ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ವರ್ಷಕ್ಕಿಂತ ಹಳೆಯ 'ಅನರ್ಹ' ವಾಹನಗಳ ನೋಂದಣಿ ರದ್ದು: ಗುಜರಿ ನೀತಿಯ ಲಾಭ-ನಷ್ಟಗಳು

|
Google Oneindia Kannada News

ನವದೆಹಲಿ, ಮಾರ್ಚ್ 19: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ವಾಹನ ಗುಜರಿ ನೀತಿಯನ್ನು ಪ್ರಕಟಿಸಿದ್ದಾರೆ. 20 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ಅವುಗಳ ನೋಂದಣಿ ಪ್ರಮಾಣ ಪತ್ರವನ್ನು ನವೀಕರಿಸುವುದಿಲ್ಲ ಅಥವಾ ಅವುಗಳ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ. ಈ ನಿಯಮ 2024ರ ಜೂನ್ 1ರಿಂದ ಜಾರಿಗೆ ಬರಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಅದೇ ರೀತಿಯ ನಿಯಮ ವಾಣಿಜ್ಯ ವಾಹನಗಳಿಗೂ ಅನ್ವಯವಾಗಲಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾಗುವ 15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳ ನೋಂದಣಿಯನ್ನು 2023ರ ಏಪ್ರಿಲ್ 1ರಿಂದ ರದ್ದುಗೊಳಿಸಲಾಗುವುದು ಎಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಇನ್ನು ಒಂದು ವರ್ಷದಲ್ಲಿ ಟೋಲ್ ಬೂತ್‌ಗಳೇ ಇರುವುದಿಲ್ಲ: ಗಡ್ಕರಿಇನ್ನು ಒಂದು ವರ್ಷದಲ್ಲಿ ಟೋಲ್ ಬೂತ್‌ಗಳೇ ಇರುವುದಿಲ್ಲ: ಗಡ್ಕರಿ

ದೇಶದ ಹತ್ತು ಅತ್ಯಂತ ಮಾಲಿನ್ಯಕಾರಕ ನಗರಗಳಲ್ಲಿ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಿಂದ ವೈಯಕ್ತಿಕ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಲಿದೆ. ಇದು ಹಳೆಯ ಮಾಲಿನ್ಯಕಾರಕ ವಾಹನಗಳ ಬಳಕೆಯನ್ನು ತಾಂತ್ರಿಕವಾಗಿ ಮುಂದುವರಿದ ಮತ್ತು ಪರಿಸರ ಸ್ನೇಹಿ ವಾಹನಗಳಿಂದ ಬದಲಿಸುವ ಸರ್ಕಾರದ ಯೋಜನೆಯ ಭಾಗವಾಗಿದೆ. ಮುಂದೆ ಓದಿ.

ಹೊಸ ವಾಹನಗಳಿಗೆ ಜಿಎಸ್‌ಟಿ ರಿಯಾಯಿತಿ

ಹೊಸ ವಾಹನಗಳಿಗೆ ಜಿಎಸ್‌ಟಿ ರಿಯಾಯಿತಿ

ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಜನರಿಗೆ ವಿವಿಧ ಸವಲತ್ತುಗಳನ್ನು ನೀಡಲಾಗುತ್ತದೆ. ಹಳೆಯ ಮಾಲಿನ್ಯಕಾರಕ ವಾಹನಗಳಿಗೆ ಗುಡ್‌ಬೈ ಹೇಳುವ ವಾಹನ ಮಾಲೀಕರಿಗೆ ಹೊಸ ವಾಹನಗಳ ಖರೀದಿ ಮೇಲೆ ಜಿಎಸ್‌ಟಿಯಿಂದ ಸ್ವಲ್ಪ ವಿನಾಯಿತಿ ನೀಡುವಂತೆ ತಮ್ಮ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಸಲಹೆ ನೀಡಿದೆ. ವಾಹನ ತಯಾರಕರು ಹೊಸ ವಾಹನಗಳ ಮೇಲೆ ಶೇ 5ರಷ್ಟು ರಿಯಾಯಿತಿ ನೀಡುವಂತೆ ಮನವಿ ಮಾಡುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.

ರಸ್ತೆ ತೆರಿಗೆ ಕಡಿತಕ್ಕೆ ಸಲಹೆ

ರಸ್ತೆ ತೆರಿಗೆ ಕಡಿತಕ್ಕೆ ಸಲಹೆ

'ಹೊಸ ವಾಹನಗಳ ಖರೀದಿ ವೇಳೆ ರಸ್ತೆ ತೆರಿಗೆಯಲ್ಲಿ ರಿಯಾಯಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೂ ಸಲಹೆ ನೀಡಲಾಗುತ್ತಿದೆ. ಹೊಸ ವಾಹನಗಳ ಮಾರಾಟದ ಮೇಲಿನ ಜಿಎಸ್‌ಟಿ ಅಧಿಕವಾಗುವುದರಿಂದ ಅವರಿಗೆ ಯಾವುದೇ ನಷ್ಟವಾಗುವುದಿಲ್ಲ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದಾಯ ಹೆಚ್ಚಿಸುತ್ತದೆ. ಇದು ಪ್ರತಿಯೊಬ್ಬರಿಗೂ ಗೆಲುವು ನೀಡುವ ನೀತಿಯಾಗಿದೆ' ಎಂದಿದ್ದಾರೆ.

ವಾಹನ ಗುಜರಿ ನೀತಿ: ಯಾವ ವಾಹನದ ನವೀಕರಣಕ್ಕೆ ಎಷ್ಟು ಶುಲ್ಕ?ವಾಹನ ಗುಜರಿ ನೀತಿ: ಯಾವ ವಾಹನದ ನವೀಕರಣಕ್ಕೆ ಎಷ್ಟು ಶುಲ್ಕ?

ಹಳೆಯ ವಾಹನಗಳ ಸಂಖ್ಯೆ

ಹಳೆಯ ವಾಹನಗಳ ಸಂಖ್ಯೆ

ಅಧಿಕೃತ ಅಂದಾಜಿನ ಪ್ರಕಾರ ದೇಶದಲ್ಲಿ ಪ್ರಸ್ತುತ 51 ಲಕ್ಷಕ್ಕೂ ಅಧಿಕ ಲಘು ವಾಹನಗಳು 20 ವರ್ಷಕ್ಕಿಂತಲೂ ಹಳೆಯದಾಗಿವೆ. ಇನ್ನು 34 ಲಕ್ಷ ಲಘು ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿವೆ. ಇದರ ಜತೆಗೆ 17 ಲಕ್ಷ ಮಧ್ಯಮ ಮತ್ತು ಭಾರಿ ಗಾತ್ರದ ವಾಹನಗಳು 15 ವರ್ಷವನ್ನು ದಾಟಿದ್ದು, ಅವುಗಳಿಗೆ ಯಾವುದೇ ನಿಯಮಬದ್ಧ ಫಿಟ್ನೆಸ್ ಪ್ರಮಾಣಪತ್ರಗಳಿಲ್ಲ.

ಗುಜರಿ ಉದ್ಯಮದಲ್ಲಿ ಉದ್ಯೋಗ

ಗುಜರಿ ಉದ್ಯಮದಲ್ಲಿ ಉದ್ಯೋಗ

ಈ ಹೊಸ ಗುಜರಿ ನೀತಿಯಿಂದ ಗುಜರಿ ಉದ್ಯಮವು ವಾರ್ಷಿಕ 7.2 ಲಕ್ಷ ಕೋಟಿ ವಹಿವಾಟು ನಡೆಸುವ ನಿರೀಕ್ಷೆಯಿದೆ. ಈ ನೀತಿಯು ಸುಮಾರು 10,000 ಕೋಟಿ ಹೂಡಿಕೆಗೆ ಉತ್ತೇಜನ ನೀಡಲಿದ್ದು, 35,000 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಮತ್ತೆ ದುಬಾರಿ!?ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಮತ್ತೆ ದುಬಾರಿ!?

ಕಳವು ವಾಹನಗಳಿಗೆ ಅವಕಾಶವಿಲ್ಲ

ಕಳವು ವಾಹನಗಳಿಗೆ ಅವಕಾಶವಿಲ್ಲ

ಗುಜರಿ ಕೇಂದ್ರಗಳು ಕಳವು ವಾಹನಗಳನ್ನು ಗುಜರಿಗೆ ಹಾಕಲು ಸಾಧ್ಯವಿಲ್ಲ. ಬೆಂಕಿ ಆಕಸ್ಮಿಕ, ಗಲಭೆ ಅಥವಾ ಬೇರೆ ಯಾವುದೇ ಘಟನೆಯಲ್ಲಿ ಹಾನಿಯಾದ 15 ವರ್ಷ ಮೇಲಿನ ಸರ್ಕಾರಿ ಹಾಗೂ ಖಾಸಗಿ-ಸರ್ಕಾರಿ ಪಾಲುದಾರಿಕೆ ಮಾಲೀಕತ್ವದ ವಾಹನಗಳು ಸೇರಿದಂತೆ ಮಾಲೀಕರು ತರುವ ಬೇರೆ ವಾಹನಗಳನ್ನು ಗುಜರಿಗೆ ಹಾಕಬಹುದಾಗಿದೆ. ವಾಹನದಲ್ಲಿ ದೋಷವಿದೆ ಎಂದು ಉತ್ಪಾದಕರು ಘೋಷಿಸಿರುವ, ಹರಾಜಾದ, ಯಾವುದೇ ತನಿಖಾ ಸಂಸ್ಥೆಯಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ವಾಹನಗಳನ್ನು ಗುಜರಿಗೆ ಹಾಕಬಹುದು.

ಹಳೆಯ ವಾಹನ ಗುಜರಿಗೆ ಹಾಕುವುದರ ಲಾಭಗಳು

ಹಳೆಯ ವಾಹನ ಗುಜರಿಗೆ ಹಾಕುವುದರ ಲಾಭಗಳು

ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವುದರಿಂದ ಜನರಿಗೆ ಆಗುವ ಲಾಭಗಳು ಮತ್ತು ಹಳೆಯ ವಾಹನಗಳನ್ನು ಬಳಸುವುದರಿಂದ ಆಗುವ ನಷ್ಟಗಳನ್ನು ಸರ್ಕಾರ ಪಟ್ಟಿ ಮಾಡಿದೆ.

* ಹೊಸ ವಾಹನಗಳ ನೋಂದಣಿ ಮೇಲೆ ಶೂನ್ಯ ಶುಲ್ಕ.

* ವಾಹನಗಳ ಗುಜರಿ ಮೌಲ್ಯವು ಹೊಸ ವಾಹನಗಳ ಎಕ್ಸ್-ಶೋರೂಂ ದರದ ಶೇ 4-6ರಷ್ಟು ಇರುತ್ತದೆ.

* ವೈಯಕ್ತಿಕ ಹಾಗೂ ವಾಣಿಜ್ಯ ವಾಹನಗಳ ರಸ್ತೆ ತೆರಿಗೆ ಮೇಲೆ ರಾಜ್ಯಗಳು ಶೇ 25 ಮತ್ತು ಶೇ 15ರಷ್ಟು ವಿನಾಯಿತಿ ನೀಡಬಹುದು.

* ವಾಹನ ತಯಾರಕರು ಹೊಸ ವಾಹನಗಳ ಮೇಲೆ ಶೇ 5ರಷ್ಟು ರಿಯಾಯಿತಿ ನೀಡಬಹುದು.

* ವಾಹನ ನಿರ್ವಹಣೆ ವೆಚ್ಚ ತಗ್ಗಲಿದೆ ಮತ್ತು ತೈಲದ ಮೇಲಿನ ಉಳಿತಾಯ ಹೆಚ್ಚಲಿದೆ.

ಹಳೆಯ ವಾಹನಗಳಿಂದಾಗುವ ನಷ್ಟ

ಹಳೆಯ ವಾಹನಗಳಿಂದಾಗುವ ನಷ್ಟ

* ಹಳೆಯ ಖಾಸಗಿ ವಾಹನಗಳನ್ನು ಹೊಂದಿದ್ದರೆ ಅದರ ನೋಂದಣಿ ನವೀಕರಣಕ್ಕೆ ಅಧಿಕ ವೆಚ್ಚವಾಗಲಿದೆ.

* ವಾಣಿಜ್ಯ ವಾಹನಗಳ ಫಿಟ್ನೆಸ್ ಪ್ರಮಾಣಪತ್ರದ ನವೀಕರಣಕ್ಕೆ ವೆಚ್ಚ ಹೆಚ್ಚಲಿದೆ.

* ರಾಜ್ಯ ಸರ್ಕಾರಗಳು ಹೆಚ್ಚುವರಿ ಹಸಿರು ತೆರಿಗೆ ವಿಧಿಸಬಹುದು.

* ಬಳಕೆಗೆ ಅನ್‌ಫಿಟ್ ಎನಿಸಿದ ವಾಹನಗಳ ನೋಂದಣಿಯನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ.

English summary
Road Transport Minister Nitin Gadkari announced vehicle scrapping policy said, more than 20 year old personal vehicles will be de-registered from June 1, 2024.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X