• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇರಳದಲ್ಲಿ ಅತಿ ಹೆಚ್ಚು, ಅತಿ ಕಡಿಮೆ ಅಂತರದಲ್ಲಿ ಗೆಲುವು ಯಾರಿಗೆ?

|
Google Oneindia Kannada News

ಕೇರಳದೆಲ್ಲೆಡೆ ಕೆಂಪು ಬಾವುಟ ಜೋರಾಗಿದೆ. ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆದಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಿದೆ.

ವಿಜಯನ್ ನೇತೃತ್ವದ ಎಲ್‌ಡಿಎಫ್ 99 ಸ್ಥಾನ, ಯುಡಿಎಫ್ 41 ಸ್ಥಾನ ಗಳಿಸಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. 2016ರಲ್ಲಿಎಲ್‌ಡಿಎಫ್ 91 ಸ್ಥಾನ, ಯುಡಿಎಫ್ 47 ಸ್ಥಾನ, ಎನ್‌ಡಿಎ 1 ಹಾಗೂ ಇತರೆ 1 ಸ್ಥಾನ ಎಂದು ಫಲಿತಾಂಶ ಬಂದಿತ್ತು.

ಕಡಿಮೆ ಅಂತರದಲ್ಲಿ ಸೋಲು ಕಂಡ ಅಭ್ಯರ್ಥಿಗಳು, ಪಕ್ಷ ಯಾರ ವಿರುದ್ಧ ಯಾವ ಕ್ಷೇತ್ರದಲ್ಲಿ ಎಂಬುದರ ಗ್ರಾಫಿಕ್ಸ್ ಇಲ್ಲಿದೆ ನೋಡಿ..

{document1}

ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಅವರು ಮತ್ತೊಮ್ಮೆ ಅತ್ಯಂತ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ. ಕಳೆದ ಬಾರಿ 89 ಮತಗಳ ಅಂತರದಲ್ಲಿ ಸೋತಿದ್ದ ಸುರೇಂದ್ರನ್ ಈ ಬಾರಿ ಮುಸ್ಲೀಂ ಲೀಗ್ ಅಭ್ಯರ್ಥಿ ಅಶ್ರಫ್ ವಿರುದ್ಧ 745 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಆದರೆ, ಅತಿ ಕಡಿಮೆ ಅಂತರದ ಸೋಲು ಕಂಡಿರುವುದು ಕೆ.ಪಿ.ಎಂ ಮುಸ್ತಫಾ. ಮುಸ್ಲಿಂ ಲೀಗ್‌ನ ನಜೀಬ್ ಕೆ ಅವರು ಪಕ್ಷೇತರ ಅಭ್ಯರ್ಥಿ ಮುಸ್ತಫಾರನ್ನು ಪೆರಿಂಥಲ್ಮನ್ನಾದಲ್ಲಿ ಕೇವಲ 38 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕೇರಳದಲ್ಲಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದವರು: ಈ ಪೈಕಿ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ರಾಜ್ಯದಲ್ಲೇ ಅತ್ಯಧಿಕ ಅಂತರ(60, 953 ಮತ)ದಿಂದ ಸಮೀಪದ ಪ್ರತಿಸ್ಪರ್ಧಿ ಆರ್ ಸಿಪಿಯ ಇಲ್ಲಿಕಲ್ ಅಗಸ್ಟಿ ಅವರನ್ನು ಸೋಲಿಸಿದ್ದಾರೆ. ಸಿಎಂ ಪಿಣರಾಯಿ ವಿಜಯನ್ ಅವರು ಧರ್ಮದಂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಿ ರಘುನಾಥ್ ಅವರನ್ನು 50,123 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಪಿಣರಾಯಿ ವಿಜಯನ್
Know all about
ಪಿಣರಾಯಿ ವಿಜಯನ್

ಮಿಕ್ಕಂತೆ, ಸಿಪಿಎಂನ ಮಧುಸೂದನ್ ಪಯ್ಯನೂರ್ ಕ್ಷೇತ್ರದಲ್ಲಿ 49, 780 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಪ್ರದೀಪ್ ಕುಮಾರ್ ಅವರನ್ನು ಸೋಲಿಸಿದ್ದಾರೆ. ಕಲ್ಲಿಯಚ್ಚೇರಿಯಲ್ಲಿಸಿಪಿಎಂನ ವಿಜಿನ್ ಅವರು ಕಾಂಗೆಸ್ ಪಕ್ಷದ ಬ್ರಿಜೇಶ್ ಕುಮಾರ್ ಅವರನ್ನು 44,393ಮತಗಳ ಅಂತರದಿಂದ ಸೋಲಿಸಿದ್ದಾರೆ.

English summary
Kerala assembly election results 2021: Here is the party wise Smallest and biggest victory margins in Kerala polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X