ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

908 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ ವಿಮಾನ ನಿಲ್ದಾಣ ಪ್ರಾಧಿಕಾರ

By Gururaj
|
Google Oneindia Kannada News

ಬೆಂಗಳೂರು, ಜುಲೈ 12 : ಎಎಐ 908 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 16, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) 496 ಮ್ಯಾನೇಜರ್, 412 ಜ್ಯೂನಿಯರ್ ಎಕ್ಸಿಕ್ಯುಟೀವ್ ಸೇರಿದಂತೆ 908 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲ ಮಾಡಲು ಸಿದ್ಧರಿರಬೇಕು.

ಪಿಯುಸಿ, ಪದವಿ ಪಡೆದವರಿಗೆ ಎನ್‌ಐಆರ್‌ಟಿಎಚ್‌ನಲ್ಲಿ ಕೆಲಸವಿದೆಪಿಯುಸಿ, ಪದವಿ ಪಡೆದವರಿಗೆ ಎನ್‌ಐಆರ್‌ಟಿಎಚ್‌ನಲ್ಲಿ ಕೆಲಸವಿದೆ

ವಯೋಮಿತಿ : ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ 32 ವರ್ಷದ ವಯೋಮಿತಿ ನಿಗದಿಗೊಳಿಸಲಾಗಿದೆ. ಜ್ಯೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 27 ವರ್ಷದ ವಯೋಮಿತಿ ನಿಗದಿಗೊಳಿಸಲಾಗಿದೆ. 30 ಜೂನ್ 2018ಕ್ಕೆ ಅನ್ವಯವಾಗುವಂತೆ.

ಮ್ಯಾನೇಜರ್ ಹುದ್ದೆಗೆ ಬಿ.ಕಾಂ ವಿತ್ ಐಸಿಡಬ್ಯುಎ/ಸಿಎ/ಎಂಬಿಎ/ ಅಥವ ಬಿಇ/ಬಿ.ಟೆಕ್ ಅಥವ ಸ್ನಾತಕೋತ್ತರ/ಪದವಿ ಪಡೆದಿರಬೇಕು. ವೇತನ ಶ್ರೇಣಿ 60000 - 180000 ಪ್ರತಿ ತಿಂಗಳು.

8 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ರೈಲ್ ಟೆಲ್8 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ರೈಲ್ ಟೆಲ್

AAI recruitment 2018: Apply for 908 Various Posts

ಜ್ಯೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ಪದವಿ/ಬಿಎಸ್‌ಸಿ/ಬಿಇ/ಬಿ.ಟೆಕ್/ಬಿ.ಕಾಂ/ಐಸಿಡಬ್ಯುಎ/ಸಿಎ/ಎಂಬಿಎ ಅಥವ ಸ್ನಾತಕೋತ್ತರ ಪದವಿ ಪಡೆದಿರಬೇಕು. ವೇತನ ಶ್ರೇಣಿ 40000-140000 ಪ್ರತಿ ತಿಂಗಳು.

ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕ ಪಾವತಿ ಮಾಡಬೇಕು.

166 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಆರ್‌ಬಿಐ166 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಆರ್‌ಬಿಐ

ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Airports Authority of India (AAI) notification has been released on official website for the recruitment of 908 vacancies. The candidate who is looking for Manager, Junior Executive can apply online before 16th August 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X