ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಸ್ಥಾನವಿಲ್ಲ

|
Google Oneindia Kannada News

ನವದೆಹಲಿ, ಆಗಸ್ಟ್ 13: ಕೇಂದ್ರ ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಅತ್ಯಂತ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಪುಣೆ, ನವಿ ಮುಂಬೈ ಮತ್ತು ಗ್ರೇಟರ್ ಮುಂಬೈ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.

ಆದರೆ, ಅತಿ ಹೆಚ್ಚು ಜನರು ಇಷ್ಟಪಡುವ ನಗರ ಎಂದೇ ಗುರುತಿಸಲಾಗಿದ್ದ ಬೆಂಗಳೂರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಮಾತ್ರವಲ್ಲ, ಇತರೆ ವಿಭಾಗಗಳಲ್ಲಿಯೂ ಬೆಂಗಳೂರು ಸ್ಥಾನ ಪಡೆದಿಲ್ಲ. ಅಲ್ಲದೆ, ಕರ್ನಾಟಕದ ಯಾವ ನಗರ ಕೂಡ ಈ ಪಟ್ಟಿಗಳಲ್ಲಿ ಕಾಣಿಸಿಕೊಂಡಿಲ್ಲ.

ವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರುವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರು

ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ವಾಸಯೋಗ್ಯ ನಗರಗಳನ್ನು ಗುರುತಿಸುವ ಸಮೀಕ್ಷೆ ಕೈಗೊಂಡಿದ್ದು, ಒಂದು ಮಿಲಿಯನ್‌ಗೂ ಅಧಿಕ ಜನಸಂಖ್ಯೆಯುಳ್ಳ 116 ನಗರಗಳನ್ನು ಮತ್ತು 100 ಸ್ಮಾರ್ಟ್ ಸಿಟಿಗಳನ್ನು ಇದರಲ್ಲಿ ಒಳಗೊಳ್ಳಲು ಉದ್ದೇಶಿಸಲಾಗಿತ್ತು.

ಹೌರಾ, ನ್ಯೂಟೌನ್ ಕೋಲ್ಕತಾ ಮತ್ತು ದುರ್ಗಾಪುರ ನಗರಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿರಲಿಲ್ಲ. ನಯ ರಾಯಪುರ ಮತ್ತು ಅಮರಾವತಿ ನಗರಗಳು ಹಸಿರುಮೈದಾನ ನಗರಗಳಾಗಿದ್ದರಿಂದ ಈ ವ್ಯಾಪ್ತಿಯಲ್ಲಿ ಬಂದಿರಲಿಲ್ಲ. ಹೀಗಾಗಿ ಇವುಗಳನ್ನು ಹೊರತಾಗಿಸಿ ಈ ಸಮೀಕ್ಷೆ ನಡೆಸಲಾಗಿದೆ.

ಕರ್ನಾಟಕದ ಒಂದೂ ನಗರವಿಲ್ಲ

ಕರ್ನಾಟಕದ ಒಂದೂ ನಗರವಿಲ್ಲ

ಒಟ್ಟು 111 ಪ್ರಮುಖ ನಗರಗಳ ಪೈಕಿ ಮಹಾರಾಷ್ಟ್ರದ ಮೂರು ನಗರಗಳು ವಾಸಯೋಗ್ಯ ನಗರಗಳ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿವೆ. ಅತಿ ಹೆಚ್ಚು ನಗರಗಳನ್ನು ಹೊಂದಿರುವ ಉತ್ತರ ಪ್ರದೇಶ ಮತ್ತು ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ರಾಜ್ಯಗಳ ಒಂದೂ ನಗರ ಇದರಲ್ಲಿ ಸ್ಥಾನ ಪಡೆದಿಲ್ಲ.

ಮಧ್ಯಪ್ರದೇಶ ಹಾಗೂ ಛತ್ತೀಸಗಡ ರಾಜ್ಯಗಳ ರಾಜಧಾನಿಗಳು ಟಾಪ್ ಹತ್ತರಲ್ಲಿವೆ. ಉತ್ತರ ಪ್ರದೇಶದ ರಾಮಪುರ ಈ ಪಟ್ಟಿಯಲ್ಲಿ ಅತ್ಯಂತ ಕೆಳಸ್ಥಾನ ಪಡೆದಿದೆ. ರಾಜಧಾನಿ ದೆಹಲಿ 65ನೇ ಸ್ಥಾನ ಪಡೆದಿದೆ.

ನಾಲ್ಕು ವಲಯಗಳು

ನಾಲ್ಕು ವಲಯಗಳು

ವಾಸಯೋಗ್ಯ ನಗರ ಅಧ್ಯಯನವು ನಾಲ್ಕು ವಲಯಗಳನ್ನು ಒಳಗೊಂಡಿತ್ತು. ಸಾಂಸ್ಥಿಕ ಮತ್ತು ಆಡಳಿತ ಚಟುವಟಿಕೆಗಳಿಗೆ ಯೋಗ್ಯವಾದ ನಗರ, ಸಾಮಾಜಿಕ ಮೂಲಸೌಕರ್ಯಗಳಿರುವ (ಶಿಕ್ಷಣ/ಆರೋಗ್ಯ) ನಗರ, ಆರ್ಥಿಕ ಚಟುವಟಿಕೆಗಳಿಗೆ ನೆರವಾಗುವ ನಗರ ಹಾಗೂ ದೈಹಿಕ ಮೂಲಸೌಕರ್ಯ ಇರುವ ನಗರ ಎಂದು ವಿಂಗಡಿಸಲಾಗಿತ್ತು.

ಬೆಂಗಳೂರು ಬಳಲುತ್ತಿದೆ, ಶ್ವಾಸಕೋಶ ಸಂಬಂಧಿ ರೋಗ ಹೆಚ್ಚುತ್ತಿದೆ!ಬೆಂಗಳೂರು ಬಳಲುತ್ತಿದೆ, ಶ್ವಾಸಕೋಶ ಸಂಬಂಧಿ ರೋಗ ಹೆಚ್ಚುತ್ತಿದೆ!

15 ವಿಭಾಗಗಳು

15 ವಿಭಾಗಗಳು

ನಾಲ್ಕು ವಲಯಗಳನ್ನು ಒಟ್ಟು 15 ವಿಭಾಗಗಳನ್ನಾಗಿ ಹಾಗೂ 78 ಸೂಚಕಗಳನ್ನಾಗಿ ವಿಭಜಿಸಲಾಗಿತ್ತು. 78 ಸೂಚಕಗಳ ಆಧಾರದಲ್ಲಿ 100 ಅಂಕಗಳ ಗುರಿಯಿಟ್ಟುಕೊಂಡು ನಗರಗಳ ಮೌಲ್ಯಮಾಪನ ಮಾಡಲಾಗಿತ್ತು. ಸಾಂಸ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಮಾನದಂಡಗಳು ತಲಾ 25 ಅಂಕಗಳನ್ನು ಹೊಂದಿದ್ದರೆ, ದೈಹಿಕ ಮೂಲಸೌಕರ್ಯ ಮಾನದಂಡಕ್ಕೆ ಗರಿಷ್ಠ 45 ಅಂಕಗಳನ್ನು ನೀಡಲಾಗಿತ್ತು. ಉಳಿದ ಐದು ಅಂಕ ಆರ್ಥಿಕ ಮಾನದಂಡವನ್ನು ಒಳಗೊಂಡಿತ್ತು.

ಸುಸ್ಥಿರ ಅಭಿವೃದ್ಧಿ ಗುರಿ

ಸುಸ್ಥಿರ ಅಭಿವೃದ್ಧಿ ಗುರಿ

ವಾಸಯೋಗ್ಯ ಸ್ಥಿತಿಯ ಅಧ್ಯಯನವು ಸುಸ್ಥಿರ ಅಭಿವೃದ್ಧಿ ಗುರಿಗೆ (ಎಸ್‌ಡಿಜಿ) ಹೆಚ್ಚು ನಂಟು ಹೊಂದಿದ್ದು, ನಗರ ಪ್ರದೇಶಗಳಲ್ಲಿ ಎಸ್‌ಡಿಜಿಯ ಪ್ರಗತಿಯನ್ನು ವ್ಯವಸ್ಥಿತವಾಗಿ ಗುರುತಿಸುವ ಪ್ರಯತ್ನಕ್ಕೆ ನೆರವಾಗಲಿದೆ.

ಜತೆಗೆ, ನಗರ ಯೋಜನೆಗಳು ಹಾಗೂ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಲು ನಗರಗಳಿಗೆ ಉತ್ತೇಜನ ನೀಡುವ ಸಲುವಾಗಿ ರಾಷ್ಟ್ರಮಟ್ಟದ ಮಾನದಂಡ ರೂಪಿಸಲು ಈ ಅಧ್ಯಯನ ನಡೆಸಲಾಗಿದೆ.

ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ ಭಾರತದ 14 ನಗರಗಳು!ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ ಭಾರತದ 14 ನಗರಗಳು!

English summary
Urban Affairs Ministry has released the Livability Index of 111 major cities In india. Pune, Navi Mumbai and Greater Mumbai are the most livable cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X