keyboard_backspace

ಅನ್ ಲೈನ್ ಲೊನ್ ಆಪ್ ಟಾರ್ಚರ್: ಪಾರಾಗೋಕೆ ಒಂದು ಐಡಿಯಾ !

Google Oneindia Kannada News

ಬೆಂಗಳೂರು, ಫೆಬ್ರವರಿ 03: ಆನ್ ಲೈನ್ ನಲ್ಲಿ ಬಿಡಿಗಾಸು ನೀಡಿ ಅಕ್ರಮ ಬಡ್ಡಿ ದಂಧೆ ಮಾಡುತ್ತಿರುವ ಆನ್ ಲೈನ್ ಲೋನ್ ಆಪ್ ಗಳ ವಿರುದ್ಧ ಸಮರ ಸಾರಿದ್ದ ಸಿಸಿಬಿ ಪೊಲೀಸರು ಯಾಕೋ ತಣ್ಣಗಾಗಿದ್ದಾರೆ. ಅನ್ ಲೈನ್ ನಲ್ಲಿ ಮೀಟರ್ ಬಡ್ಡಿಗಿಂತಲೂ ದುಬಾರಿ ಸುಲಿಗೆ ಮಾಡುತ್ತಿರುವ ಲೋನ್ ಆಪ್ ಗಳ ಜಾಲಕ್ಕೆ ಸಿಲುಕಿ ಲಕ್ಷಾಂತರ ಜನ ಮತ್ತೆ ನರಕ ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಲೋನ್ ಆಪ್ ಗಳ ಕಿರುಕುಳದಿಂದ ತಪ್ಪಿಸಿಕೊಳ್ಳಲು ಇನ್ನು ಉಳಿದಿರುವುದೊಂದೇ ರಾಜ ಮಾರ್ಗ. ಅದನ್ನು ಬಿಟ್ಟರೆ ಈ ಸಂಕಷ್ಟದಿಂದ ಪಾರಾಗಲು ಬೇರೆ ದಾರಿಯೇ ಇಲ್ಲ ! ಈ ಕುರಿತ ಪೂರ್ಣ ಡಿಟೇಲ್ ಇಲ್ಲಿದೆ.

ಆನ್‌ ಲೈನ್ ಲೋನ್ ಆಪ್‌ ಗಳಿಂದ ಪಡೆದ ಸಾಲ ಮನ್ನಾ ಆದಂಗೆ ? ಆನ್‌ ಲೈನ್ ಲೋನ್ ಆಪ್‌ ಗಳಿಂದ ಪಡೆದ ಸಾಲ ಮನ್ನಾ ಆದಂಗೆ ?

ಸಿಸಿಬಿ ಆರಂಭ ಶೂರತ್ವ

ಸಿಸಿಬಿ ಆರಂಭ ಶೂರತ್ವ

ನೆರೆಯ ತೆಲಂಗಾಣದಲ್ಲಿ ಆನ್ ಲೈನ್ ಲೋನ್ ಆಪ್ ಗಳು ಮರ್ಯಾದೆ ತೆಗೆದ ಹಿನ್ನೆಲೆಯಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಸುಮಾರು ನಾನೂರು ಅನ್ ಅನ್ ಲೈನ್ ಆಪ್ ಗಳ ವಿರುದ್ಧ ಕೇಸು ದಾಖಲಿಸಿ ತೆಲಂಗಾಣ ಪೊಲೀಸರು ಸೊಕ್ಕು ಮುರಿದಿದ್ದರು. ಇದೇ ವೇಳೆ ಬೆಂಗಳೂರು ಸಿಸಿಬಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಅರಂಭಿಸಿದ್ದರು. ಮತ್ತೊಂದಡೆ ಸಿಐಡಿ ಸೈಬರ್ ವಿಭಾಗದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ರಾಜ್ಯದ ಪೊಲೀಸರನ್ನು ನೋಡಿ ನೆರೆ ತಮಿಳುನಡು ಪೊಲೀಸರು ಕೂಡ ತನಿಖೆಗೆ ಕೈ ಹಾಕಿದ್ದರು. . ಈ ವೇಳೆ ಅನ್ ಲೈನ್ ಲೋನ್ ಆಪ್‌ ಗಳ ಉಪಟಳ ಸದ್ದಿಲ್ಲದೇ ತಣ್ಣಗಾಗಿತ್ತು. ಕಾಲ್ ಸೆಂಟರ್ ಮೂಲಕ ಮಾರ್ಯಾದೆ ತೆಗೆಯುವ ಚಿತ್ರ ಹಿಂಸೆಗೆ ಬ್ರೇಕ್ ಬಿದ್ದಿತ್ತು. ಕೋವಿಡ್ ಕಾಲದಲ್ಲಿ ಸಣ್ಣ ಪುಟ್ಟ ಲೋನ್ ಪಡೆದ ಮುಗ್ಧ ಜನರು ನಿರಾಳರಾಗಿದ್ದರು.

ಇದ್ದಕ್ಕಿದ್ದಂತೆ ತನಿಖೆ ಸ್ಥಗಿತ

ಇದ್ದಕ್ಕಿದ್ದಂತೆ ತನಿಖೆ ಸ್ಥಗಿತ

ಅನ್ ಲೈನ್ ಲೋನ್ ಆಪ್ ಗಳ ವಿರುದ್ಧ ಆರಂಭ ಶೂರತ್ವ ತೋರಿದ್ದ ಸಿಸಿಬಿ ಪೊಲೀಸರು ಇದೀಗ ಮೌನವಾಗಿದ್ದಾರೆ. ಸಿಐಡಿ ಸೈಬರ್ ಪೊಲೀಸರು ಸಾಲ ತಗೊಂಡವರು ಕಟ್ಟಲಿ ಬಿಡಿ ಎಂಬ ತೀರ್ಮಾನಕ್ಕೆ ಬಂದಂತಾಗಿದೆ. ಇದನ್ನು ಅರಿತ ಅನ್ ಲೈನ್ ಲೊನ್ ಆಪ್ ಗಳ ಹಾವಳಿ ಹೆಚ್ಚಾಗಿದೆ. ಸಿಸಿಬಿ ಪೊಲೀಸರ ತನಿಖೆ ಸ್ಥಗಿತಗೊಳ್ಳುತ್ತಿದ್ದಂತೆ ಮತ್ತೆ ಅನಾಮಿಕ ಕರೆ ಮಾಡಿ ಬೆದರಿಸುತ್ತಿದ್ದಾರೆ. ನೀವು ಎರಡು ದಿನದಲ್ಲಿ ಲೋನ್ ಕಟ್ಟದಿದ್ದಲ್ಲಿ ಲೀಗಲ್ ನೋಟಿಸ್ ನೀಡುತ್ತೇವೆ. ಬಂಧಿಸುತ್ತೇವೆ ಎಂದೆಲ್ಲಾ ಹೆದರಿಸುತ್ತಿದ್ದಾರೆ. ಮಾತ್ರವಲ್ಲ ನಕಲಿ ಲೀಗಲ್ ನೋಟಿಸ್ ಗಳನ್ನು ವಾಟ್ಸಪ್ ಮೂಲಕ ಕಳುಹಿಸಿ ಭೀತಿ ಹುಟ್ಟಿಸುತ್ತಿದ್ದಾರೆ. ಇನ್ನೂ ಕೆಲವು ಪ್ರಕರಣದಲ್ಲಿ ಆಪ್ತರ ಸಂಪರ್ಕ ಸಂಖ್ಯೆಗಳಿಗೆ ಲೋನ್ ಡೀ ಫಾಲ್ಟರ್ ಎಂದು ಸಂದೇಶ ಕಳಿಸಿ ಮರ್ಯಾದೆ ಹರಾಜು ಹಾಕುವ ಪ್ರಸಂಗ ಮತ್ತೆ ಜಾಸ್ತಿಯಾಗಿವೆ.

ಅನಾಮಿಕ ಕರೆಗಳಿಂದ ಬೆದರಿಕೆ

ಅನಾಮಿಕ ಕರೆಗಳಿಂದ ಬೆದರಿಕೆ

ಕೇವಲ ಮೂರು ಸಾವಿರ ಸಾಲ ಪಡೆದರೆ ಐದು ಸಾವಿರ ಅಕ್ರಮ ಬಡ್ಡಿ ಪೀಕುವ ಲೋನ್ ಆಪ್ ಗಳು ಮತ್ತೆ ಪುಟಿದೇಳಿವೆ. ಸಾಲ ಪಡೆದವರಿಗೆ ಅನಾಮಿಕ‌ ಮೊಬೈಲ್ ನಿಂದ ಕರೆ ಮಾಡಿ ದಮ್ಕಿ ಹಾಕುತ್ತಿದ್ದಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಲೀಗಲ್ ನೋಟಿಸ್ ಕೊಡ್ತೇವೆ. ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಮಾಡುತ್ತೇವೆ ಎಂಸು ಹೆದರಿಸಿ ಬಡ್ಡಿ ಸುಲಿಗೆಗೆ ಇಳಿದಿದ್ದಾರೆ. ಆಪ್ ಗಳ ವಿರುದ್ಧ ನ್ಯಾಯಬದ್ಧವಾಗಿ ಕ್ರಮ‌ಜರುಗಿಸದ ಕಾರಣ ಅಕ್ರಮ ಅಪ್ ಗಳು ಮತ್ತೆ ತಮ್ಮ ಬಡ್ಡಿ ದಂಧೆ ಶುರು ಮಾಡಿವೆ . ಸಿಸಿಬಿ ಪೊಲೀಸರು ಕೇಸು ದಾಖಲಿಸಿದ ವೇಳೆ ಕರೆಗಳು ಬರುತ್ತಿರಲಿಲ್ಲ. ನಾನು ಎಂಟು ಸಾವಿರ ಸಾಲ ಪಡೆದಿದ್ದೇನೆ. ಕೈಗೆ ಸಿಕ್ಕಿದ್ದೇ ಆರು ಸಾವಿರ. ಅದರ ಬದಲಿಗೆ ಹನ್ನೆರಡು ಸಾವಿರ ಕಟ್ಟಿದರೂ ಸಾಲ ತೀರಿಲ್ಲ. ಈಗಲೂ ಮತ್ತೆ ಕರೆ ಮಾಡಿ ಲೀಗಲ್ ನೋಟಿಸ್ ಕೊಡುತ್ತೇವೆ. ನಿಮ್ಮ ಮೇಲೆ ಕೇಸು ದಾಖಲಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ ಎಂದು ಆನ್‌ಲೈನ್ ನಲ್ಲಿ ಲೋನ್ ಪಡೆದು ಕಟ್ಟಲಾಗದೇ ಸಂಕಷ್ಟದಲ್ಲಿರುವ ಖಾಸಗಿ ಕಂಪನಿ ಉದ್ಯೋಗಿ ಮಹೇಶ್ ತನ್ನ ಅಸಹಾಯಕತೆ ತೋಡಿಕೊಂಡರು.

ಕಾನೂನು ಪ್ರಕಾರ ತಪ್ಪು ಆದ್ರೂ !

ಕಾನೂನು ಪ್ರಕಾರ ತಪ್ಪು ಆದ್ರೂ !

ದೇಶದಲ್ಲಿ ಯಾವುದೇ ಬ್ಯಾಂಕ್ ಬ್ಯಾಂಕೇತರ ಸಂಸ್ಥೆ ಮೊದಲು ಆರ್ ಬಿಐ ಅಥವಾ ಆಯಾ ರಾಜ್ಯ ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಿರಬೇಕು. ಅ ಸಂಸ್ಥೆಗಳು ಇಷ್ಟೇ ಪ್ರಮಾಣದಲ್ಲಿ ಸಾರ್ಜಜನಿಕರಿಗೆ ಬಡ್ಡಿಗೆ ನೀಡಬೇಕೆಂಬ ನಿಯಮಗಳಿವೆ.‌ಉದಾಹರಣೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರ್ಷಿಕ 15 ಪರ್ಸೆಂಟ್ ವರೆಗೂ ನೀಡಲು ಅವಕಾಶ ನೀಡಿದೆ. ಬ್ಯಾಂಕೇತರ ಸಂಸ್ಥೆಗಳು ವಾರ್ಷಿಕ 13 ಪರ್ಸೆಂಟ್ ಮೀರಿ ಬಡ್ಡಿ ಪಡೆಯುವಂತಿಲ್ಲ. ಆದರೆ ಯಾವ ಅರ್ ಬಿಐ ನೊಂದಾಯಿತ ಬ್ಯಾಂಕೇತರ ಸಂಸ್ಥೆಗಳಲ್ಲಿ ನೋಂದಾಯಿಸದೇ ಅನ್ ಲೈನ್ ಅನ್ ಅಪ್ ಗಳು ಅಕ್ರಮ ಬಡ್ಡಿ ದಂಧೆ ನಡೆಸುತ್ತಿವೆ. ಕಾನೂನು ಬಾಹಿರ ವಾಗಿ ನಡೆಸುತ್ತಿರುವ ಬಡ್ಡಿ ದಂಧೆಯ ವಿರುದ್ಧ ಪೊಲೀಸರು ಸಮರ್ಥ ತನಿಖೆ ನಡೆಸಿ ಅವನ್ನು ಮಟ್ಟ ಹಾಕಬೇಕಿತ್ತು. ಕೇವಲ ಐಟಿ ಕಾಯ್ದೆ ಉಲ್ಲಂಘನೆ ಕುರಿತು ಚೌಕಟ್ಟು ಹಾಕಿಕೊಂಡಿದ್ದರಿಂದ ಇತ್ತ ಸಿಐಡಿ ತನಿಖೆಯೂ ಊರ್ಜಿತವಾಗಿಲ್ಲ ಅತ್ತ ಸಿಸಿಬಿ ತನಿಖೆಯೂ ಊರ್ಜಿತವಾಗಿಲ್ಲ. ಹೀಗಾಗಿ ಆನ್‌ಲೈನ್ ಲೋನ್ ಆಪ್ ಗಳಿಂದ ಸಾಲ ಪಡೆದವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆನ್‌ಲೈನ್ ಲೋಪ್ ಗಳಿಗೆ ಮಾಡುತ್ತಿರುವುದು ಅಕ್ರಮ ದಂಧೆ ಅಂತ ಗೊತ್ತಿದ್ದರೂ ತಮ್ಮ ಚಾಳಿ ಮುಂದುವರೆಸಿವೆ.

ಪರಿಹಾರಕ್ಕೆ ರಾಜ ಮಾರ್ಗ

ಪರಿಹಾರಕ್ಕೆ ರಾಜ ಮಾರ್ಗ

ಇನ್ನು ಮೂರು ಸಾವಿರ ಸಾಲ ಕೊಟ್ಟು ಆರು ಸಾವಿರ ಪೀಕುವ ಆನ್‌ಲೈನ್ ಲೋನ್ ಆಪ್‌ಗಳ ಅಕ್ರಮ ಬಡ್ಡಿ ದಂಧೆಗೆ ಸಾಲ ಪಡೆದವರೇ ತಕ್ಕ ಪಾಠ ಕಲಿಸಲು ಕೇವಲ ಇರುವುದು ಎರಡೇ ಮಾರ್ಗ. ಒಂದು ಅವರ ಕರೆಗಳಿಗೆ, ಗೊಡ್ಡು ಬೆದರಿಕೆಗಳಿಗೆ ನೋಟಿಸ್ ಗಳಿಗೆ ಹೆದರದೇ ಮೌನವಾಗಿ ಇರುವುದು. ಇಲ್ಲವೇ ಕಾನೂನು ಮೂಲಕ ತಕ್ಕ ಶಾಸ್ತ್ರಿ ಮಾಡುವುದು. ಕೇರಳದಲ್ಲಿ ಯುವಕನೊಬ್ಬ ಮಾಡಿದ ಕೆಲಸದಿಂದ ಆರಾಜ್ಯದ ಆನ್‌ಲೈನ್ ಲೋನ್ ಆಪ್ ಸಾಲಗಾರರಿಗೆ ಹೊಸ ಭರವಸೆ ಸಿಕ್ಕಿದಂತಾಗಿದೆ. ಇದೀಗ ರಾಜ್ಯದಲ್ಲಿ ತುರ್ತು ಸಾಲ ಪಡೆದು ಸಂಕಷ್ಟಕ್ಕೀಡಾಗಿರುವರಿಗೆ ಇರುವುದು ಅದೊಂದೆ ಮಾರ್ಗ!

ಕೇರಳ ಹುಡುಗನ ಐಡಿಯಾ

ಕೇರಳ ಹುಡುಗನ ಐಡಿಯಾ

ಕೇರಳದ ನಿಹಾನ್ ಎಂಬಾತ ಕ್ರೆಟಿಟ್ ಬೀ ಕ್ರೆಡಿಟ್ ಈಜಿ ಆನ್‌ಲೈನ್ ಲೋನ್ ಆಪ್‌ ನಿಂದ ಎಂಟು ಸಾವಿರ ಸಾಲ ಪಡೆದಿದ್ದ. ಸಾಲ ನೀಡುವಾಗಲೇ ಬಡ್ಡಿ ಮುರಿದುಕೊಂಡಿದ್ದರು. ಸಾಲ ಕಟ್ಟಿಲ್ಲ ಎಂದು ಇತ್ತೀಚೆಗೆ ಆತನಿಗೆ ಬೆದರಿಕೆ ಹಾಕುತ್ತಿದ್ದರು. ಅದ್ಯಾವುದಕ್ಕೂ ನಿಹಾಸ್ ಹೆದರಿರಲಿಲ್ಲ. ಈತನ ಮೊಬೈಲ್ ಡಾಟಾ ಕದ್ದು ದುರುಪಯೋಗ ಮಾಡಿಕೊಂಡಿದ್ದರು. ನಿಹಾಸ್ ಸ್ನೇಹಿತರಿಗೆ ಲೋನ್ ಡೀ ಫಾಲ್ಟರ್ ಎಂದು ಸಂದೇಶ ಕಳುಹಿಸಿ ಮಾತ್ರವಲ್ಲದೇ ಕೇರಳ ಸರ್ಕಾರದ ಚಿನ್ಹೆ ಬಳಸಿ ಹೆದರಿಸಿದ್ದರು. ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ನಿಹಾಸ್ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ. ಎಂಟು ಸಾವಿರ ರೂಪಾಯಿ ಸಾಲ ಕೊಟ್ಟು ಅಕ್ರಮ ಬಡ್ಡಿ ವಸೂಲಿ ಮಾಡಿದ್ದಲ್ಲದೇ, ಸಾರ್ವಜನಿಕವಾಗಿ ನಿಂದನೆ ಮಾಡಿ ಟಾರ್ಚರ್ ಮಾಡಿದ್ದ ಬಗ್ಗೆ ಕೋರ್ಟ್‌ ನಲ್ಲಿ ವಿವರಿಸಿದ್ದರು. ನಿಹಾಸ್ ನ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೇರಳಾ ಹೈಕೋರ್ಟ್ ಈ ಕುರಿತು ಸಮಗ್ರ ತನಿಖೆ ಮಾಡುವಂತೆ ಕೇರಳದ ಐಜಿಗೆ ಹೈಕೋರ್ಟ್ ಸೂಚನೆ ನೀಡಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಕೇರಳದಲ್ಲಿ ಇದೀಗ ಆನ್‌ಲೈನ್ ಲೋನ್‌ ಆಪ್ ಗಳ ಅಕ್ರಮದ ಬಗ್ಗೆ ಸಮರ್ಥ ತನಿಖೆ ನಡೆಯುತ್ತಿದೆ.

ನ್ಯಾಯ ಮಾರ್ಗವೊಂದೇ ರಾಜಮಾರ್ಗ

ನ್ಯಾಯ ಮಾರ್ಗವೊಂದೇ ರಾಜಮಾರ್ಗ

ಇನ್ನೂ ರಾಜ್ಯದಲ್ಲಿ ಆನ್‌ಲೈನ್ ಲೋನ್ ಆಪ್‌ಗಳ ಜಾಲಕ್ಕೆ ಸಿಲುಕಿ ನಲಗುತ್ತಿರುವರು ಲಕ್ಷಾಂತರ ಮಂದಿಯಿದ್ದಾರೆ. ಕೆಲವರು ಒಗ್ಗೂಡಿ ಆನ್‌ಲೈನ್ ಲೋನ್ ಆಪ್‌ಗಳ ಅಕ್ರಮ ಬಡ್ಡಿ ದಂಧೆಯ ಬಗ್ಗೆ ಹೈಕೋರ್ಟ್ ನಲ್ಲಿ ದಾವೆ ದಾಖಲಿಸುವುದು ಸೂಕ್ತ. ದೂರನ್ನು ಆಧರಿಸಿ ನ್ಯಾಯಾಲಯ ತನಿಖೆಗೆ ಆದೇಶಿಸಿದ್ದಲ್ಲಿ, ಎಲ್ಲಾ ಲೋನ್ ಆಪ್‌ ಗಳ ಬಗ್ಗೆ ಪೊಲೀಸರು ಅನಿವಾರ್ಯವಾಗಿ ತನಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಸಾಕಷ್ಟು ಅಕ್ರಮ ಎಸಗಿ ಕಾನೂನು ಬಾಹಿರ ಬಡ್ಡಿ ದಂಧೆ ನಡೆಸುತ್ತಿರುವ ಆಪ್‌ಗಳಿಗೆ ಬುದ್ಧಿ ಕಲಿಸಿದಂತಾಗುತ್ತದೆ. ಸದ್ಯಕ್ಕೆ ಇದೊಂದೇ ಆನ್‌ಲೈನ್ ಲೋನ್ ಆಪ್‌ಗಳಿಂದ ಮುಕ್ತಿ ಪಡೆಯುವ ಏಕೈಕ ರಾಜ ಮಾರ್ಗ. ಸಿಸಿಬಿ ಪೊಲೀಸರು ತನಿಖೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಲ್ಲ. ಸಿಐಡಿ ಸೈಬರ್ ಪೊಲೀಸರು ಸುಮ್ಮನಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ದಾವೆ ಸಲ್ಲಿಸುವುದೊಂದೇ ದಾರಿ. ಹೀಗಾಗಿ ಯಾರಾದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನ್ಯಾಯಾಲಯದ ಮೊರೆ ಹೋಗುವದು ಸೂಕ್ತ. ಇಲ್ಲದಿದ್ದರೆ ಬಡವರ ರಕ್ತ ಹೀರಿ ಬೀದಿಗೆ ತರುವುದರಲ್ಲಿ ಅನುಮಾನವೇ ಇಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್ ಲೋನ್ ಆಪ್‌ಗಳಿಂದ ಅನ್ಯಾಯಕ್ಕೆ ಒಳಗಾದವರು ಒಗ್ಗೂಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸಮರ್ಥ ತನಿಖೆ ಕೋರಿ ನ್ಯಾಯಾಲಯದ ಮೊರೆ ಹೋಗುವುದು ಸೂಕ್ತ. ಇಲ್ಲದಿದ್ದರೆ ಅಕ್ರಮವಾಗಿ ಬಡ್ಡಿವಸೂಲಿ ಮಾಡಲು ಹೆದರಿಸುವ ಆಪ್ ಗಳ ಗೊಡ್ಡು ಬೆದರಿಕೆಗೆ ಹೆದರಬಾರದು. ಮೀರಿದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು ಸೂಕ್ತ ಎನ್ನುತ್ತಾರೆ ವಕೀಲರು. ಆನ್‌ಲೈನ್ ಲೋನ್ ಆಪ್ ಗಳಿಂದ ಸಂಕಷ್ಟಕ್ಕೀಡಾದವರು ನ್ಯಾಯ ಮಾರ್ಗದ ಮೂಲಕವೇ ತಕ್ಕ ಶಾಸ್ತಿ ಮಾಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

English summary
This is the only way to escape the torture of instant loan apps.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X