ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ಸಾವಿರ ಶಿಕ್ಷಕರ ನೇಮಕಾತಿ; ಶಿಕ್ಷಣ ಇಲಾಖೆ ಸ್ಪಷ್ಟನೆಗಳು

|
Google Oneindia Kannada News

ಬೆಂಗಳೂರು, ಏಪ್ರಿಲ್ 05; ಕರ್ನಾಟಕ ಸರ್ಕಾರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 15 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಏಪ್ರಿಲ್ 22ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 5,000 ಮತ್ತು ಇತರ ಜಿಲ್ಲೆಗಳಲ್ಲಿ ಒಟ್ಟು 10,000 ಸೇರಿ 15 ಸಾವಿರ ಪದವೀಧರ ಪ್ರಾಥಮಿಕ (6 ರಿಂದ 8) ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇಮಕಾತಿ ಆದೇಶದ ಕುರಿತು ಹಲವು ಸ್ಪಷ್ಟನೆಗಳನ್ನು ಕೇಳಲಾಗಿದೆ.

Karnataka Teacher Recruitment 2022; ಜಿಲ್ಲಾ, ವಿಷಯವಾರು ಹುದ್ದೆಗಳ ವಿವರKarnataka Teacher Recruitment 2022; ಜಿಲ್ಲಾ, ವಿಷಯವಾರು ಹುದ್ದೆಗಳ ವಿವರ

ಈ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಸ್ಪಷ್ಟನೆಗಳನ್ನು ನೀಡಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಕೇಳಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ. ಅರ್ಜಿ ಸಲ್ಲಿಸುವ ಆಸಕ್ತರು ಈ ಸ್ಪಷ್ಟನೆಗಳನ್ನು ಓದಿಕೊಳ್ಳಬಹುದು.

RDPR Recruitment 2022 : ಗ್ರಾಮೀಣಾಭಿವೃದ್ಧಿ ಇಲಾಖೆ ನೇಮಕಾತಿ; 6406 ಹುದ್ದೆಗಳು RDPR Recruitment 2022 : ಗ್ರಾಮೀಣಾಭಿವೃದ್ಧಿ ಇಲಾಖೆ ನೇಮಕಾತಿ; 6406 ಹುದ್ದೆಗಳು

15,000 Teacher Recruitment Clarification By Education Department

* ಬಿಇ ಪದವೀಧರನಾಗಿದ್ದು ಬಿಇಡಿ ಮತ್ತು ಟಿಇಟಿ ಅರ್ಹತೆ ಪಡೆದಿಲ್ಲ. ಪ್ರಸ್ತುತ ಕರೆದಿರುವ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದೇ?

ಬಿಇ ಪದವಿಯೊಂದಿಗೆ ಬಿಇಡಿ/ ಡಿಎಲ್‌ಇಡಿ ಮತ್ತು ಟಿಇಟಿ ಪತ್ರಿಕೆ-2ರಲ್ಲಿ ಅರ್ಹತೆ ಪಡೆದಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಅರ್ಹತೆ ಪಡೆದಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

* 2ಎ ವರ್ಗಕ್ಕೆ ಸೇರಿದ ಅಭ್ಯರ್ಥಿಯಾಗಿದ್ದು ಶಿಕ್ಷಕರ ಅರ್ಹತಾ (ಸಿಟಿಇಟಿ) ಪರೀಕ್ಷೆಯಲ್ಲಿ ಶೇ 55 ಅಂಕಗಳೊಂದಿಗೆ ಅರ್ಹತೆ ಪಡೆದಿರುತ್ತೇನೆ. ನಾನು ಜಿಪಿಟಿ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?

2ಎ/ 2ಬಿ/ 3ಎ/ 3ಬಿ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಸಿಟಿಇಟಿಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳೊಂದಿಗೆ ಅರ್ಹತೆ ಪಡೆದವರು ಹಾಗೂ ಪರಿಶಿಷ್ಟ ಜಾತಿ/ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳು ಕನಿಷ್ಠ ಶೇ 55ರಷ್ಟು ಅಂಕಗಳೊಂದಿಗೆ ಅರ್ಹತೆ ಪಡೆದವರು ಜಿಪಿಟಿ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

KPSC ಮೂಲಕ ಶೀಘ್ರವೇ ಕಾರ್ಮಿಕ ಇಲಾಖೆ ನೇಮಕಾತಿ KPSC ಮೂಲಕ ಶೀಘ್ರವೇ ಕಾರ್ಮಿಕ ಇಲಾಖೆ ನೇಮಕಾತಿ

* ಕಲ್ಯಾಣ ಕರ್ನಾಟಕ ಪ್ರದೇಶದ 371 (ಜೆ) 7 ಜಿಲ್ಲೆಗಳ ವ್ಯಾಪ್ತಿಗೆ ಸೇರಿದ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಬಹುದೇ? ಎಂದು ಪ್ರಶ್ನಿಸಲಾಗಿದೆ. ಅರ್ಜಿ ಸಲ್ಲಿಸಬಹುದು ಎಂದು ಶಿಕ್ಷಣ ಇಲಾಖೆ ಹೇಳಿದೆ.

* ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ-2 ಅನ್ನು ಯಾವ ಮಾಧ್ಯಮದಲ್ಲಿಯಾದರೂ ಉತ್ತರಿಸಬಹುದೇ?.

ಪತ್ರಿಕೆ-2ರ ವಿವರಣಾತ್ಮಕ ಉತ್ತರಗಳನ್ನು ಅಭ್ಯರ್ಥಿಯು ಆಯ್ಕೆ ಬಯಸುವ ಹುದ್ದೆಯ ಬೋಧನಾ ಮಾಧ್ಯಮದಲ್ಲಿ ಅಥವ ಆಂಗ್ಲ ಭಾಷೆಯಲ್ಲಿ ಉತ್ತರಿಸಬೇಕು. ಆದರೆ ಎಲ್ಲಾ ಪ್ರಶ್ನೆಗಳನ್ನು ಒಂದೇ ಭಾಷೆಯಲ್ಲಿ ಉತ್ತರಿಸಬೇಕು.

* ಅರ್ಜಿಗಳನ್ನು ಸಲ್ಲಿಕೆ ಮಾಡುವ ವಿಕಲಚೇತನ ಅಭ್ಯರ್ಥಿಗಳು ವೈದ್ಯಕೀಯ ಮಂಡಳಿಯಿಂದ ಈಗಾಗಲೇ ಪಡೆದ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದೆ? ಎಂದು ಪ್ರಶ್ನಿಸಲಾಗಿದೆ.

ಚಾಲ್ತಿಯಲ್ಲಿರುವ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಗಳು ಸಲ್ಲಿಕೆ ಮಾಡಬಹುದು ಎಂದು ಶಿಕ್ಷಣ ಇಲಾಖೆ ಹೇಳಿದೆ.

ಎಷ್ಟು ಹುದ್ದೆಗಳ ಭರ್ತಿ?; ಕಲ್ಯಾಣ ಕರ್ನಾಟಕ ಭಾಗದಲ್ಲಿ 5000 ಮತ್ತು ಇತರ ಜಿಲ್ಲೆಗಳಲ್ಲಿ ಒಟ್ಟು 10,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳಲ್ಲಿ ಆಂಗ್ಲ ಭಾಷೆಯ 1807, ಗಣಿತ ವಿಜ್ಞಾನ 6500, ಸಮಾಜ ವಿಜ್ಞಾನ 4693, ಜೀವ ವಿಜ್ಞಾನ 2000 ಹುದ್ದೆಗಳಿವೆ.

ನೇಮಕಾತಿ ಅಧಿಸೂಚನೆಯ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ ಜಿಲ್ಲಾವಾರು ಒಟ್ಟು ಹುದ್ದೆಗಳು ಕಲಬುರಗಿ 953, ಯಾದಗಿರಿ 863, ಬೀದರ್ 647, ಬಳ್ಳಾರಿ 523, ವಿಜಯನಗರ 512, ಕೊಪ್ಪಳ 557, ರಾಯಚೂರು 918.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಮರ್ಧಾತ್ಮಕ ಪರೀಕ್ಷೆಗಳು ಮೇ 21 ಮತ್ತು 22ರಂದು ನಡೆಯಲಿವೆ.

English summary
Karnataka education department clarification on 15,000 graduate primary teacher post recruitment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X