• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ನಲ್ಲಿ ಅಗ್ನಿಪಥ್ ನೇಮಕಾತಿ ರ‍್ಯಾಲಿ

|
Google Oneindia Kannada News

ಬೀದರ್‌, ಆಗಸ್ಟ್‌. 3: ಬೆಂಗಳೂರಿನ ನೇಮಕಾತಿ ವಲಯದ ಪ್ರಧಾನ ಕಚೇರಿ ಹಾಗೂ ಬೆಳಗಾವಿ ಸೇನಾ ನೇಮಕಾತಿ ಕಚೇರಿಯಿಂದ ಬೀದರ್‌ನ ನೆಹರು ಸ್ಟೇಡಿಯಂನಲ್ಲಿ 2022ರ ಡಿಸೆಂಬರ್ 5 ರಿಂದ 22ರ ವರೆಗೆ ಅಗ್ನಿಪಥ್ ನೇಮಕಾತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ.

ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‍ಮನ್ 10ನೇ ತರಗತಿ ತೇರ್ಗಡೆ, ಅಗ್ನಿವೀರ್ ಟ್ರೇಡ್ಸ್‍ಮೆನ್ 8ನೇ ತರಗತಿ ತೇರ್ಗಡೆ, ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ಲಿಕಲ್ ವಿಭಾಗಗಳಿಗೆ ನೇಮಕಾತಿ ರ‍್ಯಾಲಿ ನಡೆಯಲಿದೆ.

ಹಾವೇರಿ; ಅಗ್ನಿವೀರರ ನೇಮಕಾತಿಗಾಗಿ ರ‍್ಯಾಲಿಹಾವೇರಿ; ಅಗ್ನಿವೀರರ ನೇಮಕಾತಿಗಾಗಿ ರ‍್ಯಾಲಿ

ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿಯ ನಿರ್ದೇಶಕ ಕರ್ನಲ್ ನಿಶಾಂತ ಶೆಟ್ಟಿ ತಿಳಿಸಿದ್ದಾರೆ.

ಅಭ್ಯರ್ಥಿಗಳು 2022ರ ಆಗಸ್ಟ್ 5 ರಿಂದ ಸೆಪ್ಟೆಂಬರ್ 3ರ ವರೆಗೆ joinindianarmy.nic.in ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು ಅವರ ನೋಂದಾಯಿತ ಇ-ಮೇಲ್ ವಿಳಾಸಕ್ಕೆ 2022ರ ನವೆಂಬರ್ 10 ರಿಂದ 20ರವರೆಗೆ ಕಳುಹಿಸಲಾಗುತ್ತದೆ.

ಶಿವಮೊಗ್ಗದಲ್ಲಿ ಆಗಸ್ಟ್‌ 6ರಂದು ಮಿನಿ ಉದ್ಯೋಗ ಮೇಳಶಿವಮೊಗ್ಗದಲ್ಲಿ ಆಗಸ್ಟ್‌ 6ರಂದು ಮಿನಿ ಉದ್ಯೋಗ ಮೇಳ

ನೇಮಕಾತಿ, ವಯೋಮಿತಿ, ವಿದ್ಯಾರ್ಹತೆ ಹಾಗೂ ಇತರೆ ಮಾನದಂಡ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವೀಕ್ಷಿಸಲು ಕೋರಿದೆ.

Agnipath recruitment rally in Bidar

ಬೆಂಗಳೂರು ಭೂಸೇನಾ ಭರ್ತಿ ಕಾರ್ಯಾಲಯ ಇವರ ವತಿಯಿಂದ 'ಅಗ್ನಿವೀರ್' ಸೇನಾ ನೇಮಕಾತಿ ರ‍್ಯಾಲಿಯು ಆಗಸ್ಟ್, 10 ರಿಂದ 22 ರವರೆಗೆ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲೂ ನಡೆಯಲಿದೆ. ಸಾಮಾನ್ಯ ಕರ್ತವ್ಯ, ತಾಂತ್ರಿಕ, ಲಿಪಿಕ, ಗುಮಾಸ್ತ, ಸ್ಟೋರ್ ಕೀಪರ್, ಟೆಕ್ನಿಕಲ್ ಹಾಗೂ ಟ್ರೇಡ್ಸ್‍ಮೆನ್ ಗಳಿಗಾಗಿ ನೇಮಕಾತಿ ಮಾಡಲಿದ್ದಾರೆ.

English summary
Agnipath Recruitment Rally is organized from 5th to 22nd December 2022 at Nehru Stadium, Bidar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X