ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದ ಸಿಎಂ ಸೋದರಿಗೆ ಒಲಿಯುವುದೇ ಶಿವಪುರಿ ಕ್ಷೇತ್ರ

|
Google Oneindia Kannada News

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಮತ್ತೊಂದು ಕ್ಷೇತ್ರವೆಂದರೆ ಅದು ಶಿವಪುರಿ ಕ್ಷೇತ್ರ.

1957ರಿಂದ ಇಲ್ಲಿ ತನಕದ 13 ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 3 ಬಾರಿ, ಬಿಜೆಪಿ 5 ಹಾಗೂ ಇತರೆ ಪಕ್ಷಗಳು 5 ಬಾರಿ ಗೆಲುವು ಸಾಧಿಸಿವೆ.

ಮಂದಸೌರ್ ಕ್ಷೇತ್ರ ಪರಿಚಯ : ರೈತರ ಹಿತ ಕಾಪಾಡಿದವನೇ ಇಲ್ಲಿ ಒಡೆಯ!ಮಂದಸೌರ್ ಕ್ಷೇತ್ರ ಪರಿಚಯ : ರೈತರ ಹಿತ ಕಾಪಾಡಿದವನೇ ಇಲ್ಲಿ ಒಡೆಯ!

ಶೇ90ರಷ್ಟು ಹಿಂದುಗಳನ್ನು ಹೊಂದಿರುವ ಶೇ 52ರಷ್ಟು ನಗರ ಪ್ರದೇಶವನ್ನು ಹಾಗೂ ಶೇ 48ರಷ್ಟು ಗ್ರಾಮೀಣಭಾಗವನ್ನು ಹೊಂದಿದೆ. ಸಾಕ್ಷರತೆ ಪ್ರಮಾಣ ಶೇ 67ರಷ್ಟಿದೆ.

35 ರಿಂದ 60 ವಯೋಮಿತಿ ಅವರು ಶೇ 41.52ರಷ್ಟಿದ್ದಾರೆ. 2,30,521 ಮತದಾರರು ನೀಡುವ ಫಲಿತಾಂಶ ಡಿಸೆಂಬರ್ 11ರಂದು ತಿಳಿಯಲಿದೆ. ಬಿಜೆಪಿ ನಾಯಕಿ ಯಶೋಧರಾ ರಾಜೇ ಸಿಂಧಿಯಾ ಅವರು ಹಾಲಿ ಶಾಸಕಿಯಾಗಿದ್ದಾರೆ. 2013ರಲ್ಲಿ ಕಾಂಗ್ರೆಸ್ಸಿನ ಬಿ ರಘುವಂಶಿ ಅವರನ್ನು ಸೋಲಿಸಿದ್ದರು.

ಈ ಬಾರಿ ಯಶೋಧರಾ ರಾಜೇ ಸಿಂಧಿಯಾ ಅವರ ವಿರುದ್ಧ ಕಾಂಗ್ರೆಸ್ಸಿನಿಂದ ಸಿದ್ಧಾರ್ಥ್ ಲಾಡಾ ಅವರು ಸ್ಪರ್ಧಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ! ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!

ಯಶೋಧರಾ ರಾಜೇ : ಸಿಂಧಿಯಾ ರಾಜಮನೆತನದ ಯಶೋಧರಾ ಅವರು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ಅವರ ಸೋದರಿ.

ನಕ್ಸಲ್ ಪೀಡಿತ ಕ್ಷೇತ್ರದಲ್ಲಿ ಸಿಎಂ ಬಾಮೈದ ಸಂಜಯ್ ಗೆಲ್ಲುವರೇ?
ಮಧ್ಯಪ್ರದೇಶದ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥ ಜೋತಿರಾದಿತ್ಯಾ ಸಿಂಧಿಯಾ ಅವರ ಸಂಬಂಧಿ, ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ವಾಣಿಜ್ಯ, ಕೈಗಾರಿಕೆ, ಉದ್ಯೋಗ ಖಾತೆ ಸಚಿವೆ, ಕೈಗಾರಿಕಾ ಅಭಿವೃದ್ಧಿ ನಿಗಮದ ಮುಖ್ಯಸ್ಥೆ.

1998 ಹಾಗೂ 2003ರಲ್ಲಿ ಗೆಲುವು ಸಾಧಿಸಿದ ಯಶೋಧರಾ ಅವರು ಕೂಡಾ ಶಿವರಾಜ್ ಸಿಂಗ್ ಅವರಂತೆ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ.

Madhya Pradesh election 2018 : Know Your Constituency Shivpuri
English summary
Know Your Constituency Shivpuri: The focus in Shivpuri is on Yashodhara Raje Scindia. Yashodhara is also the aunt of Congress’ Madhya Pradesh campaign chief Jyotiraditya Scindia and sister of Rajasthan Chief Minister Vasundhara Raje Scindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X