಿಗಳ ಸುತ್ತಿನಲ್ಲಿ ಅತ್ಯಧಿಕ 7,49,899 ಅರ್ಜಿಗಳು ವಾಯುಪಡೆಗೆ ಸಲ್ಲಿಕೆ ಗೆ ಆಗಿವೆ ಎಂದು ತಿಳಿದು ಬಂದಿದೆ.

 5000 ಅಡಿ ಎತ್ತರದಲ್ಲಿ ಮೇಲೆ ವಿಮಾನದೊಳಗೆ ಹೊಗೆ, ಪ್ರಯಾಣಿಕರು ಹೈರಾಣ 5000 ಅಡಿ ಎತ್ತರದಲ್ಲಿ ಮೇಲೆ ವಿಮಾನದೊಳಗೆ ಹೊಗೆ, ಪ್ರಯಾಣಿಕರು ಹೈರಾಣ

ಅಗ್ನಿಪಥ್ ನೇಮಕಾತಿ ಯೋಜನೆಯಡಿ 17.5ವರ್ಷದಿಂದ 21 ವರ್ಷ ವಯಸ್ಸಿನವರೆಗಿನ ಯುವಕರು ಅರ್ಜಿ ಸಲ್ಲಿಕೆ/ ಆನ್ ಲೈನ್ ನೋಂದಣಿಗೆ ಅರ್ಹರಾಗಿರುತ್ತಾರೆ. ಇವರು ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ಅವಧಿಗೆ ಕಾರ್ಯ ನಿರ್ವಹಿಸಲಿದ್ದಾರೆ. ಆಯ್ಕೆಯಾಗುವವರ ಪೈಕಿ ಸುಮಾರು ಶೇ.25 ಜನರನ್ನು ನಾಲ್ಕು ವರ್ಷದ ಸೇವೆ ಬಳಿಕ ಪೂರ್ಣಾವಧಿ ಸೇವೆಗೆ ಮುಂದುವರಿಸಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಯೋಜನೆ ವಿರೋಧಿಗಳನ್ನು ಪರಿಗಣಿಸಲ್ಲ

ಜೊತೆಗೆ ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ದೇಶದ ಯಾವುದೇ ಮೂಲಗಳಲ್ಲಿ ಹಿಂಸಾತ್ಮಕ ಕೃತ್ಯಕ್ಕೆ ಇಲ್ಲವೇ ಪ್ರತಿಭಟನೆಗೆ ಪ್ರಚೋದನೆ ನೀಡುವ ಯುವಕರನ್ನು ಪರಿಗಣಿಸಲಾಗುವುದಿಲ್ಲ. ಅಂತವರನ್ನು ಸಶಸ್ತ್ರ ಪಡೆಗಳಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ರಕ್ಷಣಾ ಇಲಾಖೆ, ಸೇನಾಪಡೆಗಳ ಮುಖ್ಯಸ್ಥರು ತಿಳಿಸಿದ್ದಾರೆ.

Agnipath Scheme: IAF was received 7.5lakh applications

ಮೊದಲು 17.5ರಿಂದ 21ವರ್ಷ ವಯಸ್ಸಿನ ಮಿತಿ ಇಡಲಾಗಿತ್ತು. ನಂತರ ಜೂ.16ರಂದು ಅದನ್ನು ಗರಿಷ್ಠ 21 ರಿಂದ 23 ವರ್ಷಗಳಿಗೆ ಹೆಚ್ಚಿಸಲಾಯಿತು. ಬಳಿಕ ಕೇಂದ್ರ ಅರೆಸೇನಾ ಪಡೆ ಮತ್ತು ರಕ್ಷಣಾ ಪಡೆಗಳಲ್ಲಿ ಅಗ್ನಿವೀರರು ಆದ್ಯತೆ ಮೇರೆಗೆ ಕಾರ್ಯನಿರ್ವಹಣೆ ಕೈಗೊಳ್ಳಲಾಗುವ ಕ್ರಮ ಕುರಿತು ಘೋಷಿಸಲಾಗಿತು. ಅಲ್ಲದೇ ಕೆಲವು ಸಾರ್ವಜನಿಕ ಉದ್ಯಮಗಳು ನಿವೃತ್ತಿ ನಂತರ ಅಗ್ನಿವೀರರಿಗೆ ಇರುವ ಉದ್ಯೋಗವಕಾಶಗಳು ಬಗ್ಗೆ ಸ್ಪಷ್ಟಪಡಿಸಿದ್ದವು.

ಸಾಲದೆಂಬಂತೆ ಅಗ್ನಿಪಥ್ ಯೋಜನೆಯಡಿ ಸಶಸ್ತ್ರ ಪಡೆಗೆ ಸೇರಿ ಸೇವೆ ಸಲ್ಲಿಸಿದ ಅಗ್ನಿವೀರ ಸೈನಿಕರನ್ನು ರಾಜ್ಯದ ಪೊಲೀಸ್ ಪಡೆಗಳಲ್ಲಿ ನೇಮಕ ಮಾಡಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಆಡಳಿತದಲ್ಲಿರುವ ಹಲವು ರಾಜ್ಯಗಳು ಈಗಾಗಲೇ ಘೋಷಿಸಿವೆ.

Recommended Video

ಇಲ್ನೋಡಿ.. ಹೀಗೂ ಹಣ್ಣು ಮಾರಬಹುದು? ನೋಡ್ದವ್ರಿಗೆ ನಕ್ಕಿ ನಕ್ಕಿ ಹೊಟ್ಟೆ ಹುಣ್ಣಾಗೋದು ಗ್ಯಾರಂಟಿ | OneIndia Kannada

English summary
Indian Air Force has received 7.5 lakh applications under Agnipath recruitment scheme on Tuesday, Indian Air Force has witnessed the hight number of applications for the Forced recruitment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X