• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀರ್ಘಾವಧಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನಿತೀಶ್ ಕುಮಾರ್

|

ಭಾರತದಲ್ಲಿ ಅತಿ ಹೆಚ್ಚು ಬಾರಿ ಸಿಎಂ ಪಟ್ಟಕ್ಕೇರಿದವರು ದೀರ್ಘಾವಧಿ ಅಧಿಕಾರ ಕಂಡವರಾಗಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾದವರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಕರ್ನಾಟಕ ಸಿಎಂ ಯಡಿಯೂರಪ್ಪ ಅವರು ಒಮ್ಮೆ ಕೂಡಾ ಪೂರ್ಣಾವಧಿ ಅಧಿಕಾರ ಅನುಭವಿಸಿಲ್ಲದಿರುವುದು ವಿಶೇಷ ಜೊತೆಗೆ ಅಲ್ಪಾವಧಿ ಸಿಎಂಗಳ ಪಟ್ಟಿಯಲ್ಲೂ ಯಡಿಯೂರಪ್ಪ ಕಾಣಿಸಿಕೊಂಡ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಈ ನಡುವೆ ನವೆಂಬರ್ 16ರಂದು 7ನೇ ಬಾರಿಗೆ ಸಿಎಂ ಆಗಿ, ಸತತ 4ನೇ ಅವಧಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಅತಿ ಹೆಚ್ಚು ಬಾರಿ ಸಿಎಂ, ಅಲ್ಪಾವಧಿ ಸಿಎಂ ಯಡಿಯೂರಪ್ಪ ಸಾಧನೆ

ನಿತೀಶ್ ಕುಮಾರ್ ಅವರು ಈಗ ದೀರ್ಘಾವಧಿ ಅಧಿಕಾರ ಕಂಡ ಸಿಎಂಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಬಿಹಾರದಲ್ಲಿ ನಿತೀಶ್ ಅವರಿಗಿಂತ ಹೆಚ್ಚಿನ ಅವಧಿ ಸಿಎಂ ಆಗಿದ್ದವರಿದ್ದಾರೆ. ಶ್ರೀಕೃಷ್ಣ ಸಿನ್ಹಾ ಅವರು 1946 ಏಪ್ರಿಲ್ 2 ರಿಂದ 1964ರ ಜನವರಿ 31 ರ ತನಕ ಸಿಎಂ ಆಗಿದ್ದರು. ನಿತೀಶ್ ಅವರು ಬಿಹಾರದಲ್ಲಿ ಅತಿ ಹೆಚ್ಚು ಕಾಲಾವಧಿ ಸಿಎಂ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಆದರೆ, ಭಾರತದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸಿಎಂ ಆಗಿದ್ದವರ ಪಟ್ಟಿಯಲ್ಲಿ ಸಿಕ್ಕಿಂ ಸಿಎಂ ಪವನ್ ಕುಮಾರ್ ಚಮ್ಲಿಂಗ್ ಅಗ್ರಸ್ಥಾನದಲ್ಲಿದ್ದಾರೆ. 24.5 ವರ್ಷಗಳ ಸಿಕ್ಕಿ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಸಿಎಂ ಯಾರು?

ಅತಿ ಹೆಚ್ಚು ಕಾಲಾವಧಿ ಸಿಎಂ ಆಗಿದ್ದವರ ಪಟ್ಟಿ:

* ಪವನ್ ಕುಮಾರ್ ಚಮ್ಲಿಂಗ್ -ಸಿಕ್ಕಿಂ- 14 ವರ್ಷ 165 ದಿನಗಳು

* ಜ್ಯೋತಿ ಬಸು -ಪಶ್ಚಿಮ ಬಂಗಾಳ-23 ವರ್ಷ 137 ದಿನಗಳು

* ಗೆಗೊಂಗ್ ಅಪಾಂಗ್ -ಅರುಣಾಚಲ ಪ್ರದೇಶ-22 ವರ್ಷ 8 ತಿಂಗಳು

* ಲಾಲ್ ಥನ್ಹಾವ್ಲಾ -ಮಿಜೋರಾಮ್-21 ವರ್ಷ 55 ದಿನಗಳು

* ವಿದರ್ಭ ಸಿಂಗ್- ಹಿಮಾಚಲ ಪ್ರದೇಶ- 21 ವರ್ಷ 11 ದಿನಗಳು

* ನವೀನ್ ಪಟ್ನಾಯಕ್*-ಒಡಿಶಾ-20 ವರ್ಷ 255 ದಿನಗಳು

* ಮಾನಿಕ್ ಸರ್ಕಾರ್ -ತ್ರಿಪುರಾ-19ವರ್ಷ 363 ದಿನಗಳು

* ಪ್ರಕಾಶ್ ಸಿಂಗ್ ಬಾದಲ್-ಪಂಜಾಬ್-18 ವರ್ಷ 350 ದಿನಗಳು

* ಎಂ ಕರುಣಾನಿಧಿ-ತಮಿಳುನಾಡು-18 ವರ್ಷ 293 ದಿನಗಳು

* ಯಶವಂತ್ ಸಿಂಗ್ ಪಾರ್ಮಾರ್-ಹಿಮಾಚಲ ಪ್ರದೇಶ-18 ವರ್ಷ 30 ದಿನಗಳು

* ಮೋಹನ್ ಲಾಲ್ ಸುಖಾಡಿಯಾ-ರಾಜಸ್ಥಾನ-17 ವರ್ಷ 175 ದಿನಗಳು

* ಪ್ರತಾಪ್ ಸಿಂಗ್ ರಾಣೆ-ಗೋವಾ-15 ವರ್ಷ 250 ದಿನಗಳು

* ಎಸ್ . ಸಿ ಜಾಮೀರ್- ನಾಗಾಲ್ಯಾಂಡ್- 15 ವರ್ಷ 200 ದಿನಗಳು

* ಶೀಲಾ ದೀಕ್ಷಿತ್-ದೆಹಲಿ-15 ವರ್ಷ 25 ದಿನಗಳು

* ಓಕ್ರಾಂ ಐಬೊಬಿ ಸಿಂಗ್-ಮಣಿಪುರ-15 ವರ್ಷ 8 ದಿನಗಳು

* ತರುಣ್ ಗೊಗಾಯಿ-ಅಸ್ಸಾಂ-15 ವರ್ಷ 7 ದಿನಗಳು

* ರಮಣ್ ಸಿಂಘ್-ಛತ್ತೀಸ್ ಗಢ-15 ವರ್ಷ 4 ದಿನಗಳು

* ಶ್ರೀಕೃಷ್ಣ ಸಿನ್ಹಾ-ಬಿಹಾರ-14 ವರ್ಷ 304 ದಿನಗಳು

* ಬಿ.ಸಿ ರಾಯ್-ಪಶ್ಚಿಮ ಬಂಗಾಳ-14 ವರ್ಷ 159 ದಿನಗಳು

* ಜೆ ಜಯಲಲಿತಾ-ತಮಿಳುನಾಡು-14 ವರ್ಷ 126 ದಿನಗಳು

* ವಿಲಿಯಮ್ಸನ್ ಎ ಸಂಗ್ಮಾ-ಮೇಘಾಲಯ-14 ವರ್ಷ 87ದಿನಗಳು

* ನಿತೀಶ್ ಕುಮಾರ್*-ಬಿಹಾರ-14 ವರ್ಷ 82 ದಿನಗಳು

English summary
Nitish kumar sworn in as CM of Bihar for the seventh time and now he is listed on longest-serving Chief ministers of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X