ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಇಲಾಖೆಯ ಖಾಲಿ ಹುದ್ದೆಗಳ ಭರ್ತಿ ಕುರಿತ ಗೃಹ ಸಚಿವರ ಸುಳಿವು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ರಾಜ್ಯದಲ್ಲಿ ಮುಂದಿನ ನಾಲ್ಕು ವರ್ಷದಲ್ಲಿ ಪೊಲೀಸ್ ಸಿಬ್ಬಂದಿಗೆ ಹತ್ತು ಸಾವಿರ ಮನೆ ಕಟ್ಟಿಕೊಡಲು ಗೃಹ ಇಲಾಖೆ ಚಿಂತನೆ ನಡೆಸಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 16 ಸಾವಿರ ಪೊಲೀಸ್ ಕಾನ್ಸ್‌ಸ್ಟೇಬಲ್ ಸಿಬ್ಬಂದಿಯನ್ನು ವರ್ಷಕ್ಕೆ ನಾಲ್ಕು ಸಾವಿರದಂತೆ ನೇಮಕ ಮಾಡಿಕೊಳ್ಳಲು ಗೃಹ ಇಲಾಖೆ ನಿರ್ಧರಿಸಿದೆ.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಂಡ್ಯದ ಬನ್ನೂರಿನಲ್ಲಿ ನಡೆದ ಪೊಲೀಸ್ ವಸತಿ ಗೃಹ ಇಲಾಖೆಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಈ ಸುಳಿವು ನೀಡಿದ್ದಾರೆ. ಮಂಡ್ಯದಲ್ಲಿ 36 ಪೊಲೀಸ್ ವಸತಿಗೃಹಕ್ಕೆ ರೂ.10 ಕೋಟಿ, ಆಡಳಿತ ಕಚೇರಿಗೆ ರೂ.2.10 ಕೋಟಿ, ಶ್ವಾನದಳದ ಕಟ್ಟಡ ಮತ್ತು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಗೆ ರೂ. 2.10 ಕೋಟಿ ,ಹಾಗೂ ಮಳವಳ್ಳಿ ಪೊಲೀಸ್ ಠಾಣೆಗೆ ರೂ. 2.25 ಕೋಟಿ ಅನುದಾನವನ್ನು ಮಂಜೂರು ಮಾಡಿ ಇಂದು ಶಂಕುಸ್ಥಾಪನೆ ಮಾಡಲಾಗಿದೆ.

ಒಂದೇ ವರ್ಷದಲ್ಲೇ 200 ಕೋಟಿಗಳನ್ನು ಮಂಜೂರು ಮಾಡಿ ಇಡೀ ರಾಜ್ಯಾದ್ಯಂತ 100 ಪೊಲೀಸ್ ಠಾಣೆಗಳನ್ನು ಕಟ್ಟಲಾಗುತ್ತಿದೆ. ಈ ಬಾರಿ 140 ಠಾಣೆಗಳನ್ನು ಪಿಎಸ್‌ಐ ದಿಂದ ಸಿಪಿಐ ಠಾಣಾಗಳಾಗಿ ಪರಿವರ್ತನೆ ಮಾಡಿದ್ದೇವೆ. ರಾಜ್ಯದಲ್ಲಿ ಪೊಲೀಸ್ ವಸತಿಗೃಹಕ್ಕೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆಯಾಗಿತ್ತು, ಈ ಸಂಬಂಧ ಈಗಾಗಲೇ 11 ಸಾವಿರ ವಸತಿಗೃಹಗಳನ್ನು ಪೂರ್ಣಗೊಳಿಸಲಾಗಿದೆ. ಪೊಲೀಸರು ಅತ್ಯುತ್ತಮವಾದ ಕಟ್ಟಡದಲ್ಲಿ ನೆಮ್ಮದಿಯಿಂದ ಕಾರ್ಯ ನಿರ್ವಹಿಸುವಂತಾಗಬೇಕು ಮತ್ತು ಅವರ ಕೌಟುಂಬಿಕ ಜೀವನ ಸುಗಮವಾಗಿರಲೆಂದು ಗೃಹ 2020-25 ರ ಯೋಜನೆಯಲ್ಲಿ 10 ಸಾವಿರ ಪೊಲೀಸ್ ಗೃಹಗಳಿಗೆ ಬಜೆಟ್ ಮಂಜೂರು ಮಾಡಿ ಈಗಾಗಲೇ ಟೆಂಡರ್ ಕರೆಯಲಾಗುತ್ತಿದೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

16,000 police personnel recruited over the next four years

''ಜನರ ಮಾನ, ಪ್ರಾಣ ಮತ್ತು ಸ್ವತ್ತನ್ನು ಕಾಪಾಡುವಲ್ಲಿ ಹಾಗೂ ಶಾಂತಿಯುತವಾದ ಮತ್ತು ಆರೋಗ್ಯಯುತವಾದ ಸಮಾಜವನ್ನು ನಿರ್ಮಿಸಲು ಪೊಲೀಸ್ ಇಲಾಖೆಯನ್ನು ಮತ್ತಷ್ಟು ಭದ್ರಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಈಗಾಗಲೇ 16 ಸಾವಿರ ಉದ್ಯೋಗಗಳು ಖಾಲಿಯಿದ್ದು, ಪ್ರತಿವರ್ಷ 4 ಸಾವಿರದಂತೆ ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು,'' ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿಯ ನೇಮಕಾತಿ ಸಂಬಂಧ ಗೃಹ ಇಲಾಖೆ ಅತಿ ಶೀಘ್ರದಲ್ಲಿಯೇ ಪ್ರಕ್ರಿಯೆ ಆರಂಭಿಸಲಿದ್ದು, ಮೊದಲ ಹಂತದಲ್ಲಿ ನಾಲ್ಕು ಸಾವಿರ ಪೊಲೀಸ್ ಸಿಬ್ಬಂದಿಯ ನೇಮಕಾತಿ ಸಂಬಂಧ ಹಣಕಾಸು ಇಲಾಖೆ ಅನುಮೋದನೆ ಪಡೆಯಲು ಸಿದ್ಧತೆ ನಡೆಸಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

16,000 police personnel recruited over the next four years

ಸೈಬರ್ ಅಪರಾಧ ಬಲ ಪಡಿಸಲು ಚಿಂತನೆ: ಇನ್ನೊಂದೆಡೆ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಬೆಂಗಳೂರು ಸೆರಿದಂತೆ ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಸೈಬರ್ ಕೃತ್ಯಗಳಿಗೆ ನಿಯಂತ್ರಣ ಹಾಕಲು ಈಗಾಗಲೇ ಬೆಂಗಳೂರು ಪೊಲೀಸರು ಗೋಲ್ಡನ್ ಹವರ್ ಪರಿಚಯಿಸಿದ್ದಾರೆ. ಇದೀಗ ಸೈಬರ್ ಪ್ರಯೋಗಾಲಯಗಳನ್ನು ಸಹ ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಗೊಳಿಸಲಾಗಿದೆ. ಇದೀಗ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೈಬರ್ ಠಾಣೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೃಹ ಇಲಾಖೆ ಚಿಂತನೆ ನಡೆಸಿದೆ. ತಾಲೂಕು ವಾರು ಸೈಬರ್ ಪೊಲೀಸ್ ಠಾಣೆಗಳ ಪ್ರಾರಂಭ ಮಾಡುವ ಪ್ರಸ್ತಾಪ ಮುಂದಿಡಲಾಗಿದೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

English summary
16,000 police personnel recruited over the next four years; Home Minister hints at filling vacancies in Police Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X