ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಮ್ಮು, ಜ್ವರ, ತಲೆನೋವು ಕಾಣಿಸಿಕೊಂಡಿತಾ ಮುಂದೇನು ಕಥೆ: ಇಲ್ಲಿದೆ ಮಾಹಿತಿ

|
Google Oneindia Kannada News

ಬೆಂಗಳೂರು, ಜುಲೈ.09: ಕೊರೊನಾವೈರಸ್ ಅನ್ನೋ ಹೆಸರು ಕೆಳಿದರೆ ಜನರು ಕನಸಿನಲ್ಲೂ ಬೆಚ್ಚಿ ಬೀಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಈಗಾಗಲೇ ಬೇಸಿಗೆ ಕಳೆದು ಮಳೆಗಾಲ ಶುರುವಾಗಿದೆ. ಬಿಸಿಲಿನ ತಾಪದ ನಡುವೆಯೂ ವೈರಸ್ ಹಾವಳಿಗೆ ದೇಶವು ತತ್ತರಿಸಿ ಹೋಗಿದೆ.

Recommended Video

WHO ಹಾಡಿ ಹೊಗಳಿದ ಚೀನಾ | Oneindia Kannada

ಮಳೆಗಾಲದಲ್ಲಿ ಸಹಜವಾಗಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೊದಲೇ ಸಾಂಕ್ರಾಮಿಕ ರೋಗತಜ್ಞರು ಹಾಗೂ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ಸಂದೇಶವೇ ಜನರಲ್ಲಿ ಭೀತಿ ಹೆಚ್ಚುವಂತೆ ಮಾಡಿದೆ.

ಕೊರೊನಾ ವೈರಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಸಲಿ ಸತ್ಯ!ಕೊರೊನಾ ವೈರಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಸಲಿ ಸತ್ಯ!

ಭಾರತದಲ್ಲಿ ಈಗಾಗಲೇ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 7,71,833ಕ್ಕೆ ಏರಿಕೆಯಾಗಿದ್ದು, ಮಹಾಮಾರಿಗೆ ದೇಶದಲ್ಲಿ 21,174ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಇದುವರೆಗೂ 4,77,685ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದರೆ, 2,72,974 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಕೊವಿಡ್-19 ಲಕ್ಷಣ ಕಂಡು ಬಂದಲ್ಲಿ ಮಾಡುವುದು ಏನು?

ಮಳೆಗಾಲದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚುತ್ತದೆ ಎನ್ನುವ ಭೀತಿಯನ್ನು ಜನರು ಆತಂಕ ಪಡುವ ಅಗತ್ಯವಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಜ್ವರ, ಕೆಮ್ಮು, ಶೀತಜ್ವರ, ಹಾಗೂ ತಲೆನೋವಿನ ಲಕ್ಷಣಗಳೆಲ್ಲ ಕೊರೊನಾವೈರಸ್ ಆಗಿರುವುದಿಲ್ಲ. ಒಂದು ವೇಳೆ ನಿಮ್ಮಲ್ಲೂ ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ಏನು ಮಾಡಬಹುದು. ಸರ್ಕಾರವು ಅದಕ್ಕಾಗಿ ಯಾವ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿದೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ.

What If Coronavirus Symptoms Are Found?

English summary
What If Coronavirus Symptoms Are Found. Here Complete Report About Treatment Structure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X