ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಹುಲಿಗಳ ಲೆಕ್ಕದಲ್ಲಿ ಮಧ್ಯಪ್ರದೇಶ ನಂ.1, ಕರ್ನಾಟಕ ನಂ.2

|
Google Oneindia Kannada News

ಬೆಂಗಳೂರು, ಜುಲೈ 29: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಭಾರತದ ಹುಲಿ ಗಣತಿಯ 2018ರ ಅಂದಾಜು ಲೆಕ್ಕವನ್ನು ಪ್ರಧಾನಿ ಮೋದಿ ಅವರು ಸೋಮವಾರದಂದು ಪ್ರಕಟಿಸಿದ್ದಾರೆ. ಅಂತಾರಾಷ್ಟ್ರೀಯ ಹುಲಿದಿನದ ಸಂಭ್ರಮಾಚರಣೆಯನ್ನು ಈ ಅಂಕಿ ಸಂಖ್ಯೆ ಇನ್ನಷ್ಟು ಹೆಚ್ಚಿಸಿವೆ.

ದೇಶದಲ್ಲಿ ಈಗ ಹುಲಿಗಳ ಸಂಖ್ಯೆ ಅಂದಾಜು 3 ಸಾವಿರವನ್ನು ದಾಟಿದೆ. ಹುಲಿಗಳು ಇರಲು ಸಾಧ್ಯವೇ ಇಲ್ಲ ಎನ್ನಬಹುದಾದ ಪ್ರದೇಶಗಳಲ್ಲೂ ಕೂಡ ಹುಲಿಗಳು ಕಂಡು ಬಂದಿವೆ.

ಹುಲಿ ಗಣತಿ: ನಾಲ್ಕು ವರ್ಷಗಳಿಗೊಮ್ಮೆ ಸುಮಾರು 10 ಕೋಟಿ ರು ವೆಚ್ಚದಲ್ಲಿ 40,000ಕ್ಕೂ ಅಧಿಕ ಅರಣ್ಯ ಸಿಬ್ಬಂದಿ, 4,00,000 ಚದರ ಕಿಲೋ ಮೀಟರ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಿ, ಅಂದಾಜು ಲೆಕ್ಕ ಹಾಕಿ ವರದಿ ತಯಾರಿಸುತ್ತಾರೆ.

ಭಾರತದಲ್ಲಿರುವ ಹುಲಿಗಳ ಗಣತಿ ಲೆಕ್ಕ ಪ್ರಕಟಿಸಿದ ಪ್ರಧಾನಿ ಮೋದಿಭಾರತದಲ್ಲಿರುವ ಹುಲಿಗಳ ಗಣತಿ ಲೆಕ್ಕ ಪ್ರಕಟಿಸಿದ ಪ್ರಧಾನಿ ಮೋದಿ

ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ ಒಟ್ಟು 3,890 ಹುಲಿಗಳದ್ದು ಇವುಗಳ ಪೈಕಿ ಭಾರತದಲ್ಲಿ 2226 ಹುಲಿಗಳಿವೆ. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ಅಗ್ರಸ್ಥಾನಕ್ಕೇರಿದೆ. ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 524ಹುಲಿಗಳಿದ್ದು, ಕಡಿಮೆ ಅಂತರದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. 442 ಹುಲಿಗಳೊಂದಿಗೆ ಉತ್ತರಾಖಂಡ್ ಮೂರನೇ ಸ್ಥಾನದಲ್ಲಿದೆ.

ಕಳೆದ ಗಣತಿಯಲ್ಲಿ 2014ರಲ್ಲಿ ಕರ್ನಾಟಕ 406 ಹುಲಿಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಮಧ್ಯಪ್ರದೇಶ 308 ಹುಲಿಗಳೊಂದಿಗೆ 2ನೇ ಸ್ಥಾನದಲ್ಲಿತ್ತು. ಉತ್ತರಾಖಂಡ್ 340 ಹುಲಿ ಹಾಗೂ ತಮಿಳುನಾಡು 229 ಹುಲಿಗಳನ್ನು ಹೊಂದಿದ್ದವು.

Tiger Census 2018: Madhya Pradesh beats Karnataka to reclaim Tiger state tag with 526 big cats

2018ರಲ್ಲಿ ಛತ್ತೀಸ್ ಗಢ ಹಾಗೂ ಮಿಜೋರಾಂನಲ್ಲಿ ಹುಲಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದ್ದರೆ, ಒಡಿಶಾದಲ್ಲಿ ಹೆಚ್ಚಿನ ಪ್ರಗತಿ ಕಂಡು ಬಂದಿಲ್ಲ. ಮಧ್ಯಪ್ರದೇಶದಲ್ಲಿ ಬಾಂಧಾವ್ ಗಢ, ಪೆಂಚ್, ಕಾನ್ಹಾ ಹುಲಿ ಅಭಯಾರಣ್ಯ ಸೇರಿ 6 ಸಂರಕ್ಷಣಾ ವಲಯಗಳಿವೆ. ಕರ್ನಾಟಕದಲ್ಲಿ ಭದ್ರಾ, ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ, ದಾಂಡೇಲಿ- ಅಂಶಿಗಳಲ್ಲಿ ಹುಲಿ ಅಭಯಾರಣ್ಯಗಳಿವೆ.

Tiger Census 2018: Madhya Pradesh beats Karnataka to reclaim Tiger state tag with 526 big cats
English summary
Madhya Pradesh regained its 'Tiger State' status on Monday with the highest number of 526 big cats, closely followed by Karnataka, 524. Uttarakhand stood at number 3 with 442 tigers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X