ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವರ್ ಫುಲ್ ಪಾಸ್ ಪೋರ್ಟ್: ಜಪಾನ್ ನಂ.1, ಭಾರತ 71ನೇ ಸ್ಥಾನ

|
Google Oneindia Kannada News

ಬೆಂಗಳೂರು, ಜನವರಿ 18: ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಕಳಪೆ ಪಾಸ್ ಪೋರ್ಟ್ ಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸತತ ಎರಡನೇ ಬಾರಿಗೆ ಏಷ್ಯಾ ಖಂಡದ ದೇಶವು ಪವರ್ ಫುಲ್ ಪಾಸ್ ಪೋರ್ಟ್ ಹೊಂದಿರುವ ಹೆಗ್ಗಳಿಕೆಗೆ ಹೊಂದಿದೆ. ಕಳೆದ ವರ್ಷ ಸಿಂಗಾಪುರಕ್ಕೆ ಸಿಕ್ಕಿದ್ದ ಮನ್ನಣೆ ಈ ಬಾರಿ ಜಪಾನ್ ಗೆ ಸಿಕ್ಕಿದೆ.

ಜಾಗತಿಕ ಮಟ್ಟದ ಸಂಸ್ಥೆ ಹೆನ್ಲೇ ಪಾಸ್ ಪೋರ್ಟ್ ಸೂಚಿ, ನೀಡಿರುವ ಅಂಕಿ ಅಂಶದಂತೆ ಭಾರತದ ಪಾಸ್ ಪೋರ್ಟ್ ಗೆ 71ನೇ ಸ್ಥಾನ ದೊರೆತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 8 ಸ್ಥಾನ ಕುಸಿದಿದೆ.

ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ? ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?

ಅಂತಾರಾಷ್ಟ್ರೀಯ ವಿಮಾನಯಾನ ಪ್ರಾಧಿಕಾರ(ಐಎಟಿಎ) ಸುಮಾರು 227 ತಾಣಗಳಿಂದ ಮಾಹಿತಿ ಸಂಗ್ರಹಿಸಿ 199 ಪಾಸ್ ಪೋರ್ಟ್ ಗಳನ್ನು ಹೋಲಿಸಿ, ಅಂಕಿ ಅಂಶ ನೀಡಲಿದೆ.

ಪಾಸ್ ಪೋರ್ಟ್ ನವೀಕರಣ ಮಾಡಿಕೊಳ್ಳುವುದು ಹೇಗೆ? ಪಾಸ್ ಪೋರ್ಟ್ ನವೀಕರಣ ಮಾಡಿಕೊಳ್ಳುವುದು ಹೇಗೆ?

ಜಗತ್ತಿನ ಮೊದಲ ಹತ್ತು ಪ್ರಭಾವಿ ಪಾಸ್ ಪೋರ್ಟ್ ಗಳ ಪಟ್ಟಿಯಲ್ಲಿ ಜಪಾನ್ ಮುಂದಿದ್ದು, 190 ದೇಶಗಳ ಸಂಪರ್ಕ ಸಾಧ್ಯವಿದೆ. ಭಾರತದ ಪಾಸ್ ಪೋರ್ಟ್ ಈ ಬಾರಿ 79ನೇ ಸ್ಥಾನದಲ್ಲಿದ್ದು, 61 ದೇಶಗಳಿಗೆ ಮಾತ್ರ ಸಂಪರ್ಕ ಸಾಧ್ಯವಾಗಲಿದೆ.

543 ಸಂಸದೀಯ ಕ್ಷೇತ್ರಗಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ 543 ಸಂಸದೀಯ ಕ್ಷೇತ್ರಗಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ

ಸಿಂಗಪುರ ಹಾಗೂ ದಕ್ಷಿಣ ಕೊರಿಯಾ 189 ದೇಶಗಳ ಸಂಪರ್ಕ ಸಾಧ್ಯವಾಗಿಸಿದ್ದು ಎರಡನೇ ಸ್ಥಾನದಲ್ಲಿವೆ. ಅಫ್ಘಾನಿಸ್ತಾನ ಹಾಗೂ ಇರಾಕ್ (104) ಮತ್ತೊಮ್ಮೆ ಕಳಪೆ ಪಾಸ್ ಪೋರ್ಟ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಪಾಕಿಸ್ತಾನ 102 ಸ್ಥಾನದಲ್ಲಿದ್ದು, 33 ದೇಶಗಳಿಗೆ ಮಾತ್ರ ಸಂಪರ್ಕ ಸಾಧ್ಯವಾಗಲಿದೆ.

Most powerful and worst passports of 2019 revealed
English summary
The country with the world's most powerful passport in 2019 is ... Japan. Again. That's the view of the Henley Passport Index. The Indian passport has been ranked as the 79th most powerful in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X