ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೆಶರ್ಸ್‌ಗಳಿಗೆ ಭರ್ಜರಿ ಆಫರ್, 30 ಸಾವಿರಕ್ಕೂ ಅಧಿಕ ನೇಮಕಾತಿ

|
Google Oneindia Kannada News

ಬೆಂಗಳೂರು, ಮೇ 11: ಕೊರೊನಾ ಸಾಂಕ್ರಾಮಿಕದಿಂದಾಗಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ನೇಮಕಾತಿ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಫ್ರೆಶರ್ಸ್ ಸೇರಿದಂತೆ ಉನ್ನತ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ. ಐಟಿ ದಿಗ್ಗಜ ಆಕ್ಸೆಂಚರ್ ಸಂಸ್ಥೆ ಕೂಡಾ ನೇಮಕಾತಿ ಹೆಚ್ಚಿಸಿದೆ.

ದೇಶದೆಲ್ಲೆಡೆ ಹೊಸ ಪದವೀಧರರಿಗೆ ಈ ವರ್ಷ ಸುಮಾರು 30 ಸಾವಿರಕ್ಕೂ ಅಧಿಕ ನೇಮಕಾತಿಯನ್ನು ಘೋಷಿಸಿದೆ. ಆಗಸ್ಟ್ 31,2021ಕ್ಕೆ ವರದಿಯಾದಂತೆ ಐಟಿ ದಿಗ್ಗಜ ಸಂಸ್ಥೆಯಲ್ಲಿ ಸುಮಾರು 2,50,000 ಹೊಸ ನೇಮಕಾತಿ ಮಾಡಿಕೊಳ್ಳಲಾಗಿದೆ. ಆಗಸ್ಟ್ 2022ರ ವೇಳೆಗೆ ಉದ್ಯೋಗಿಗಳ ಸಂಖ್ಯೆ 3,00,000ಕ್ಕೇರಿಸಲು ಸಂಸ್ಥೆ ಮುಂದಾಗಿದೆ.

ಪ್ರಸಕ್ತ ವರ್ಷದಲ್ಲಿ ಭಾರತದಲ್ಲಿ 70,000 ಮಂದಿ ನೇಮಕವಾಗಿದ್ದು, ಒಟ್ಟಾರೆ 6,99,000 ಉದ್ಯೋಗಿಗಳಿದ್ದಾರೆ. ಜಾಗತಿಕವಾಗಿ ಆಕ್ಸೆಂಚರ್ ಸಂಸ್ಥೆ 1.62 ಲಕ್ಷ ಮಂದಿ ಉದ್ಯೋಗಗಳನ್ನು ಹೊಂದಿದೆ.

Accenture is Hiring 30,000 Freshers, Experienced Employees

ಹೊಸ ನೇಮಕಾತಿ:
ವಿದ್ಯಾರ್ಹತೆ:
ಬಿ.ಇ/ಬಿ.ಟೆಕ್ 2022/2022 ಸಾಲಿನ ಪದವೀಧರರು ಸಂಸ್ಥೆಯನ್ನು ಸೇರಬಹುದಾಗಿದ್ದು, ಬಿ.ಇ, ಬಿಸಿಎ, ಬಿಬಿಎ ಅಥವಾ ಬಿಎ 2020/2021 ಪದವೀಧರರಿಗೂ ಅವಕಾಶಗಳಿವೆ. ಇದಲ್ಲದೆ, ಎಂ.ಇ/ಎಂಸಿಎ ಹಾಗೂ ಎಂಎಸ್ಸಿ(ಸಿಎಸ್ ಅಥವಾ ಐಟಿ) 2020/2021 ಪದವೀಧರರು ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಸಂಸ್ಥೆಯ ಅಧಿಕೃತ ವೆಬ್ ತಾಣದಲ್ಲಿ ವಿವರ ಲಭ್ಯವಿದೆ.

ಭರಪೂರ ನೇಮಕಾತಿ ಘೋಷಿಸಿದ ಟಾಪ್ ಐಟಿ ಕಂಪನಿಗಳು
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ವಿಪ್ರೋ, ಇನ್ಫೋಸಿಸ್ ಹಾಗೂ ಇನ್ನಿತರ ಪ್ರಮುಖ ಐಟಿ ಕಂಪನಿಗಳು ಪ್ರಸಕ್ತ ವರ್ಷದಲ್ಲಿ ಹೆಚ್ಚು ನೇಮಕಾತಿ ಮಾಡಿಕೊಳ್ಳಲಿವೆ. ಟಿಸಿಎಸ್ ಸುಮಾರು 40, 000, ಇನ್ಫೋಸಿಸ್ 50,000 ಹೊಸ ನೇಮಕಾತಿ ಘೋಷಿಸಿದೆ. ಮಾರ್ಚ್ 2022ರ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಆಟ್ರಿಷನ್ ದರ ಹೊಂದಿದ್ದ ಇನ್ಫೋಸಿಸ್ 27.7% ದರ ತಗ್ಗಿಸಲು ಯತ್ನಿಸುತ್ತಿದೆ

English summary
IT giant Accenture is inviting applications to onboard freshers as well as experienced applicants for 30,000 positions across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X