ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಅಪ್ರೆಂಟಿಸ್ ಹುದ್ದೆಗಳಿವೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 2021-22ನೇ ಸಾಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ಅಧಿಕೃತ ವೆಬ್‌ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 31, 2021 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

ಸಂಸ್ಥೆಯ ಹೆಸರು: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ)
ಹುದ್ದೆ: Apprentices
ಒಟ್ಟು ಹುದ್ದೆ: 90
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31, 2021
ಸಂಬಳ ನಿರೀಕ್ಷೆ: 9,000 ರು ನಿಂದ 15, 000 ರು ಪ್ರತಿ ತಿಂಗಳು

ಹುದ್ದೆಗಳ ವಿವರ:
ಹುದ್ದೆ ಹೆಸರು- ಒಟ್ಟು ಹುದ್ದೆ
ಸಿವಿಎಲ್ (ಪದವಿ): 10 ಹುದ್ದೆ
ಸಿವಿಎಲ್ (ಡಿಪ್ಲೋಮಾ): 7
ಎಲೆಕ್ಟ್ರಿಕಲ್ (ಪದವಿ): 9
ಎಲೆಕ್ಟ್ರಿಕಲ್ (ಡಿಪ್ಲೋಮಾ): 6
ಎಲೆಕ್ಟ್ರಾನಿಕ್ಸ್ (ಪದವಿ): 3
ಎಲೆಕ್ಟ್ರಾನಿಕ್ಸ್ (ಡಿಪ್ಲೋಮಾ): 13
ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೇಷನ್ ಟೆಕ್ನಾಲಜಿ (ಪದವಿ): 2
ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೇಷನ್ ಟೆಕ್ನಾಲಜಿ (ಡಿಪ್ಲೋಮಾ): 4
ಆಟೋಮೊಬೈಲ್/ ಮೆಕ್ಯಾನಿಕಲ್ (ಡಿಪ್ಲೋಮಾ): 4
ಏರೋನಾಟಿಕ್ಸ್/ ಏರೋಸ್ಪೇಸ್ (ಪದವಿ):2
ಏರೋನಾಟಿಕ್ಸ್/ ಏರೋಸ್ಪೇಸ್ (ಡಿಪ್ಲೋಮಾ): 2
ಆರ್ಕಿಟೆಕ್ಟ್ (ಪದವಿ): 4
ಐಟಿಐ ಟ್ರೇಡ್ (ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಸಹಾಯಾಕ, ಸ್ಟೆನೋಗ್ರಾಫರ್, ಕಚೇರಿ ಸಹಾಯಕ, ಫೈನಾನ್ಸ್ ಹಾಗೂ ಎಲೆಕ್ಟ್ರಾನಿಕ್ಸ್): 24

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಡಿಪ್ಲೋಮಾ ಪಡೆದಿರಬೇಕು. ಕೆಲ ಹುದ್ದೆಗಳಿಗೆ ಐಟಿಐ ಟ್ರೇಡ್ ಪ್ರಮಾಣ ಪತ್ರ.

ರೈಲ್ವೆ ನೇಮಕಾತಿ: 4103 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನರೈಲ್ವೆ ನೇಮಕಾತಿ: 4103 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ:
ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯಂತೆ ಎಲ್ಲಾ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಸೆಪ್ಟೆಂಬರ್ 30, 2021ರ ಅನ್ವಯ ಅಭ್ಯರ್ಥಿಗಳ ವಯೋಮಿತಿ ಗರಿಷ್ಠ 26 ವರ್ಷ ಮೀರಬಾರದು.

ಅರ್ಹರಿಗೆ ನಿಯಮಾವಳಿಯಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 3 ವರ್ಷ, ಹಿಂದುಳಿದ ವರ್ಗ(ಕೆನೆಪದರ ರಹಿತ) 3 ವರ್ಷ, ದಿವ್ಯಾಂಗರಿಗೆ 10 ವರ್ಷ ಮತ್ತು ಮಾಜಿ ಯೋಧರಿಗೆ 5 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.

AAI Recruitment 2021 Apply for Apprentices post

ಸಂಬಳ/ಸ್ಟೈಪೆಂಡ್ ವಿವರ:
ಸಿವಿಎಲ್ (ಪದವಿ), ಸಿವಿಎಲ್ (ಡಿಪ್ಲೋಮಾ), ಎಲೆಕ್ಟ್ರಿಕಲ್ (ಪದವಿ), ಎಲೆಕ್ಟ್ರಿಕಲ್ (ಡಿಪ್ಲೋಮಾ), ಎಲೆಕ್ಟ್ರಾನಿಕ್ಸ್ (ಪದವಿ), ಎಲೆಕ್ಟ್ರಾನಿಕ್ಸ್ (ಡಿಪ್ಲೋಮಾ), ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೇಷನ್ ಟೆಕ್ನಾಲಜಿ (ಪದವಿ), ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೇಷನ್ ಟೆಕ್ನಾಲಜಿ (ಡಿಪ್ಲೋಮಾ), ಆಟೋಮೊಬೈಲ್/ ಮೆಕ್ಯಾನಿಕಲ್ (ಡಿಪ್ಲೋಮಾ), ಏರೋನಾಟಿಕ್ಸ್/ ಏರೋಸ್ಪೇಸ್ (ಪದವಿ), ಏರೋನಾಟಿಕ್ಸ್/ ಏರೋಸ್ಪೇಸ್ (ಡಿಪ್ಲೋಮಾ), ಆರ್ಕಿಟೆಕ್ಟ್ (ಪದವಿ) : 12, 000 ರುನಿಂದ 15, 000 ರು ಪ್ರತಿ ತಿಂಗಳು.

ಐಟಿಐ ಟ್ರೇಡ್ (ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಸಹಾಯಾಕ, ಸ್ಟೆನೋಗ್ರಾಫರ್, ಕಚೇರಿ ಸಹಾಯಕ, ಫೈನಾನ್ಸ್ ಹಾಗೂ ಎಲೆಕ್ಟ್ರಾನಿಕ್ಸ್): 9,000 ರು ಪ್ರತಿ ತಿಂಗಳು.

ಸಮೀಕ್ಷೆ: ನೇಮಕಾತಿ ಪ್ರಗತಿಯಲ್ಲಿ ಬೆಂಗಳೂರು ನಗರವೇ ಮುಂದೆಸಮೀಕ್ಷೆ: ನೇಮಕಾತಿ ಪ್ರಗತಿಯಲ್ಲಿ ಬೆಂಗಳೂರು ನಗರವೇ ಮುಂದೆ

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ

ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-10-2021

ಅರ್ಜಿ ಸಲ್ಲಿಸುವುದು ಹೇಗೆ:
ಎಎಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಕುರಿತ ಲಿಂಕ್ ಕ್ಲಿಕ್ ಮಾಡಿ
* ಅರ್ಹತೆ ಇದ್ದ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ. ಇದಕ್ಕೂ ಮೊದಲು ನೋಂದಯಿಸಿಕೊಂಡು ಲಾಗಿನ್ ಆಗುವುದು ಅಗತ್ಯ.
* ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ, ಪರೀಕ್ಷೆ ವಿಷಯ ಹಾಗೂ ಅಂಕ ವಿವರಗಳನ್ನು ಒದಗಿಸಬೇಕು.
* ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಐಟಿಐ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.

* ಭರ್ತಿಯಾದ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ.

ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿ ಕಾರ್ಯಾರಂಭಿಸಲಾಗಿದ್ದು, ಈವರೆಗೆ ವಿಮಾನಯಾನ ಸಂಪರ್ಕ ಹೊಂದಿಲ್ಲದಿರದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಲಿಷ್ಠ ವೈಮಾನಿಕ ಸಂಪರ್ಕವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದ್ದು, ಭಾರತೀಯ ವೈಮಾನಿಕ ಮಾರುಕಟ್ಟೆಯಲ್ಲಿ ಹೊಸ ಪ್ರಾದೇಶಿಕ ವಲಯಕ್ಕೆ ಅಡಿಪಾಯ ಹಾಕಿದೆ.

English summary
AAI recruitment 2021 notification has been released on official website for the recruitment of 90 Apprentices post at Airport Authority of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X