ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Timeline: ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಬೆಳೆದ ವಿವಿಧ ಹಂತಗಳು

|
Google Oneindia Kannada News

ನವದೆಹಲಿ, ಜನವರಿ 5: ಆಸ್ಟ್ರಾಜೆನಿಕಾ-ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್-ಐಸಿಎಂಆರ್ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ.

ಕೋವಿಶೀಲ್ಡ್ ಅನ್ನು ಭಾರತದಲ್ಲಿ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ತಯಾರಿಸುತ್ತಿದ್ದು, ಈ ಲಸಿಕೆ ಈಗಾಗಲೇ ವಿವಿಧ ದೇಶಗಳಲ್ಲಿ ಅನುಮೋದನೆ ಪಡೆದುಕೊಂಡಿದೆ. ಭಾರತದ್ದೇ ಆದ ಕೋವ್ಯಾಕ್ಸಿನ್ ಲಸಿಕೆಗೆ ಮೂರನೇ ಹಂತದ ಪ್ರಯೋಗ ಪೂರ್ಣಗೊಂಡು ಅದರ ವರದಿಗಳು ಸಿದ್ಧವಾಗುವ ಮುನ್ನವೇ ಅನುಮೋದನೆ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಲಸಿಕೆಯನ್ನೂ ರಾಜಕೀಯಗೊಳಿಸುತ್ತಿರುವುದು ಬೇಸರ; ಭಾರತ್ ಬಯೋಟೆಕ್ಲಸಿಕೆಯನ್ನೂ ರಾಜಕೀಯಗೊಳಿಸುತ್ತಿರುವುದು ಬೇಸರ; ಭಾರತ್ ಬಯೋಟೆಕ್

ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಹೇಳಿಕೊಂಡಿದೆ. ಪ್ರಯೋಗಕ್ಕೆ ಸಂಬಂಧಿಸಿದ ಎಲ್ಲ ದತ್ತಾಂಶಗಳನ್ನೂ ಡಿಸಿಜಿಐ ಜತೆ ಹಂಚಿಕೊಂಡಿರುವುದಾಗಿ ಅದು ಹೇಳಿದೆ. ಕೋವ್ಯಾಕ್ಸಿನ್ ಕುರಿತಾದ ಆರೋಪಗಳು, ಅನುಮಾನಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಡಾ. ಕೃಷ್ಣ ಎಲ್ಲಾ ಉತ್ತರ ನೀಡಿದ್ದಾರೆ.

Timeline of Bharat Biotech’s Covaxin Vaccine Development

ಕೋವ್ಯಾಕ್ಸಿನ್ ಬೆಳವಣಿಗೆಗೆ ಸಂಬಂಧಿಸಿದ ಕೆಲವು ಪ್ರಮುಖ ಹಂತಗಳು ಇಲ್ಲಿವೆ.

ಜೂನ್ 30, 2020: ಕೋವ್ಯಾಕ್ಸಿನ್ ಅನ್ನು ಮಾನವ ಪ್ರಯೋಗಕ್ಕೆ ಬಳಸಲು ಡಿಸಿಜಿಐ ಅನುಮೋದನೆ ನೀಡಿತು. ಈ ಅನುಮತಿ ಪಡೆದ ಮೊದಲ ಸ್ವದೇಶಿ ನಿರ್ಮಿತ ಲಸಿಕೆ ಎನಿಸಿಕೊಂಡಿತು.

ಜುಲೈ 3: ಆಗಸ್ಟ್ 15ರಂದು ಕೊರೊನಾ ವೈರಸ್ ಲಸಿಕೆ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ ಐಸಿಎಂಆರ್ ಅಧಿಕಾರಿಯೊಬ್ಬರ ಪತ್ರ ಸೋರಿಕೆಯಾಗಿತ್ತು. ಈ ಕಿರು ಅವಧಿಯಲ್ಲಿ ಲಸಿಕೆ ಸಿದ್ಧವಾಗುವುದರ ಬಗ್ಗೆ ಆರೋಗ್ಯ ಪರಿಣತರು ಪ್ರಶ್ನೆಗಳನ್ನು ಎತ್ತಿದ್ದರು. ಅದೇ ದಿನ ಭಾರತ್ ಬಯೋಟೆಕ್ ತನ್ನ ಪ್ರಯೋಗ ಯಶಸ್ವಿಯಾದರೆ 300 ಮಿಲಿಯನ್ ಡೋಸ್ ಲಸಿಕೆ ಉತ್ಪಾದಿಸುವುದಾಗಿ ತಿಳಿಸಿತು.

ಜುಲೈ 4: ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಸಮೃದ್ಧ ಕೊರೊನಾ ವೈರಸ್ ಲಸಿಕೆಯನ್ನು ವೇಗವಾಗಿ ಅಭಿವೃದ್ಧಿಪಡಿಸುವ ನಿರ್ಧಾರ ಹೊಂದಿರುವುದಾಗಿ ಐಸಿಎಂಆರ್ ತಿಳಿಸಿತು.

ಅಕ್ಟೋಬರ್ 23: ತನ್ನ ಲಸಿಕೆಯ ಬಗ್ಗೆ ಆಸಕ್ತಿ ತೋರಿಸಿರುವ ಹತ್ತು ದೇಶಗಳ ಜತೆಗೆ ಮಾತುಕತೆ ನಡೆಸುತ್ತಿರುವುದಾಗಿ ಭಾರತ್ ಬಯೋಟೆಕ್ ತಿಳಿಸಿತ್ತು. ತನ್ನ 1 ಮತ್ತು 2ನೇ ಹಂತದ ಪ್ರಯೋಗಗಳು ಸುರಕ್ಷಿತ ಎಂಬುದು ಕಂಡುಬಂದಿರುವುದಾಗಿ ಹೇಳಿತು.

ಸಮರ್ಪಕ ದಾಖಲೆಗೂ ಮುನ್ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ: ವಿಜ್ಞಾನಿಗಳ ಆಕ್ಷೇಪಸಮರ್ಪಕ ದಾಖಲೆಗೂ ಮುನ್ನ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ: ವಿಜ್ಞಾನಿಗಳ ಆಕ್ಷೇಪ

ನವೆಂಬರ್ 1: ಭಾರತ್ ಬಯೋಟೆಕ್ 2021ರ ಎರಡನೆಯ ತ್ರೈಮಾಸಿಕ ಅವಧಿಗೆ ಲಸಿಕೆ ಬಿಡುಗಡೆ ಮಾಡಲು ಯೋಜಿಸುತ್ತಿರುವುದಾಗಿ ತಿಳಿಸಿತು.

ನವೆಂಬರ್ 16: ಭಾರತ್ ಬಯೋಟೆಕ್ ತಾನು ಮೂರನೇ ಹಂತದ ಪ್ರಯೋಗ ಆರಂಭಿಸುತ್ತಿರುವುದಾಗಿ ಮಾಹಿತಿ ನೀಡಿತು.

ನವೆಂಬರ್ 20: ಬ್ರೆಜಿಲ್‌ಗೆ ಲಸಿಕೆ ಪೂರೈಸುವ ಆಫರ್ ನೀಡಿದ ಭಾರತ್ ಬಯೋಟೆಕ್, ತಂತ್ರಜ್ಞಾನ ವರ್ಗಾವಣೆ ಸಹಭಾಗಿತ್ವಕ್ಕೆ ಮುಂದಾಯಿತು.

Timeline of Bharat Biotech’s Covaxin Vaccine Development

ಡಿಸೆಂಬರ್ 7: ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಯ ಅನುಮೋದನೆಗೆ ಅರ್ಜಿ ಸಲ್ಲಿಕೆ.

ಡಿಸೆಂಬರ್ 22: ಅಮೆರಿಕದ ಮಾರುಕಟ್ಟೆಗೆ ಲಸಿಕೆ ಉತ್ಪಾದಿಸಲು ಭಾರತ್ ಬಯೋಟೆಕ್ ಜತೆಗೆ ಅಮೆರಿಕ ಮೂಲದ ಔಷಧ ಅಭಿವೃದ್ಧಿ ಸಂಸ್ಥೆ ಒಕುಗೆನ್ ಇಂಕ್ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿತು.

ಜನವರಿ 2: ಲಸಿಕೆಯನ್ನು ಸಾರ್ವಜನಿಕರ ಹಿತಾಸಕ್ತಿಯ ತುರ್ತು ಸನ್ನಿವೇಶದಲ್ಲಿ ಪ್ರಯೋಗದ ಮಾದರಿಯಲ್ಲಿ ನಿರ್ಬಂಧಿತ ಬಳಕೆಗೆ ಔಷಧ ನಿಯಂತ್ರಕ ಪರಿಣತರು ಅನುಮೋದನೆ ನೀಡಿದರು.

ಜನವರಿ 4: ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಗೆ ಉಪಯೋಗಿಸಲು ಡಿಸಿಜಿಐ ಅನುಮತಿ ನೀಡಿತು.

ಜನವರಿ 5: ಮೂರನೇ ಹಂತದ ಲಸಿಕೆ ಪ್ರಯೋಗ ನಡೆಯದೆ ಕೋವ್ಯಾಕ್ಸಿನ್ ಲಸಿಕೆ ಬಳಕೆಗೆ ಅನುಮೋದನೆ ನೀಡಿರುವುದಕ್ಕೆ ತಜ್ಞರಿಂದ ತೀವ್ರ ಆಕ್ಷೇಪ. ಲಸಿಕೆಯ ದಕ್ಷತೆ ಹಾಗೂ ಸುರಕ್ಷತೆಯ ಬಗ್ಗೆ ಸ್ಪಷ್ಟನೆ ನೀಡಿದ ಭಾರತ್ ಬಯೋಟೆಕ್ ಸಂಸ್ಥೆ.

English summary
Bharat Biotech's Covaxin got DCGI approval for emergency use in India. Here is the timeline of how the vaccine got approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X