ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka Teacher Recruitment 2022; ಜಿಲ್ಲಾ, ವಿಷಯವಾರು ಹುದ್ದೆಗಳ ವಿವರ

|
Google Oneindia Kannada News

ಬೆಂಗಳೂರು, ಮಾರ್ಚ್ 23; ಕರ್ನಾಟಕ ಸರ್ಕಾರ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕ (6 ರಿಂದ 8ನೇ ತರಗತಿ) ಮಾಡಲು ಆದೇಶ ಹೊಡಿಸಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾರ್ಚ್ 23 ರಿಂದ ಏಪ್ರಿಲ್ 22ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

15,000 ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಷಯವಾರು ಹುದ್ದೆಗಳ ಮರು ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆಂಗ್ಲ ಭಾಷೆ ಶಿಕ್ಷಕರ ಹುದ್ದೆಗಳ ಸಂಖ್ಯೆಯನ್ನು 250 ರಿಂದ 557ಕ್ಕೆ ಹೆಚ್ಚಿಸಲಾಗಿದೆ. ಯಾವ ಜಿಲ್ಲೆಗೆ ಯಾವ ವಿಷಯಕ್ಕೆ ಎಷ್ಟು ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ ಎಂಬ ಮಾಹಿತಿ ಇಲ್ಲಿದೆ.

KPSC ಮೂಲಕ ಶೀಘ್ರವೇ ಕಾರ್ಮಿಕ ಇಲಾಖೆ ನೇಮಕಾತಿ KPSC ಮೂಲಕ ಶೀಘ್ರವೇ ಕಾರ್ಮಿಕ ಇಲಾಖೆ ನೇಮಕಾತಿ

15,000 Teacher Recruitment District And Subject Wise List

ಕಲ್ಯಾಣ ಕರ್ನಾಟಕ ಭಾಗದಲ್ಲಿ 5000 ಮತ್ತು ಇತರ ಜಿಲ್ಲೆಗಳಲ್ಲಿ ಒಟ್ಟು 10,000 ಸೇರಿ 15 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳಲ್ಲಿ ಆಂಗ್ಲ ಭಾಷೆ 1807, ಗಣಿತ ವಿಜ್ಞಾನ 6500, ಸಮಾಜ ವಿಜ್ಞಾನ 4693, ಜೀವ ವಿಜ್ಞಾನ 2000 ಹುದ್ದೆಗಳು ಸೇರಿವೆ.

KPSC Recruitment; 410 ಹುದ್ದೆಗಳಿಗೆ ಅರ್ಜಿ ಹಾಕಿ KPSC Recruitment; 410 ಹುದ್ದೆಗಳಿಗೆ ಅರ್ಜಿ ಹಾಕಿ

ವಿಷಯವಾರು ಕಲ್ಯಾಣ ಕರ್ನಾಟಕ; ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಂಗ್ಲ ಭಾಷೆಯ 557, ಗಣಿತ ವಿಜ್ಞಾನ 2000, ಸಮಾಜ ವಿಜ್ಞಾನ 1943, ಜೀವ ವಿಜ್ಞಾನ 1500 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಾಗಲಕೋಟೆ ಸಹಕಾರ ಬ್ಯಾಂಕ್ ನೇಮಕಾತಿ; 110 ಹುದ್ದೆಗೆ ಅರ್ಜಿ ಹಾಕಿಬಾಗಲಕೋಟೆ ಸಹಕಾರ ಬ್ಯಾಂಕ್ ನೇಮಕಾತಿ; 110 ಹುದ್ದೆಗೆ ಅರ್ಜಿ ಹಾಕಿ

ಕಲ್ಯಾಣ ಕರ್ನಾಟಕದಲ್ಲಿ ಜಿಲ್ಲಾವಾರು ಒಟ್ಟು ಹುದ್ದೆಗಳ ಸಂಖ್ಯೆ ಕಲಬುರಗಿ 953, ಯಾದಗಿರಿ 863, ಬೀದರ್ 647, ಬಳ್ಳಾರಿ 523, ವಿಜಯನಗರ 512, ಕೊಪ್ಪಳ 557, ರಾಯಚೂರು 918 ಹುದ್ದೆಗಳು ಆಗಿದೆ.

28 ಜಿಲ್ಲೆಗಳಲ್ಲಿ ವಿಷಯವಾರು ಹುದ್ದೆಗಳ ಸಂಖ್ಯೆ ಆಂಗ್ಲ ಭಾಷೆ 1250, ಗಣಿತ ವಿಜ್ಞಾನ 4500, ಸಮಾಜ ವಿಜ್ಞಾನ 2750, ಜೀವ ವಿಜ್ಞಾನ 1500 ಸೇರಿ ಒಟ್ಟು 10,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಇವುಗಳಲ್ಲಿ ಬೆಂಗಳೂರು ಉತ್ತರ 172, ಬೆಂಗಳೂರು ದಕ್ಷಿಣ 168, ಬೆಂಗಳೂರು ಗ್ರಾಮಾಂತರ 161, ಚಿಕ್ಕಬಳ್ಳಾಪುರ 287, ಕೋಲಾರ 190, ಚಿತ್ರದುರ್ಗ 296, ದಾವಣಗೆರೆ 112, ಶಿವಮೊಗ್ಗ 460, ತುಮಕೂರು 283, ಮಧುಗಿರಿ 192, ರಾಮನಗರ 170, ಬೆಳಗಾವಿ 685, ಚಿಕ್ಕೋಡಿ 1271 ಹುದ್ದೆಗಳು.

ಬಾಗಲಕೋಟೆ 730, ವಿಜಯಪುರ 839, ಧಾರವಾಡ 323, ಗದಗ 175, ಹಾವೇರಿ 363, ಕಾರವಾರ 134, ಶಿರಸಿ 432, ಮೈಸೂರು 583, ಚಾಮರಾಜನಗರ 223, ಕೊಡಗು 103, ಮಂಡ್ಯ 456, ಹಾಸನ 230, ಚಿಕ್ಕಮಗಳೂರು 129, ಕನ್ನಡ 575, ಉಡುಪಿ 258 ಹುದ್ದೆಗಳಿವೆ.

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ (6 ರಿಂದ 8 ) ಖಾಲಿ ಇರುವ 15 ಸಾವಿರ ಪದವೀಧರ ಶಿಕ್ಷಕ (ಜಿಪಿಟಿ) ಹುದ್ದೆಗಳನ್ನು ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಮರ್ಧಾತ್ಮಕ ಪರೀಕ್ಷೆ ಮೇ 21 ಮತ್ತು 22ರಂದು ನಡೆಯಲಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡುವ ಮೊದಲು ಯೂಸರ್ ನೇಮ್, ಪಾಸ್ ವರ್ಡ್‌ ಹಾಕಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಮತ್ತು ಅಂಗವಿಕಲ ಅಭ್ಯರ್ಥಿಗಳು ಒಂದು ಹುದ್ದೆಗೆ 625 ರೂ. ಮತ್ತು ಎರಡು ಹುದ್ದೆಗೆ 1250 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಇತರ ವರ್ಗದ ಅಭ್ಯರ್ಥಿಗಳು ಒಂದು ಹುದ್ದೆಗೆ 1250 ರೂ. ಮತ್ತು ಎರಡು ಹುದ್ದೆಗೆ 2500 ರೂ. ಶುಲ್ಕವನ್ನು ಪಾವತಿ ಮಾಡಬೇಕು ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ

English summary
Karnataka education department invited applications for 15,000 graduate primary teacher posts. Here are the details of district wise and subject wise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X