ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 7, 8ರಂದು ಒಡಿಶಾದಲ್ಲಿ ವಿಶೇಷ ಉದ್ಯೋಗ ಮೇಳ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 01 : ಅಂಗವಿಕಲರು, ಸ್ಲಂನ ಮಕ್ಕಳು, ತೃತೀಯ ಲಿಂಗಿಗಳಿಗೆ ಉದ್ಯೋಗವಕಾಶ ನೀಡಲು ರಾಷ್ಟ್ರ ಮಟ್ಟದ ಉದ್ಯೋಗ ಮೇಳ ನಡೆಯಲಿದೆ. ಒಡಿಶಾದಲ್ಲಿ ಈ ಮೇಳ ನಡೆಯಲಿದ್ದು, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ.

ಒಡಿಶಾ ರಾಜ್ಯದ ಭುವನೇಶ್ವರದ ಈಸ್ಟ್ ಕೋಸ್ಟ್ ರೈಲ್ವೆ ಆಡಿಟೋರಿಯಂನಲ್ಲಿ ನವೆಂಬರ್ 7 ಮತ್ತು 8ರಂದು ಝೂಮ್ ಇಂಡಿಯಾ ಎಂಬ ಶೀರ್ಷಿಕೆಯಡಿ ಉದ್ಯೋಗ ಮೇಳ ಮತ್ತು ಅವರ ಪ್ರತಿಭೆ ಪ್ರದರ್ಶನ ಮಾಡಲು ಸ್ಪರ್ಧೆ ನಡೆಯಲಿದೆ. ಅಂಗವಿಕಲರು, ಸ್ಲಂನ ಮಕ್ಕಳು, ತೃತೀಯ ಲಿಂಗಿಗಳು ಪಾಲ್ಗೊಳ್ಳಬಹುದಾಗಿದೆ.

ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಮೀಸಲಾತಿ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಮೀಸಲಾತಿ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಒಡಿಶಾ ಸರ್ಕಾರ ಮತ್ತು ಭುವನೇಶ್ವರದ ಶಾಂತಿಧಾಮ ಜಂಟಿಯಾಗಿ ಈ ಉದ್ಯೋಗ ಮೇಳವನ್ನು ಆಯೋಜನೆ ಮಾಡಿವೆ. ಶಾಂತಿಧಾಮ ದೇಶದ 315 ವಿವಿಧ ಸಂಘಟನೆಗಳ ಜೊತೆ ಒಪ್ಪಂದ ಮಾಡಿಕೊಂಡಿವೆ.

ಕೌಶಲ್ಯ ಅಭಿವೃದ್ಧಿ, ಕೇಂದ್ರ ಸರ್ಕಾರದಿಂದ ಮಹತ್ವದ ಹೆಜ್ಜೆ ಕೌಶಲ್ಯ ಅಭಿವೃದ್ಧಿ, ಕೇಂದ್ರ ಸರ್ಕಾರದಿಂದ ಮಹತ್ವದ ಹೆಜ್ಜೆ

A Unique National Level Talent Hunt On November 7 And 8

ಉದ್ಯೋಗ ಮೇಳದ ಮುಖ್ಯಾಂಶಗಳು

* ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ವಿಕಲಾಂಗ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ವಿವಿಧ ಸ್ಪರ್ಧೆಗಳು ಸಹ ನಡೆಯಲಿದ್ದು, ವಿಜೇತರಾದವರಿಗೆ ಸಂಜೆ 6 ಗಂಟೆಗೆಗ ಬಹುಮಾನ ವಿತರಣೆ ಮಾಡಲಾಡುತ್ತದೆ.

* ಶಾಂತಿಧಾಮ ಫೌಂಡೇಷನ್ ನಡೆಸುವ ಉದ್ಯೋಗ ಮೇಳದಲ್ಲಿ ಸಮಾಜದಿಂದ ತುಳಿತಕ್ಕೆ ಒಳಗಾದ ಜನರಿಗೆ ವೇದಿಕೆಯನ್ನು ಕಲ್ಪಿಸಲಾಗುತ್ತದೆ.

ನೌಕರಿ ಆಸೆಗೆ ಪ್ರಧಾನಿಯ ನಕಲಿ ಶಿಫಾರಸ್ಸು ಪತ್ರ ಕೊಟ್ಟು ಜೈಲು ಸೇರಿದ ನೌಕರಿ ಆಸೆಗೆ ಪ್ರಧಾನಿಯ ನಕಲಿ ಶಿಫಾರಸ್ಸು ಪತ್ರ ಕೊಟ್ಟು ಜೈಲು ಸೇರಿದ

* ವಿಕಲಾಂಗ ಮಕ್ಕಳ ಪ್ರತಿಭೆಯನ್ನು ದೇಶಕ್ಕೆ ಪರಿಚಯಿಸುವ 'ಸಮರ್ಥ' ಎಂಬ ರಾಷ್ಟ್ರೀಯ ಪತ್ರಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ನೃತ್ಯ, ಸಂಗೀತ, ಚಿತ್ರ ರಚನೆ, ನಟನೆ, ಮಿಮಿಕ್ರಿ ಸೇರಿದಂತೆ ವಿವಿಧ ಸ್ಪರ್ಧೆಗಳಿವೆ.

ಈ ಬೃಹತ್ ಕಾರ್ಯಕ್ರಮಕ್ಕೆ ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಝೂಮ್ ಇಂಡಿಯಾದ ತುಳಿತಕ್ಕೆ ಒಳಗಾದ ಮಕ್ಕಳಿಗೆ ವೇದಿಕೆ ಒದಗಿಸುವ ಪ್ರಮುಖ ಕಾರ್ಯಕ್ರಮವಾಗಿದೆ.

ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಪೊರೇಟ್ ಕಂಪನಿಗಳರು, ಡಾಕ್ಟರ್‌ಗಳು, ಟೆಕಿಗಳು, ಉದ್ಯಮಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
The National Level Talent Hunt JHOOM INDIA will be held on November 7 and 8th. A unique one of its kind talent hunt and job fair with the aim to not only empower Orphans, Physically Challenged, Slum Children (BPL) and Transgenders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X