ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರಿಂಗ್ ಓದಬಯಸುವ ಬಡ ವಿದ್ಯಾರ್ಥಿನಿಯರಿಗಾಗಿ 'ಉಡಾನ್'

|
Google Oneindia Kannada News

ಇಂಜಿನಿಯರಿಂಗ್ ಓದಲು ಬಯಸುವ ಪ್ರತಿಭಾವಂತ ವಿದ್ಯಾರ್ಥನಿಯರಿಗೆ ಪ್ರವೇಶ ಪರೀಕ್ಷೆಗೆ ತಯಾರಿ ಮಾಡುವ ಉದ್ದೇಶದಿಂದ, ಉಚಿತವಾಗಿ ತರಬೇತಿ ನೀಡುವ 'ಉಡಾನ್' ಎಂಬ ವಿಶೇಷ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಆರಂಭಿಸಿದೆ.

ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ವಿದ್ಯಾಲಯ, ಮಾನ್ಯತೆ ಪಡೆದ ಯಾವುದೇ ಬೋರ್ಡ್ ನ ಸರಕಾರಿ ಶಾಲೆ, ಸಿಬಿಎಸ್ಇ ಮಾನ್ಯತೆ ಇರುವ ಖಾಸಗಿ ಶಾಲೆಯಲ್ಲಿ XIನೇ ತರಗತಿಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಕಡಿಮೆ ದರದ ಔಷಧ-ಸಲಕರಣೆ, ಶ್ರೀ ಸಾಮಾನ್ಯರ ಬದುಕಿಗೆ ಸರಕಾರದ ನಿಯಮ ಕಡಿಮೆ ದರದ ಔಷಧ-ಸಲಕರಣೆ, ಶ್ರೀ ಸಾಮಾನ್ಯರ ಬದುಕಿಗೆ ಸರಕಾರದ ನಿಯಮ

6 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದ, ಹನ್ನೊಂದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಪ್ರತಿಭೆಯ ಆಧಾರದ ಮೇಲೆ ಮತ್ತು ಅವರು ತರಬೇತಿಗಾಗಿ ಆಯ್ದುಕೊಳ್ಳುವ ನಗರದ ಆಧಾರದ ಮೇಲೆ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಈ ವಿದ್ಯಾರ್ಥಿನಿಯರು ಅರ್ಹತೆ ಗಳಿಸಲು ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ ಶೇ.70ರಷ್ಟು ಅಂಕ ಗಳಿಸಿರಬೇಕು. ಅದರಲ್ಲಿಯೂ ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ ಶೇ.80ರಷ್ಟು ಅಂಕ ಪಡೆದಿರಬೇಕು. ಸಿಜಿಪಿಎ ಅನುಸರಿಸುತ್ತಿರುವ ಬೋರ್ಡ್ ನಲ್ಲಿ ಕನಿಷ್ಠ 8 ಮತ್ತು ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ 9 ಜಿಪಿಎ ಅಂಕ ಗಳಿಸಿರಬೇಕು.

Udaan - A programme to give wings to girl students

English summary
Udaan - A programme to give wings to girl students. Udaan is a project launched by Central Board of Secondary Education (CBSE) under guidance of Ministry of Human Resource Development (MHRD), to address the low enrolment of girl students in prestigious engineering institutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X