ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರ ಫಲಿತಾಂಶ: ಬಿಜೆಪಿ, ಎನ್‌ಪಿಎಫ್,ಎನ್‌ಪಿಪಿ, ಕಾಂಗ್ರೆಸ್ ಶೇಕಡಾವಾರು ಮತ ಗಳಿಕೆ

|
Google Oneindia Kannada News

ಇಂಫಾಲ್, ಮಾರ್ಚ್ 10: ಮಣಿಪುರದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ಅಧಿಕಾರಕ್ಕೇರಲು ಸಜ್ಜಾಗುತ್ತಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮಿಶ್ರ ಫಲಿತಾಂಶ ಹೊರ ಬಂದರೂ ಬಿರೇನ್ ಸಿಂಗ್ ಮತ್ತೊಮ್ಮೆ ಸಿಎಂ ಸ್ಥಾನಕ್ಕೇರಲು ಸಜ್ಜಾಗುತ್ತಿದೆ.

ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಸಲಾಯಿತು. ಉತ್ತರ ಪ್ರದೇಶದ ಏಳು ಹಂತಗಳಲ್ಲಿ ಮತದಾನ ನಡೆಸಲಾಗಿದೆ. ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಮತದಾನ ನಡೆಸಲಾಗಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20 ರಂದು ಮತದಾನ ನಡೆದಿದೆ.

Manipur Election Result 2022: ಬಹುಮತದತ್ತ ಬಿಜೆಪಿ ಓಟManipur Election Result 2022: ಬಹುಮತದತ್ತ ಬಿಜೆಪಿ ಓಟ

2017 ರಲ್ಲಿ ಮಣಿಪುರದಲ್ಲಿ 60 ಸ್ಥಾನ (31 ಮ್ಯಾಜಿಕ್ ನಂಬರ್) ಗಳ ಪೈಕಿ ಬಿಜೆಪಿಯು ಒಟ್ಟು 21 ವಿಧಾನಸಭೆ ಸ್ಥಾನಗಳೊಂದಿಗೆ ಸರ್ಕಾರವನ್ನು ನಡೆಸುತ್ತಿದೆ. ಈಗ 40 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿಯನ್ನು ಮಣಿಪುರ ಬಿಜೆಪಿಯು ಹೊಂದಿದೆ. ಕಳೆದ ಚುನಾವಣೆಯಲ್ಲಿ 28 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಬಿಜೆಪಿ ಎನ್‌ಪಿಪಿ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚನೆ ಮಾಡಿದೆ. ಪ್ರಸ್ತುತ ಮಣಿಪುರ ಸರ್ಕಾರದ ಅವಧಿಯು ಮಾರ್ಚ್ 20, 2017 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 19, 2022 ರಂದು ಕೊನೆಗೊಂಡಿದೆ.

Vote Percentage of Parties in Manipur 2022: BJP, NPF, NPEP, Congress and Others

ಮಣಿಪುರದಲ್ಲಿ ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಈ ಹಿಂದೆ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಮತದಾನ ನಿಗದಿಯಾಗಿತ್ತು. ನಂತರ ಚುನಾವಣಾ ದಿನಾಂಕಗಳನ್ನು ಪರಿಷ್ಕರಿಸಲಾಯಿತು. ಮಾರ್ಚ್ 10 ರಂದು ಐದು ರಾಜ್ಯಗಳಾದ ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡಕ್ಕೆ ಮತ ಎಣಿಕೆ ನಡೆಸಲಾಗಿದೆ.

ಸದ್ಯದ ಟ್ರೆಂಡ್‌ನಂತೆ ಬಿಜೆಪಿ 17 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 12 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಎನ್ ಪಿ ಪಿ 6 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 2 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಜೆಡಿಯು 2 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, 3 ಸ್ಥಾನ ಗೆದ್ದಿದೆಮ್ ಕಾಂಗ್ರೆಸ್ 3 ರಲ್ಲಿ ಮುನ್ನಡೆ ಹಾಗೂ 2 ಸ್ಥಾನ ಪಡೆದುಕೊಂಡಿದೆ, ಎನ್ ಪಿಎಫ್ 5ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತರೆ 2 ಸ್ಥಾನದಲ್ಲಿ ಮುನ್ನಡೆ ಗಳಿಸಿವೆ. ಮಿಕ್ಕಂತೆ ಕುಕಿ ಪೀಪಲ್ಸ್ ಮೈತ್ರಿ 1 ಸ್ಥಾನದಲ್ಲಿ ಮುನ್ನಡೆ ಗಳಿಸಿದೆ.

ಚುನಾವಣಾ ಆಯೋಗ ವೆಬ್ ತಾಣದ ಅಧಿಕೃತ ಮಾಹಿತಿಯಂತೆ ಸಮಯ 15:35ಕ್ಕೆ ಶೇಕಡಾವಾರು ಮತ ಗಳಿಕೆ ವಿವರ ಹೀಗಿದೆ:
ಬಿಜೆಪಿ ಶೇ 37. 54
ಕಾಂಗ್ರೆಸ್ ಶೇ 16.22
ಜೆಡಿ ಯು ಶೇ 10.54
ಎನ್ ಪಿ ಇ ಪಿ ಶೇ 15.65
ಎನ್ ಪಿ ಎಫ್ ಶೇ 10.51
ಇತರೆ ಶೇ 7.87

2017ರಲ್ಲಿ ಶೇಕಡಾವಾರು ಮತ ಗಳಿಕೆ
ಬಿಜೆಪಿ ಶೇ 36.3
ಕಾಂಗ್ರೆಸ್ ಶೇ 35.1
ಜೆಡಿ ಯು ಶೇ 10.54
ಎನ್ ಪಿ ಎಫ್ ಶೇ 7.2
ಎನ್ ಪಿ ಪಿ ಶೇ 5.1
ಎಐಟಿಸಿ ಶೇ 1.4
ಇತರೆ ಶೇ ಶೇ 5.1

English summary
Vote Percentage of Parties in Manipur 2022: BJP, NPF, NPEP, Congress and Others
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X