ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಕರ್ನಾಟಕ ಮುಖ್ಯಮಂತ್ರಿ ಪೀಠವನ್ನು ಅಲಂಕರಿಸಿದವರ ಪಟ್ಟಿ

|
Google Oneindia Kannada News

ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದಾಗಿನಿಂದ ಕೆ.ಸಿ.ರೆಡ್ಡಿಯವರಿಂದ ಹಿಡಿದು ಬಿ.ಎಸ್.ಯಡಿಯೂರಪ್ಪವರೆಗೆ ಹಲವು ಕರ್ನಾಟಕದ ಜನಪ್ರತಿನಿಧಿಗಳು ಮುಖ್ಯಮಂತ್ರಿ ಪೀಠವನ್ನು ಅಲಂಕರಿಸಿದ್ದಾರೆ. ಬಿಜೆಪಿ ನಾಯಕ ಯಡಿಯೂರಪ್ಪ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 2 ವರ್ಷ ಅವಧಿ ಪೂರೈಸಿದ ಸಂಭ್ರಮದ ನಡುವೆ ತಮ್ಮ ಸ್ಥಾನಕ್ಕೆ ಜುಲೈ 26, 2021ರಂದು ರಾಜೀನಾಮೆ ನೀಡಿದ್ದಾರೆ. ನಾಲ್ಕು ಬಾರಿ ಸಿಎಂ ಸ್ಥಾನಕ್ಕೇರಿದರೂ ಒಮ್ಮೆ ಕೂಡಾ ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಲು ಸಾಧ್ಯವಾಗಲಿಲ್ಲ.

ಕರ್ನಾಟಕ ಎಂಬ ಹೆಸರು ಅಧಿಕೃತಗೊಳ್ಳುವುದಕ್ಕೂ ಮುನ್ನ ಮೈಸೂರು ಹಾಗೂ ಕೊಡಗು ರಾಜ್ಯ ಕೂಡಾ ಸಿಎಂಗಳನ್ನು ಕಂಡಿದೆ. 1947ರಲ್ಲಿ ಮೈಸೂರು ರಾಜ್ಯಕ್ಕೆ ಕೆ ಚೆಂಗಲರಾಯ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದರು. ನಂತರ ಕೆಂಗಲ್ ಹನುಮಂತಯ್ಯ ಹಾಗೂ ಕಡಿದಾಳ್ ಮಂಜಪ್ಪ ಅವರು ಸಿಎಂ ಆಗಿದ್ದರು. ಕೊಡಗು ರಾಜ್ಯಕ್ಕೆ ಪೂಣಚ 1952ರಲ್ಲಿ ಸಿಎಂ ಆಗಿದ್ದರು.

ದೀರ್ಘಾವಧಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನಿತೀಶ್ ಕುಮಾರ್ದೀರ್ಘಾವಧಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನಿತೀಶ್ ಕುಮಾರ್

ಮೊದಲ ವಿಧಾನಸಭೆ ಅಧಿವೇಶನ ಎದುರಿಸಿದವರು ಸಿಎಂ ಎಸ್ ನಿಜಲಿಂಗಪ್ಪನವರು. ಕಾಂಗ್ರೆಸ್ ಪಕ್ಷದಿಂದ ಅತಿ ಹೆಚ್ಚು ಸಿಎಂಗಳಾಗಿದ್ದಾರೆ. ದೀರ್ಘಾವಧಿ ಸಿಎಂಗಳ ಪಟ್ಟಿಯಲ್ಲಿ ಕಾಂಗ್ರೆಸ್ಸಿನ ದೇವರಾಜ ಅರಸು, ಸಿದ್ದರಾಮಯ್ಯ, ಜನತಾ ಪಾರ್ಟಿಯ ರಾಮಕೃಷ್ಣ ಹೆಗಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಿಎಂ ಆಗಿ 18 ವರ್ಷ ಬಳಿಕ ಮತ್ತೊಮ್ಮೆ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದು ವಿಶೇಷ.

ಎಚ್. ಡಿ ದೇವೇಗೌಡ ಅವರು ಸಿಎಂ ಸ್ಥಾನದಿಂದ ಪಿಎಂ ಸ್ಥಾನಕ್ಕೇರಿದರು. ಬಿ. ಡಿ ಜತ್ತಿ ಅವರು ಉಪರಾಷ್ಟ್ರಪತಿಯಾದರು. ಕರ್ನಾಟಕದಲ್ಲಿ ಒಟ್ಟು 6 ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿ ತನಕ ಮುಖ್ಯಮಂತ್ರಿಯಾದವರ ಇನ್ಫೋಗ್ರಾಫಿಕ್ಸ್ ಇಲ್ಲಿದೆ.. ಚಿತ್ರ ವಿನ್ಯಾಸ: ಭರತ್ ಎಚ್. ಸಿ.

List of Chief Ministers of Karnataka & Their Service Periods (1947 to 2021)
English summary
Chief Ministers of Karnataka List: Here is the List of Chief Ministers of Karnataka & Their Service Periods (1947 to 2021). Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X