ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ಸಾವಿರ ನೌಕರರ ಮನೆಗೆ ಕಳುಹಿಸಲು ಸಜ್ಜಾದ Rolls-Royce

|
Google Oneindia Kannada News

ಲಂಡನ್, ಮೇ 20: ಐಷಾರಾಮಿ ವಾಹನಗಳು ಹಾಗೂ ದೊಡ್ಡ ದೊಡ್ಡ ವಿಮಾನಗಳ ಎಂಜಿನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿಯಿರುವ ಬ್ರಿಟನ್ ಮೂಲದ ರೋಲ್ಸ ರಾಯ್ಸ್ (Rolls-Royce) ಕಂಪೆನಿಗೆ ಕೊರೊನಾ ಲಾಕ್‌ಡೌನ್ ಬಿಸಿ ತಟ್ಟಿದೆ.

ವಿಶ್ವಾದ್ಯಂತ ಇರುವ ತನ್ನ ಕಂಪೆನಿಯ 9 ಸಾವಿರ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ಕಂಪೆನಿ ತಿಳಿಸಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಇದರಿಂದ ಕಂಪೆನಿಯ ಶೇ 6 ರಷ್ಟು ಉದ್ಯೋಗಿಗಳು ಮನೆಗೆ ಹೋಗಲಿದ್ದಾರೆ. ಕೊರೊನಾ ಲಾಕ್‌ಡೌನ್ ನಿಂದಾಗಿ ಜಗತ್ತಿನಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರ ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಹೀಗಾಗಿ ವಿಮಾನಗಳಿಗೆ ಎಂಜಿನ್ ತಯಾರಿಸುವುದು ಹಾಗೂ ಇನ್ನಿತರ ಪ್ರಮುಖ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ರೋಲ್ಸ ರಾಯ್ಸ್ ಕಂಪೆನಿಗೂ ಹೊಡೆತ ಬಿದ್ದಿದೆ. ಹೀಗಾಗಿ ಅನಿವಾರ್ಯವಾಗಿ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ ಎಂದು ವರದಿ ಹೇಳಿದೆ.

Lockdown Effect: Rolls-Royce Cuts 9000 Jobs

ರೋಲ್ಸ ರಾಯಿ ಕಂಪೆನಿ 1987 ರ ನಂತರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆಲಸಗಾರರನ್ನು ತೆಗೆದು ಹಾಕುತ್ತಿದೆ. ಇದೂ ತೀವ್ರ ಆರ್ಥಿಕ ಸಂಕಷ್ಟದ ಸಮಯ. ಹೀಗಾಗಿ ಕೆಲವು ಕ್ರಮಗಳು ಅನಿವಾರ್ಯವಾಗಿ ಮಾಡಬೇಕಿದೆ. ಕೆಲಸಗಾರರನ್ನಷ್ಟೇ ಅಲ್ಲ, ಕಂಪೆನಿಯ ಎಲ್ಲ ಪ್ರಕಾರದ ವೆಚ್ಚಗಳನ್ನೂ ಕಡಿತಗೊಳಿಸಲಾಗುವುದು ಎಂದು ಕಂಪೆನಿಯ ಎಂಡಿ ಹೇಳಿರುವ ಬಗ್ಗೆ ವರದಿ ಉಲ್ಲೇಖಿಸಿದೆ.

English summary
Lockdown Effect: Rolls-Royce Cuts 9000 Jobs. Rolls-Royce is britain based company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X