ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ನಾವು ಮಾಡಿದ್ದೆಂದು ಹೇಳಿಯೇ ಇಲ್ಲ: ಪಾಕ್ ಸಚಿವ ಯೂಟರ್ನ್

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 30: ಪುಲ್ವಾಮಾ ದಾಳಿಯನ್ನು ನಾವೇ ಮಾಡಿಸಿದ್ದು ಎಂದು ತಪ್ಪೊಪ್ಪಿಕೊಂಡಿದ್ದ ಪಾಕ್ ಸಚಿವ ಇದೀಗ ಯೂಟರ್ನ್ ಹೊಡೆದಿದ್ದಾರೆ.

ಪುಲ್ವಾಮಾ ದಾಳಿ ಮಾಡಿಸಿದ್ದು ನಾವೇ ಎಂದು ಎಲ್ಲಿಯೂ ಹೇಳೇ ಇಲ್ಲ, ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಿಲ್ಲ, ಪುಲ್ವಾಮಾ ದಾಳಿ ಕುರಿತು ತಾವು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಫಹಾದ್ ಚೌಧರಿ ಹೇಳಿದ್ದಾರೆ.

ಪುಲ್ವಾಮಾ ಉಗ್ರರ ದಾಳಿ ನಡೆಸಿದ್ದು ನಾವೇ: ಬಹಿರಂಗವಾಗಿ ಒಪ್ಪಿಕೊಂಡ ಪಾಕ್ಪುಲ್ವಾಮಾ ಉಗ್ರರ ದಾಳಿ ನಡೆಸಿದ್ದು ನಾವೇ: ಬಹಿರಂಗವಾಗಿ ಒಪ್ಪಿಕೊಂಡ ಪಾಕ್

ಚೌಧರಿಯವರ ಹೇಳಿಕೆ ನಿನ್ನೆ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ತೀವ್ರ ಕೋಲಾಹಲವೆಬ್ಬಿಸಿತ್ತು. ಇದಾದ ಬಳಿಕ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಚೌಧರಿ, ನಮ್ಮ ಯುದ್ಧ ವಿಮಾನ ಭಾರತದ ಯುದ್ಧ ವಿಮಾನದ ಗುರಿಯನ್ನು ಕೆಡವಿ ಹಾಕಲು ಯತ್ನಿಸಿತಷ್ಟೆ, ನಾವು ಮುಗ್ಧ ನಾಗರಿಕರನ್ನು ಕೊಲ್ಲುವ ಮನಸ್ಥಿತಿ ಹೊಂದಿಲ್ಲ, ಭಯೋತ್ಪಾದನೆಗೆ ನಮ್ಮ ಬೆಂಬಲವಿಲ್ಲ ಎಂದಿದ್ದಾರೆ.

Pakistan Minister Fawad Backtracks On Pulwama Attack Remark

ಪುಲ್ವಾಮಾ ದಾಳಿ, ಬಾಲಾಕೋಟ್ ವಾಯುದಾಳಿ, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಿಡುಗಡೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಪುಲ್ವಾಮಾ ದಾಳಿಯನ್ನು ನಾವೇ ಮಾಡಿಸಿದ್ದು ಎಂದು ಪಾಕಿಸ್ತಾನ ಒಪ್ಪಿಕೊಂಡಿತ್ತು ಕೂಡ.

ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಅಯಾಜ್ ಸಾದಿಕ್ ಅವರು ಶಾ ಮೊಹಮ್ಮದ್ ಖುರೇಷಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಅವರ ನಡುವೆ ಕ್ಯಾಪ್ಟನ್ ಅಭಿನಂದನ್ ವರ್ತಮಾನ್ ಬಿಡುಗಡೆ ಕುರಿತು ನಡೆದ ಮಾತುಕತೆಯನ್ನು ಬಹಿರಂಗಗೊಳಿಸಿದ ನಂತರ ಫವಾದ್ ಚೌಧರಿ ಈ ಹೇಳಿಕೆ ನೀಡಿದ್ದಾರೆ.

ಆದರೆ ನಿನ್ನೆ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಫವಾದ್ ಚೌಧರಿ, ನನ್ನ ಹೇಳಿಕೆ ಸ್ಪಷ್ಟವಾಗಿದೆ, ನಾನು ಮಾತನಾಡಿದ್ದು ಆಪರೇಷನ್ ಸ್ವಿಫ್ಟ್ ರೆಸಾರ್ಟ್ ಬಗ್ಗೆ ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನ ನಡೆಸಿದ ಕಾರ್ಯಾಚರಣೆ ಬಗ್ಗೆ.

ಬಾಲಾಕೋಟ್ ನಲ್ಲಿ ಪಾಕಿಸ್ತಾನ ಪ್ರಾಂತ್ಯದೊಳಗೆ ಭಾರತ ನುಗ್ಗಲು ಪ್ರವೇಶಿಸಿದಾಗ ನಾವು ಆಪರೇಷನ್ ಸ್ವಿಫ್ಟ್ ರೆಸಾರ್ಟ್ ಗೆ ಪ್ರಯತ್ನಿಸಿದೆವು. ಮೇಲ್ನೋಟದಿಂದ ಆ ಬಗ್ಗೆ ಮಾತನಾಡುವಾಗ ಪುಲ್ವಾಮಾ ಹೆಸರು ಬಳಸಿಕೊಂಡೆ ಅಷ್ಟೆ ಎಂದಿದ್ದಾರೆ.

English summary
After admitting that Pakistan was responsible for the 2019 Pulwama terrorist attack in Jammu and Kashmir that killed 40 CRPF personnel and brought the two countries to the brink of war, the senior Pakistani minister Fawad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X