ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯ ಪ್ರಮುಖ ಅಂಶಗಳು ಇಲ್ಲಿವೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 7: ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ಮುಷ್ಕರ ಆರಂಭವಾಗಿದೆ. ಹಾಗಾದರೆ ಮೋಟಾರು ವಾಹನ ಕಾಯ್ದೆಯಲ್ಲೇನಿದೆ ಎನ್ನುವುದನ್ನು ಈ ಇನ್ಫೋಗ್ರಾಫಿಕ್ಸ್ ಮೂಲಕ ನೀವು ವೀಕ್ಷಿಸಬಹುದಾಗಿದೆ.

ಮೋಟಾರು ವಾಹನ ಕಾಯ್ದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ ರೂ.5 ಸಾವಿರ ದಂಡ ಕಟ್ಟಬೇಕಿದೆ. ಈ ಹಿಂದೆ ಇದ್ದ ದಂಡದ ಮೊತ್ತವನ್ನು 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸಿಗ್ನಲ್‌ ಜಂಪ್‌ ಮಾಡಿದರೆ ಇದ್ದ 200 ರೂ. ದಂಡವನ್ನು 1 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಕುಡಿದು ವಾಹನ ಚಲಾಯಿಸಿದರೆ ಇದ್ದ ದಂಡದ ಮೊತ್ತ 2 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.

ಮುಷ್ಕರಕ್ಕೆ ಕಾರಣವಾದ ಮೋಟಾರು ವಾಹನ ಕಾಯ್ದೆಯಲ್ಲೇನಿದೆ?ಮುಷ್ಕರಕ್ಕೆ ಕಾರಣವಾದ ಮೋಟಾರು ವಾಹನ ಕಾಯ್ದೆಯಲ್ಲೇನಿದೆ?

ಹೆಲ್ಮೆಟ್‌ ಹಾಕದೆ ಬೈಕ್‌ ಚಲಾವಣೆ, ಸೀಟು ಬೆಲ್ಟ್‌ ಹಾಕದೆ ಕಾರು ಚಲಾಯಿಸಿದರೆ ಇದ್ದ 100 ರೂ ದಂಡವನ್ನು 1 ಸಾವಿರಕ್ಕೆ ಏರಿಸಲಾಗಿದೆ. ಹೊಸ ವಾಹನ ಖರೀದಿ ಮಾಡಿದಾಗ ತಪ್ಪದೇ ವಿಮೆ ಮಾಡಿಸಿ. ಇಲ್ಲವಾದಲ್ಲಿ ರೂ.2 ಸಾವಿರ ದಂಡ ತೇರಬೇಕಾಗುತ್ತದೆ.

ಜೊತೆಗೆ ಚಾಲನ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದರೆ 25 ಸಾವಿರದಿಂದ 1 ಲಕ್ಷದವರೆಗೂ ದಂಡ ತೆರಬೇಕಾಗುತ್ತದೆ. ಅಪ್ರಾಪ್ತರು ಗಾಡಿ ಓಡಿಸಿದರೆ, ವಾಹನ ಮಾಲೀಕರಿಗೆ 25 ಸಾವಿರ ದಂಡ ಮತ್ತು 2 ವರ್ಷ ಜೈಲಿಗೆ ಹೋಗಬೇಕಾಗುತ್ತದೆ. ಈ ಪ್ರಮುಖ ಅಂಶಗಳನ್ನು ನೀವು ಇನ್ಫೋಗ್ರಾಫಿಕ್ಸ್‌ನಲ್ಲಿ ನೋಡಬಹುದಾಗಿದೆ.

What new motor vehicle act will cost offenders: Info graphics explains
English summary
Violation of Motor Vehicle Act will impose heavy penalty on offenders. Here is the infographics will explain you about.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X