ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಸಂಪನ್ಮೂಲ ಇಲಾಖೆಯಲ್ಲಿ ಗ್ರೂಪ್-ಸಿ 155 ಹುದ್ದೆಗಳು: ಅರ್ಜಿ ಸಲ್ಲಿಸಿ

|
Google Oneindia Kannada News

ಬೆಂಗಳೂರು, ಜೂ. 26: ಜಲಸಂಪನ್ಮೂಲ ಇಲಾಖೆಯಲ್ಲಿ ಗ್ರೂಪ್-ಸಿ ವೃಂದದ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಕರ್ನಾಟಕ ನಾಗರಿಕ ಸೇವಾ (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಗೆ ಮೀಸಲಿರಿಸಿದ್ದ ಭರ್ತಿಯಾಗದೆ ಖಾಲಿ ಉಳಿದಿರುವ ಹುದ್ದೆಗಳು) (ವಿಶೇಷ ನೇಮಕಾತಿ) ನಿಯಮಾವಳಿಗಳು 2001 ಮತ್ತು 2014ರ ಡಿ.3ರಂದು ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಅನ್ವಯ ಗ್ರೂಪ್ ಸಿ ವೃಂದದ ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಮುಂದಿನ 3 ತಿಂಗಳಲ್ಲಿ ಶೇ 50ರಷ್ಟು ನೇಮಕಾತಿ ಹೆಚ್ಚಳ!ಮುಂದಿನ 3 ತಿಂಗಳಲ್ಲಿ ಶೇ 50ರಷ್ಟು ನೇಮಕಾತಿ ಹೆಚ್ಚಳ!

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 11ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 10 ಕೊನೆಯ ದಿನವಾಗಿದೆ. ವೆಬ್‌ಸೈಟ್: http://waterresources.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:

ಪರಿಶಿಷ್ಟ ಜಾತಿಗೆ ಮೀಸಲಾದ ಒಟ್ಟು 155 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಇತರೆ 29, ಮಹಿಳೆ 47, ಗ್ರಾಮೀಣ 39, ಮಾಜಿ ಸೈನಿಕ 15, ಕನ್ನಡ ಮಾಧ್ಯಮ ಅಭ್ಯರ್ಥಿ 8, ತೃತೀಯ ಲಿಂಗಿಗಳು 2, ಅಂಗವಿಕಲ ಅಭ್ಯರ್ಥಿಗಳು 8, ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ 7 ಹುದ್ದೆಗಳು ಮೀಸಲಿವೆ. ನೇಮಕಾತಿಗೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಪಡೆದ ಶೇಕಡಾವಾರು ಅಂಕ ಪರಿಗಣಿಸಲಾಗುತ್ತದೆ.

155 backlog jobs in karnataka water resource department

ನೇಮಕಾತಿ ವಿಧಾನ:

ಬ್ಯಾಕ್‌ಲಾಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮಾಡುವುದಿಲ್ಲ. ವಿದ್ಯಾರ್ಹತೆ ಮಾನದಂಡದ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳು, ವಯೋಮಿತಿ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. ಅಲ್ಲದೆ, ಅಭ್ಯರ್ಥಿಗಳು ಯಾವುದೇ ಶುಲ್ಕವನ್ನೂ ಪಾವತಿಸುವಂತಿಲ್ಲ.

ಕೊಪ್ಪಳದಲ್ಲಿ ಜೂ.28 ರಂದು ನೇರ ಸಂದರ್ಶನ, ಇತರ ಉದ್ಯೋಗ ಮಾಹಿತಿಕೊಪ್ಪಳದಲ್ಲಿ ಜೂ.28 ರಂದು ನೇರ ಸಂದರ್ಶನ, ಇತರ ಉದ್ಯೋಗ ಮಾಹಿತಿ

18ರಿಂದ 28 ವಯೋಮಿತಿಯೊಳಗಿನವರು ಮತ್ತು 29ರಿಂದ 40 ವರ್ಷ ವಯೋಮಿತಿ ಒಳಗಿನವರು ಎರಡು ಅರ್ಹತಾ ಪಟ್ಟಿಗಳನ್ನು ಸಿದ್ಧಪಡಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. 29ರಿಂದ 40 ವರ್ಷ ವಯೋಮಿತಿ ಒಳಗಿನ ಅರ್ಹತಾ ಪಟ್ಟಿಯಲ್ಲಿರುವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಒಂದು ವೇಳೆ ಇಲ್ಲಿ ಅರ್ಹ ಅಭ್ಯರ್ಥಿಗಳು ಸಿಗದಿದ್ದಾಗ 18ರಿಂದ 28 ವಯೋಮಿತಿಯೊಳಗಿನವರ ಅರ್ಹತಾ ಪಟ್ಟಿಯಲ್ಲಿರುವವರನ್ನು ಪರಿಗಣಿಸಲಾಗುತ್ತದೆ.

ವಯೋಮಿತಿ:

ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಅಭ್ಯರ್ಥಿಯ ಜನ್ಮದಿನಾಂಕವನ್ನು ಅವರ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣ ಪತ್ರ ಅಥವಾ ಟಿಸಿಯಲ್ಲಿ ನಮೂದಿಸಿರುವಂತೆ ಪರಿಗಣಿಸಲಾಗುತ್ತದೆ.

ವೇತನ ಶ್ರೇಣಿ:

ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್‌ಲಾಗ್ ಹುದ್ದೆ (ಗ್ರೂಪ್ ಸಿ ವೃಂದ) 21,400 ರೂ.ನಿಂದ ಆರಂಭಗೊಂಡು 42,000 ರೂ. ಹಾಗೂ ಕಾಲಕಾಲಕ್ಕೆ ಇತರೆ ಭತ್ಯೆಗಳೊಂದಿಗೆ ಪೂರ್ಣಗೊಳ್ಳುತ್ತದೆ. ಪಿಂಚಣಿ ಸೌಲಭ್ಯ ಸಹ ಹೊಂದಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

English summary
Notification for appointment of Scheduled Caste Backlog Second Class Assistant in the Karnataka Water Resources Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X